/newsfirstlive-kannada/media/post_attachments/wp-content/uploads/2025/06/Jindal-Shares.jpg)
ನಾವು ಕೆಲವೊಂದು ಸಿನಿಮಾಗಳಲ್ಲಿ ನೋಡಿದ್ದೇವೆ. ಮನೆಯ ಕಸ ಗುಡಿಸುವಾಗ ಮರೆತು ಹೋದ ಚಿನ್ನದ ನಿಧಿಯೊಂದು ಸಿಗುತ್ತೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಗೆ ಮನೆಯಲ್ಲೇ ಚಿನ್ನದ ನಿಧಿಯ ಮೌಲ್ಯದ ಷೇರು ಸರ್ಟಿಫಿಕೇಟ್ ಗಳು ಸಿಕ್ಕಿವೆ. ಷೇರುಗಳ ಈಗಿನ ಮಾರುಕಟ್ಟೆ ಮೌಲ್ಯ ಬರೋಬ್ಬರಿ 80 ರಿಂದ 85 ಕೋಟಿ ರೂಪಾಯಿ. ರಾತ್ರೋರಾತ್ರಿ ವ್ಯಕ್ತಿ ಶ್ರೀಮಂತನಾಗಿದ್ದಾನೆ. ಮೂರು ತಲೆಮಾರು ಕೂತು ತಿಂದರೂ, ಈ ಸಂಪತ್ತು ಕರಗಲ್ಲ. ಇದು ಹೇಗಾಯ್ತು? ಆ ಅದೃಷ್ಟಶಾಲಿ ವ್ಯಕ್ತಿ ಯಾರು ಅನ್ನೋದಕ್ಕೆ ಈ ಸ್ಟೋರಿ ಓದಿ.
ಸೌರವ್ ದತ್ತಾ ಎಂಬುವವರು, ರೆಡ್ಡೀಟ್‌ನಲ್ಲಿ ವ್ಯಕ್ತಿಯೊಬ್ಬರು ಬರೆದ ಕಥೆಯನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ JSW ವಿಜಯನಗರ ಕಂಪನಿಯ ಷೇರುಗಳ ಹಳೆಯ ಪೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ವ್ಯಕ್ತಿಯೊಬ್ಬರಿಗೆ ತಮ್ಮ ಮನೆಯನ್ನು ಕ್ಲೀನ್ ಮಾಡುವಾಗ 35 ವರ್ಷ ಹಳೆಯ ದಾಖಲೆಗಳು ಸಿಕ್ಕಿವೆ. ಅವುಗಳನ್ನು ಪ್ರಯೋಜನಕ್ಕೆ ಬಾರದ ದಾಖಲೆಗಳು ಎಂದು ಅಂದುಕೊಂಡಿದ್ದರಂತೆ.
ಆದರೆ, ಬಳಿಕ ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, 1990ರ ದಶಕದ ಕಂಪನಿಯೊಂದರ ಷೇರುಗಳು ಎಂದು ಗೊತ್ತಾಗಿದೆ. ಆಗ ಅವರ ತಂದೆ 1 ಲಕ್ಷ ರೂಪಾಯಿಗೆ ಈ ಷೇರುಗಳನ್ನು ಖರೀದಿಸಿದ್ದರು. ಆ ಕಂಪನಿಯ ಲಾಭಾಂಶಗಳನ್ನು ಸೇರಿಸಿ ಕಂಪನಿಯ ಷೇರುಗಳ ಮೌಲ್ಯವನ್ನು ಲೆಕ್ಕ ಹಾಕಿದಾಗ, ಈಗ ಆ ಷೇರುಗಳು ಬರೋಬ್ಬರಿ 85 ಕೋಟಿ ರೂಪಾಯಿ ಎಂದು ಗೊತ್ತಾಗಿದೆ. ಇದನ್ನು ಕಂಡು ಆ ವ್ಯಕ್ತಿಯೇ ದಂಗಾಗಿದ್ದಾರೆ.
ಅವರ ತಂದೆ, ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್‌ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಷೇರುಗಳನ್ನ ಖರೀದಿಸಿದ್ದರು. ಇದನ್ನು ಮಗನಿಗೆ ಹೇಳದೇ ತೀರಿಕೊಂಡಿದ್ದರು. ಆದರೇ, ಮನೆಯಲ್ಲಿ ಷೇರು ಪತ್ರಗಳು ಮಾತ್ರ ಭದ್ರವಾಗಿದ್ದವು. ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ ನಲ್ಲಿ ಖರೀದಿಸಿರುವ ಷೇರುಗಳು ಈಗ ಅನಿರೀಕ್ಷಿತ ಚಿನ್ನದ ಗಣಿಯಾಗಿ ಪರಿವರ್ತನೆಯಾಗಿವೆ.
ಇದನ್ನೂ ಓದಿ: ಹನಿಮೂನ್‌ಗೆ ಒನ್ ವೇ ಟಿಕೆಟ್; ಮೇಘಾಲಯದಲ್ಲಿ ‘ಬಾ ನಲ್ಲ ಮಧುಚಂದ್ರಕೆ’ ಹೈಡ್ರಾಮಾ ಹೇಗಿತ್ತು?
2005ರಲ್ಲಿ JSW ಕಂಪನಿಯು JSW ಸ್ಟೀಲ್ ಕಂಪನಿಯೊಂದಿಗೆ ವಿಲೀನವಾಯಿತು. ಇದರಿಂದ ಕಂಪನಿಯ ಷೇರುಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆ ವ್ಯಕ್ತಿಯ ತಂದೆ ಕಂಪನಿಯ 5 ಸಾವಿರ ಷೇರುಗಳನ್ನು 1 ಲಕ್ಷ ರೂಪಾಯಿಗೆ ಖರೀದಿಸಿದ್ದರು. ಕಂಪನಿಯ ವಿಲೀನದ ನಂತರ ಆ ಷೇರುಗಳು 80 ಸಾವಿರ JSW ಸ್ಟೀಲ್ ಕಂಪನಿಯ ಷೇರುಗಳಾಗಿ ಪರಿವರ್ತನೆಯಾಗಿವೆ.
2017ರಲ್ಲಿ ಷೇರು ವಿಭಜನೆಯ ನಂತರ 1:10 ಅನುಪಾತದಲ್ಲಿ ಷೇರುಗಳ ಸಂಖ್ಯೆ 8 ಲಕ್ಷ ಷೇರುಗಳಾಗಿ ಏರಿಕೆಯಾಯಿತು. ಈ 8 ಲಕ್ಷ ಷೇರುಗಳ ಮೌಲ್ಯ ಈಗಿನ ಮಾರುಕಟ್ಟೆ ಮೌಲ್ಯ ಬರೋಬ್ಬರಿ 80 ಕೋಟಿ ರೂಪಾಯಿ ಆಗಿದೆ.
ಪ್ರಸ್ತುತ ಜೆಎಸ್ ಡಬ್ಲ್ಯು ಷೇರಿನ ಮೌಲ್ಯ ಈಗ 1 ಸಾವಿರ ರೂಪಾಯಿ ಇದೆ. ಹೀಗಾಗಿ 8 ಲಕ್ಷ ಷೇರುಗಳ ಮೌಲ್ಯ 80 ಕೋಟಿ ರೂಪಾಯಿ ಆಗಿದೆ. ಇನ್ನೂ ಕಂಪನಿಯು ಲಾಭಾಂಶವನ್ನು ತನ್ನ ಷೇರುದಾರರಿಗೆ ನೀಡಿದೆ. ಪ್ರತಿ ಷೇರಿಗೆ 17.30 ರೂಪಾಯಿ ಲಾಭಾಂಶ ನೀಡಿದೆ. ಈ ಲಾಭಾಂಶವನ್ನು 8 ಲಕ್ಷ ಷೇರುಗಳಿಗೆ ಲೆಕ್ಕ ಹಾಕಿದರೇ, 5 ಕೋಟಿ ರೂಪಾಯಿ ಸಿಗಲಿದೆ. ಹೀಗಾಗಿ ಆ ವ್ಯಕ್ತಿಗೆ ಬರೋಬ್ಬರಿ 85 ಕೋಟಿ ರೂಪಾಯಿ ಸಿಗಲಿದೆ.
ತಂದೆಯು ಖರೀದಿಸಿದ್ದ ಷೇರುಗಳನ್ನು ಈಗ ಪಡೆಯ ವ್ಯಕ್ತಿ ಧೀಡೀರನೇ ಈಗ 85 ಕೋಟಿ ರೂಪಾಯಿ ಒಡೆಯರಾಗಿದ್ದಾರೆ. ಜೀವನದಲ್ಲಿ ನೆಮ್ಮದಿಯ ಕಾಲ ಕಳೆಯಲು ಇದಕ್ಕಿಂತ ಇನ್ನೇನು ಬೇಕು ಹೇಳಿ.
ಈ 85 ಕೋಟಿ ರೂಪಾಯಿಗೆ ನೀವು ಶೇ.30ರಷ್ಟು ಆದಾಯ ತೆರಿಗೆ ಪಾವತಿಸಬೇಕಾಗುತ್ತೆ ಎಂದು ಕೆಲವರು ರೆಡ್ಡೀಟ್‌ನಲ್ಲಿ ತಮಾಷೆ ಮಾಡಿದ್ದಾರೆ. ಇನ್ನೂ ಕೆಲವರು 1990ರಲ್ಲಿ ನಮ್ಮ ತಂದೆಗೆ 800 ರೂಪಾಯಿ ವೇತನ ಬರುತ್ತಿತ್ತು. ಆದರೇ, ನಿಮ್ಮ ತಂದೆ ಆಗಲೇ ಒಂದು ಲಕ್ಷ ರೂಪಾಯಿ ಹಣವನ್ನು ಷೇರುನಲ್ಲಿ ಹೂಡಿಕೆ ಮಾಡಿದ್ದಾರೆ ಅಂದರೆ ಆಗಲೂ ನೀವು ಸೂಪರ್ ಶ್ರೀಮಂತರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ