3 ದಿನದಲ್ಲಿ 850 ಮಂದಿ ಭಾರತೀಯರು ವಾಪಸ್.. ಭಾರತ ತೊರೆದ ಪಾಕಿಸ್ತಾನೀಯರ ಸಂಖ್ಯೆ ಎಷ್ಟು..?

author-image
Veena Gangani
Updated On
ಮುಯ್ಯಿಗೆ ಮುಯ್ಯಿ.. ಪಾಕಿಸ್ತಾನಕ್ಕೆ ಈಗ ಏರ್​ಸ್ಟ್ರೈಕ್ ಆಘಾತ; ನಿನ್ನೆ ಭಾರತ ಏನ್ಮಾಡಿದೆ ಗೊತ್ತಾ..?
Advertisment
  • ಪಾಕಿಸ್ತಾನದಿಂದ ಕಳೆದ 3 ದಿನಗಳಲ್ಲಿ 850 ಭಾರತೀಯರ ವಾಪಸ್
  • ಇನ್ನೂ ಕರ್ನಾಟಕದಲ್ಲೇ ಉಳಿದುಕೊಂಡ 91 ಜನ ಪಾಕ್ ಪ್ರಜೆಗಳು
  • ಅಟಾರಿ-ವಾಘಾ ಗಡಿ ಮೂಲಕ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನ ಆಚೆಗೆ

ಇಂಡಿಯಾ ಮತ್ತು ಪಾಕ್​ ಮಧ್ಯೆ ಗಡಿ ಬಂದ್​ ಆಗಿದೆ. ಎರಡು ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಇದೀಗ ಭಾರತದಲ್ಲಿರೋ ಪಾಕಿಸ್ತಾನ ಪ್ರಜೆಗಳು ತಮ್ಮ ದೇಶಕ್ಕೆ ವಾಪಸ್ ಆಗಲು ಡೆಡ್‌ಲೈನ್ ಮುಗಿದಿದೆ. ನೂರಾರು ಪಾಕ್ ಪ್ರಜೆಗಳು ಭಾರತ ಬಿಟ್ಟು ವಾಪಸ್ ಮರಳುತ್ತಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್​ ವೀಕ್ಷಕರಿಗೆ ಶಾಕಿಂಗ್ ಸುದ್ದಿ;​ ಆರಂಭಕ್ಕೂ ಮುನ್ನವೇ ಶೋಗೆ ಭಾರೀ ಸಂಕಷ್ಟ!

publive-image

ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿರೋ ದುಷ್ಕೃತ್ಯಕ್ಕೆ ಪಾಕಿಸ್ತಾನ ದಂಡ ತೆರಳೇಬೇಕಿದೆ. ಪಾಕಿಸ್ತಾನದ ಪ್ರಜೆಗಳಿಗೂ ಇದರ ಎಫೆಕ್ಟ್ ತಟ್ಟಿದೆ. ದೇಶದಲ್ಲಿ ನೆಲೆಸಿರೋ ಪಾಕಿಸ್ತಾನ ಪ್ರಜೆಗಳು ತಕ್ಷಣವೇ ದೇಶ ತೊರೆಯಬೇಕಾದ ಸ್ಥಿತಿ ಬಂದಿದೆ. ಕೇಂದ್ರ ಸರ್ಕಾರ ಕೊಟ್ಟಿದ್ದ ಡೆಡ್‌ಲೈನ್ ನಿನ್ನೆಗೆ ಮುಕ್ತಾಯವಾಗಿದೆ. ಈಗಾಗಲೇ ನೂರಾರು ಪಾಕ್‌ನ ಜನರು ಗಂಟು ಮೂಟೆ ಸಮೇತ ವಾಪಸ್ ತೆರಳಿದ್ದಾರೆ. ಇನ್ನೂ ನೂರಾರು ಜನ ದೇಶದಲ್ಲೇ ಇದ್ದಾರೆ.

publive-image

537 ಪಾಕಿಗಳು ವಾಪಸ್!

ಪಾಕ್​ ನಾಗರಿಕರು ವಾಪಸ್ ಹೋಗಲು ಕೊಟ್ಟಿದ್ದ ಗಡುವು ನಿನ್ನೆಗೆ ಅಂತ್ಯವಾಗಿದೆ. ಇದರ ಮಧ್ಯೆ ಕಳೆದ 3 ದಿನಗಳಲ್ಲಿ 537 ಪಾಕಿಸ್ತಾನಿ ಪ್ರಜೆಗಳು ಭಾರತದಿಂದ ವಾಪಸ್ ತೆರಳಿದ್ದಾರೆ. ಕರ್ನಾಟಕದಲ್ಲಿ ಅಂದ್ರೆ ಬೆಂಗಳೂರಲ್ಲಿ ಇದ್ದ ನಾಲ್ವರು ಪಾಕಿಸ್ತಾನ ಪ್ರಜೆಗಳು ತಮ್ಮ ದೇಶಕ್ಕೆ ವಾಪಸ್ ಆಗಿದ್ದಾರೆ. ಕೇರಳದಲ್ಲಿ 104 ಪಾಕ್​ ಪ್ರಜೆಗಳಿದ್ದು, 99 ಮಂದಿ ದೀರ್ಘಾವಧಿ ವೀಸಾ ಹೊಂದಿದ್ದಾರೆ. ಹೀಗಾಗಿ ಕೇರಳದಿಂದ ಐವರು ಪಾಕಿಸ್ತಾನಿಯರು ದೇಶ ತೊರೆದಿದ್ದಾರೆ.

publive-image

ಇನ್ನೂ ಮಧ್ಯಪ್ರದೇಶದ 228 ಪಾಕಿಗಳು, ಒಡಿಶಾದಿಂದ 12 ಪಾಕಿಗಳು, ಗೋವಾದಿಂದ ಮೂವರು, ಗುಜರಾತ್​ನಿಂದ 7 ಜನ ತಮ್ಮ ದೇಶಕ್ಕೆ ಮರಳಿದ್ದಾರೆ. ತೆಲಂಗಾಣದಿಂದ 208, ಇದರಲ್ಲಿ 156 ದೀರ್ಘಾವಧಿ ವೀಸಾ, 13 ಅಲ್ಪಾವಧಿ ವೀಸಾ, 39 ವೈದ್ಯಕೀಯ, ವ್ಯವಹಾರದ ವೀಸಾ ಆಗಿದೆ. ಒಡಿಶಾದಿಂದ 12 ಮಂದಿ, ಬಿಹಾರದಿಂದ 19 ಪಾಕಿಗಳು ವಾಪಸ್ ಆಗಿದ್ದಾರೆ. ಉ.ಪ್ರದೇಶದಲ್ಲಿ ಓರ್ವ ಪ್ರಜೆ ಉಳಿದಿದ್ದು ಏ.30ರಂದು ವಾಪಸ್ ಆಗಲಿದ್ದಾರೆ. ಅಟಾರಿ-ವಾಘಾ ಗಡಿ ಮೂಲಕ ಪಾಕ್ ಪ್ರಜೆಗಳನ್ನ ಹೊರ ಕಳಿಸಲಾಗುತ್ತಿದೆ.

publive-image

ಪಾಕಿಸ್ತಾನದಿಂದ ಕಳೆದ 3 ದಿನಗಳಲ್ಲಿ 850 ಭಾರತೀಯರ ವಾಪಸ್ ಆಗಿದ್ದಾರೆ. ಇದರಲ್ಲಿ 13 ಮಂದಿ ರಾಜತಾಂತ್ರಿಕರು ಸೇರಿದ್ದಾರೆ. ಸದ್ಯ ಕರ್ನಾಟಕದಲ್ಲೇ 91 ಜನ ಪಾಕ್ ಪ್ರಜೆಗಳು ಉಳಿದುಕೊಂಡಿದ್ದಾರೆ. ಕರ್ನಾಟಕಕ್ಕೆ ಮದುವೆಯಾಗಿ 91 ಪಾಕ್ ಪ್ರಜೆಗಳು ಬಂದಿದ್ದು, ಇವರು ದೀರ್ಘಾವಧಿ ವೀಸಾ ಹೊಂದಿದ್ದಾರೆ. ಇವರು ಭಾರತ ಬಿಟ್ಟು ತೆರಳಲು ಯಾವುದೇ ಸೂಚನೆ ಇಲ್ಲ ಅಂತ ತಿಳಿದುಬಂದಿದೆ. ಪಹಲ್ಗಾಮ್​​ ದಾಳಿಗೆ ಪ್ರತೀಕಾರ.. ‘ಉಗ್ರ’ ಸಂಹಾರಕ್ಕೆ ಭಾರತ ಪಣ ತೊಟ್ಟಿದೆ. ಪಾಕಿಸ್ತಾನಕ್ಕೂ ನಡುಕ ಶುರುವಾಗಿದೆ. ಇದ್ರ ಮಧ್ಯೆ ಭಾರತದಲ್ಲಿರೋ ಪಾಕ್ ಪ್ರಜೆಗಳು ತಮ್ಮ ಪಾಪಿಸ್ತಾನಕ್ಕೆ ವಾಪಸ್ ಹೋಗಲೇಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment