86 ವರ್ಷದ ವೃದ್ಧೆಯನ್ನ ಡಿಜಿಟಲ್ ಅರೆಸ್ಟ್ ಮಾಡಿ 20 ಕೋಟಿ ರೂಪಾಯಿ ದೋಚಿದ ಕಳ್ಳರು.. ಬಲೆಗೆ ಬೀಳಿಸಿದ್ದು ಹೇಗೆ..?

author-image
Ganesh
Updated On
86 ವರ್ಷದ ವೃದ್ಧೆಯನ್ನ ಡಿಜಿಟಲ್ ಅರೆಸ್ಟ್ ಮಾಡಿ 20 ಕೋಟಿ ರೂಪಾಯಿ ದೋಚಿದ ಕಳ್ಳರು.. ಬಲೆಗೆ ಬೀಳಿಸಿದ್ದು ಹೇಗೆ..?
Advertisment
  • ದೇಶದಲ್ಲಿ ಸಂಚಲನ ಮೂಡಿಸಿದ ಈ ಸೈಬರ್​ ಕ್ರೈಂ
  • ಹೇಳಬಾರದ ಸುಳ್ಳು ಹೇಳಿ ಚಿತ್ರಹಿಂಸೆ ಕೊಟ್ಟ ಅಪರಾಧಿಗಳು
  • 20 ವರ್ಷದ ಇಬ್ಬರು ಆರೋಪಿಗಳು ಕೊನೆಗೂ ಅರೆಸ್ಟ್

ಈ ಸೈಬರ್ ಕ್ರೈಂ ಕ್ಯಾನ್ಸರ್​​ಗಿಂತ ಡೇಂಜರ್​​ ಆಗಿ ಬೆಳೀತಿದೆ.. ತಂತ್ರಜ್ಞಾನದ ಅಪ್​​ಡೇಟ್ಸ್​ ಕೆಲವು ಮುಗ್ಧ ಜನರ ಬದುಕು ಕಸಿಯುವ ಸೇತುವೆ ಆಗ್ತಿದೆ.. ಜನರ ಮುಗ್ಧತೆ, ಆಸೆಯನ್ನೇ ಬಂಡವಾಳ ಮಾಡಿಕೊಂಡ ಅಪರಾಧಿಗಳು, ಕ್ಷಣಾರ್ಧದಲ್ಲಿ ಕೋಟಿ, ಕೋಟಿ ಹಣವನ್ನು ನುಂಗಿ ನೀರು ಕುಡೀತಿದ್ದಾರೆ.. ಅದರಂತೇ, ಮುಂಬೈನಿಂದ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ..

ಏನಿದು ಪ್ರಕರಣ..?

ಮುಂಬೈ ಮೂಲದ 86 ವರ್ಷದ ವೃದ್ಧೆಯೊಬ್ಬರನ್ನು ಸೈಬರ್ ಅಪರಾಧಿಗಳು ಬರೋಬ್ಬರಿ 2 ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿದ್ದರು. ಈ ವೇಳೆ ಆಕೆಯಿಂದ 20 ಕೋಟಿ ಹಣವನ್ನು ಲಪಟಾಯಿಸಿದ್ದಾರೆ. ಇಲ್ಲಿ ವೃದ್ಧೆಗೆ ನಿಮಿಷದಿಂದ ನಿಮಿಷಕ್ಕೂ ಬೆದರಿಕೆ, ಮಕ್ಕಳನ್ನು ಬಂಧಿಸುವ ಅವಾಜ್ ಸೇರಿದಂತೆ ನಾನಾ ರೀತಿಯಲ್ಲಿ ಬ್ಲ್ಯಾಕ್ ಮೇಲ್ ಮೂಲಕ ದುಡ್ಡು ದೋಚಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು 2 ತಿಂಗಳ ಕಾಲ ಹೇಗೆ ‘ಡಿಜಿಟಲ್ ಅರೆಸ್ಟ್’ ಮಾಡಿದ್ದರು, ಏನೆಲ್ಲ ಬ್ಲ್ಯಾಕ್​ ಮೇಲ್ ಮಾಡಿ ಮೋಸ ಮಾಡಿದರು ಅನ್ನೋ ವಿವರ ಇಲ್ಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಾಕಿಸ್ತಾನದ ಗೂಢಚಾರಿ ಅರೆಸ್ಟ್.. ಈತ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯ ಉದ್ಯೋಗಿ..!

publive-image

ವಂಚನೆ ಕತೆ ಆರಂಭವಾಗಿದ್ದು, ವೃದ್ಧೆಗೆ ಅಪರಿಚಿತ ನಂಬರ್​ನಿಂದ ಕರೆ ಬರುವ ಮೂಲಕ. ಏನೂ ಅರಿಯದ ಆ ವೃದ್ಧೆ ತನ್ನ ಮಕ್ಕಳಿರಬಹುದು ಅಂತಾ ಸ್ವೀಕರಿಸಿದ್ದಾರೆ. ಗತ್ತಿನಿಂದ ಮಾತನಾಡಿದ ಆತ, ನಾನು ಸಂದೀಪ್ ರಾವ್, ಸಿಬಿಐ ಅಧಿಕಾರಿ ಎಂದಿದ್ದಾನೆ. ನಿಮ್ಮ ಹೆಸರು ಮತ್ತು ದಾಖಲೆಗಳನ್ನು ಪಡೆದುಕೊಂಡು ನಕಲಿ ಅಕೌಂಟ್ ತೆರೆಯಲಾಗಿದೆ. ಅದರಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆದಿವೆ. ಕೋಟ್ಯಾಂತರ ರೂಪಾಯಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಜೆಟ್​ ಏರ್​ ವೇಸ್ ಸಂಸ್ಥಾಪಕ ನರೇಶ್ ಗೋಯಲ್​​ಗೆ ಕಳುಹಿಸಲಾಗಿದೆ ಎಂದಿದ್ದಾನೆ.

2 ತಿಂಗಳ ಬಂಧಿಸಿಟ್ಟಿದ್ದು ಹೇಗೆ..?
ಮುಂದುವರೆದು ಮಾತನಾಡಿದ್ದ ನಕಲಿ ಸಿಬಿಐ ಅಧಿಕಾರಿ, ಇದೇ ಪ್ರಕರಣದಲ್ಲಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡ್ತಿದ್ದೇವೆ. ತನಿಖೆಗೆ ಸಹಕರಿಸಬೇಕು. ನಮ್ಮ ಬಳಿ ನಿಮ್ಮ ಬಂಧನದ ‘ಅರೆಸ್ಟ್ ವಾರೆಂಟ್’ ಇದೆ. ನೀವು ತನಿಖೆಗೆ ಸಹಕರಿಸದಿದ್ದರೆ ಮನೆಗೆ ಪೊಲೀಸರು ಬರುತ್ತಾರೆ. ಹಾಗಾಗಿ ನೀವು ಠಾಣೆಗೆ ಹೋಗದೇ, ಇ-ತನಿಖೆಗೆ ಸಹಾಯ ಮಾಡಿ. ತನಿಖೆಯಲ್ಲಿ ನಿಮ್ಮಿಂದ ಒಂದಷ್ಟು ಹೇಳಿಕೆ ಪಡೆಯಬೇಕಿದೆ ಎಂದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನಂತರ ಬ್ಯಾಂಕ್ ಅಕೌಂಟ್​ಗೆ ಸಂಬಂಧಿಸಿದ ಮಾಹಿತಿ ಕೇಳಿದ್ದಾರೆ. ಗಾಬರಿಯಾಗಿದ್ದ ವೃದ್ಧೆ ಎಲ್ಲವನ್ನೂ ಅವರಿಗೆ ಹೇಳಿದ್ದಾರೆ.

20 ಕೋಟಿ ರೂ.ಗೆ ಡಿಮ್ಯಾಂಡ್!

ಆ ಮೂಲಕ ವೃದ್ಧೆಯನ್ನು ಸಂಪೂರ್ಣವಾಗಿ ಕಿಡಿಗೇಡಿಗಳು ತಮ್ಮ ಕಂಟ್ರೋಲ್​​ಗೆ ತೆಗೆದುಕೊಂಡರು. ಆಕೆ ಮಕ್ಕಳೊಂದಿಗೆ ಮಾತನಾಡದಂತೆ ಸೂಚಿಸಿದರು. ಇದರ ಮಧ್ಯೆ ಸಂತ್ರಸ್ತೆ ತನ್ನ ಕುಟುಂಬದ ಇತರೆ ಸದಸ್ಯರ ವ್ಯವಹಾರದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಇದು ಹೀಗೆ 2 ತಿಂಗಳ ಕಾಲ ನಡೆದಿದೆ. ನಕಲಿ ಸಿಬಿಐ ಅಧಿಕಾರಿ ರಾಜೀವ್ ರಂಜನ್ ಅಂದುಕೊಂಡು ಪ್ರತಿ ಎರಡರಿಂದ ಮೂರು ಗಂಟೆಗೆ ಕರೆ ಮಾಡುತ್ತಲೇ ಇದ್ದ. ಕೊನೆಗೆ ಆಕೆ ಇರುವ ಸ್ಥಳದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಪ್ರಕರಣದಲ್ಲಿ ನಿಮ್ಮ ಹೆಸರು ತೆಗೆದು ಹಾಕಬೇಕು ಅಂದರೆ ಒಂದು ಪ್ರಕ್ರಿಯೆ ಇದೆ ಎಂದಿದ್ದಾರೆ.

ಇದನ್ನೂ ಓದಿ: Gold rate: ಬಂಗಾರ ಮತ್ತಷ್ಟು ದುಬಾರಿ.. ಯಾವ ರಾಜ್ಯದಲ್ಲಿ ಎಷ್ಟೆಷ್ಟು ಬೆಲೆ..?

publive-image

ನಿಮ್ಮ ಎಲ್ಲಾ ಖಾತೆಗಳನ್ನು ಕೋರ್ಟ್​ಗೆ ವರ್ಗಾವಣೆ ಮಾಡಲಾಗುತ್ತದೆ. ತನಿಖೆ ಪೂರ್ಣಗೊಂಡ ನಂತರ ಹಣವನ್ನು ಹಿಂತಿರುಗಿಸುತ್ತೇವೆ ಎಂದು ಸುಳ್ಳು ಭರವಸೆ ನೀಡಿದ್ದಾರೆ. ಅಂತೆಯೇ, ವೃದ್ಧೆಯ ಬಳಿಯಿದ್ದ 20 ಕೋಟಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ತನಿಖೆ ಪೂರ್ಣಗೊಂಡು ದಿನಗಳೇ ಕಳೆದರೂ ಹಣ ವಾಪಸ್ ಬಂದಿರಲಿಲ್ಲ. ಇದರಿಂದ ಗಾಬರಿಯಾದ ವೃದ್ಧೆ ಇದೇ ಮಾರ್ಚ್​ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮುಂಬೈನ ಮೀರಾ ರಸ್ತೆ ಬಳಿ ಇಬ್ಬರು 20 ವರ್ಷದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಸಲಿ ವಿಚಾರ ಗೊತ್ತಾಗಿದ್ದು ಹೇಗೆ..?

ಈ ವೃದ್ಧೆಯನ್ನು ನೋಡಿಕೊಳ್ಳಲು ಮನೆಯಲ್ಲಿ, ಓರ್ವ ಕೆಲಸದ ಮಹಿಳೆ ಇದ್ದಳು. ವೃದ್ಧೆಯ ಕೆಲವು ಅನುಮಾನದ ನಡೆಗಳು, ಕೆಲಸದಾಕೆಯ ಕಣ್ಣಿಗೆ ಬಿದ್ದಿದೆ. ಯಾವತ್ತೂ ರೂಮ್​​ನಲ್ಲಿ ಇರದ ವೃದ್ಧೆ, ಇಡೀ ದಿನ ರೂಮಿನಲ್ಲೇ ಕಳೆಯಲು ಶುರು ಮಾಡಿದ್ದರು. ಕೇವಲ ಊಟ, ತಿಂಡಿಗೆ ಮಾತ್ರ ರೂಮಿನಿಂದ ಆಚೆ ಬರುತ್ತಿದ್ದಳು. ಅಲ್ಲದೇ ಆಗಾಗ ಜೋರಾಗಿ ಕಿರುಚಾಡುತ್ತಿದ್ದರಂತೆ. ಇದನ್ನು ಗಮನಿಸಿದ ಮನೆ ಕೆಲಸದ ಮಹಿಳೆ, ವೃದ್ಧೆಯ ಮಗಳಿಗೆ ಮಾಹಿತಿ ನೀಡಿದ್ದಾಳೆ. ನಂತರ ವಿಚಾರಿಸಿದಾಗ ಸತ್ಯ ಗೊತ್ತಾಗಿದೆ.

ಇದನ್ನೂ ಓದಿ: ಈ ಸಲ RCB ಅಲ್ಲಿ ಏಕೈಕ ಮ್ಯಾಚ್ ಫಿನಿಶರ್, ಬಿಗ್ ಹಿಟ್ಟರ್​ಗಳು ಯಾರು ಯಾರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment