/newsfirstlive-kannada/media/post_attachments/wp-content/uploads/2025/04/PAK-NATINALIST.jpg)
ಪಾಕ್ ಪ್ರಜೆಗಳು ಭಾರತ ಬಿಡುವ ಕಾಲ ಸನ್ನಿಹಿತವಾಗಿದೆ. ವಾಪಸ್ ಕಳಿಸುವ ಕಾರ್ಯದಲ್ಲಿ ಪೊಲೀಸ್ ಇಲಾಖೆ ನಿರತವಾಗಿದೆ.
ಉತ್ತರ ಕನ್ನಡದಲ್ಲಿ 15 ಜನ
ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿರೋ ದುಷ್ಕೃತ್ಯಕ್ಕೆ ಪಾಕಿಸ್ತಾನ ದಂಡ ತೆರಳೇಬೇಕಿದೆ. ಪಾಕಿಸ್ತಾನದ ಪ್ರಜೆಗಳಿಗೂ ಇದರ ಎಫೆಕ್ಟ್ ತಟ್ಟಿದೆ. ದೇಶದಲ್ಲಿ ನೆಲೆಸಿರೋ ಪಾಕಿಸ್ತಾನ ಪ್ರಜೆಗಳು ತಕ್ಷಣವೇ ಭಾರತ ತೊರೆಯಬೇಕಾದ ಸ್ಥಿತಿ ಬಂದಿದೆ. ಕೇಂದ್ರ ಸರ್ಕಾರ ಏಪ್ರಿಲ್ 27ರೊಳಗೆ ಪಾಕ್‌ನ ಜನರು ಗಂಟು ಮೂಟೆ ಸಮೇತ ವಾಪಸ್ ತೆರಳುವಂತೆ ಸೂಚನೆ ನೀಡಿದೆ. ರಾಜ್ಯದಲ್ಲಿರೋ ಪಾಕ್ ಪ್ರಜೆಗಳನ್ನ ಬಗ್ಗೆ ಉತ್ತರ ಕನ್ನಡ ಎಸ್‌ಪಿ ಎಂ. ನಾರಾಯಣ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ 88 ಜನ ಪಾಕ್ ಪ್ರಜೆಗಳು ಇದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ 15 ಜನ ಪಾಕಿಸ್ತಾನಿ ಪ್ರಜೆಗಳು ಇರೋದಾಗಿ ಎಸ್‌ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿಗೂ ಮುನ್ನ ‘ಪ್ರೇಮ’ ಕಾಶ್ಮೀರ.. ಈಗ ಯಾವ ದುಸ್ಥಿತಿಗೆ ಬಂದಿದೆ ಗೊತ್ತಾ?
ದಾವಣಗೆರೆಯಲ್ಲೂ ಓರ್ವ ಪಾಕಿಸ್ತಾನಿ ಯುವತಿ
ದಾವಣಗೆರೆಯಲ್ಲಿ ಓರ್ವ ಪಾಕಿಸ್ತಾನದ ಯುವತಿ ಇರೋ ಬಗ್ಗೆ ಎಸ್‌ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಎಂಬಿಬಿಎಸ್ ಮುಗಿಸಿರೋ ರಾಣಿ ಬರ್ಕಾ ಎಂಬ ವಿದ್ಯಾರ್ಥಿನಿ, ಜೆಜೆಎಂ ಮೆಡಿಕಲ್ ಕಾಲೇಜ್‌ನಲ್ಲಿ ತೃತೀಯ ವರ್ಷದ ಪ್ಯಾಥಾಲಜಿ ಓದುತ್ತಿರೋದಾಗಿ ಎಸ್‌ಪಿ ಮಾಹಿತಿ ನೀಡಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರ.. ‘ಉಗ್ರ’ ಸಂಹಾರಕ್ಕೆ ಭಾರತ ಪಣ ತೊಟ್ಟಿದೆ. ಪಾಕಿಸ್ತಾನಕ್ಕೂ ನಡುಕ ಶುರುವಾಗಿದೆ. ಇದ್ರ ಮಧ್ಯೆ ಭಾರತದಲ್ಲಿರೋ ಪಾಕ್ ಪ್ರಜೆಗಳು ತಮ್ಮ ಪಾಪಿಸ್ತಾನಕ್ಕೆ ವಾಪಸ್ ಹೋಗಲೇಬೇಕಿದೆ.
ಇದನ್ನೂ ಓದಿ: ಗಡಿಯಲ್ಲಿ ಉಗ್ರರ ಹುಡುಕಿ ಹುಡುಕಿ ಬೇಟೆ.. ಭಾರತ ಸಿಂಧೂ ನೀರು ಬಿಡದಿದ್ರೆ ಪಾಕ್ ಗತಿ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ