DMRC: ಮೆಟ್ರೋದಲ್ಲಿ 40 ಲಕ್ಷ ಕ್ಯಾಶ್​​, 89 ಲ್ಯಾಪ್‌ಟಾಪ್‌, 193 ಮೊಬೈಲ್‌ ಪತ್ತೆ; ಏನಿದು ಸ್ಟೋರಿ?

author-image
Ganesh Nachikethu
Updated On
DMRC: ಮೆಟ್ರೋದಲ್ಲಿ 40 ಲಕ್ಷ ಕ್ಯಾಶ್​​, 89 ಲ್ಯಾಪ್‌ಟಾಪ್‌, 193 ಮೊಬೈಲ್‌ ಪತ್ತೆ; ಏನಿದು ಸ್ಟೋರಿ?
Advertisment
  • ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರು 40 ಲಕ್ಷಕ್ಕೂ ಹೆಚ್ಚು ಕ್ಯಾಶ್
  • 89 ಲ್ಯಾಪ್‌ಟಾಪ್ಸ್​​, 193 ಮೊಬೈಲ್ಸ್​​, 9 ಮಂಗಲಸೂತ್ರಗಳು ಪತ್ತೆ
  • 13 ಜೋಡಿ ಕಾಲುಂಗುರ ಸೇರಿ ಬೆಳ್ಳಿ ಆಭರಣಗಳು ಕೂಡ ಸಿಕ್ಕಿವೆ

ನವದೆಹಲಿ: 2024ರಲ್ಲಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರು 40 ಲಕ್ಷಕ್ಕೂ ಹೆಚ್ಚು ಕ್ಯಾಶ್​, 89 ಲ್ಯಾಪ್‌ಟಾಪ್ಸ್​​, 193 ಮೊಬೈಲ್ಸ್​​, 9 ಮಂಗಲಸೂತ್ರ ಬಿಟ್ಟುಹೋಗಿದ್ದಾರೆ ಎಂದು ವರದಿಯಾಗಿದೆ. ಇದು ಯಾರ ವಸ್ತುಗಳು ಎಂದು ಪರಿಶೀಲಿಸಿ ಮೆಟ್ರೋ ಸಿಬ್ಬಂದಿ ಮಾಲೀಕರಿಗೆ ತಲುಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಏನೇನು ಪತ್ತೆಯಾಗಿದೆ?

ಇನ್ನು, ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ 40.74 ಲಕ್ಷ ನಗದು, 89 ಲ್ಯಾಪ್‌ಟಾಪ್‌ಗಳು, 40 ವಾಚ್‌ಗಳು ಮತ್ತು 193 ಮೊಬೈಲ್‌ಗಳು, 13 ಜೋಡಿ ಕಾಲುಂಗುರಗಳು ಸೇರಿದಂತೆ ಬೆಳ್ಳಿ ಆಭರಣಗಳು ಮೆಟ್ರೋ ಸಿಬ್ಬಂದಿಗೆ ಸಿಕ್ಕಿವೆ. ಇಷ್ಟೇ ಅಲ್ಲ US ಡಾಲರ್‌ ಸೇರಿ ವಿದೇಶಿ ಕರೆನ್ಸಿ ಕೂಡ ಪತ್ತೆ ಆಗಿತ್ತು ಎನ್ನಲಾಗಿದೆ.

262 ಮಕ್ಕಳು ಪತ್ತೆ

75 ಸುತ್ತಿನ ಜೀವಂತ ಮದ್ದುಗುಂಡು ಮತ್ತು 7 ಬಂದೂಕುಗಳನ್ನು ಪತ್ತೆ ಆಗಿದ್ದವು. ದೆಹಲಿ ಮೆಟ್ರೋದಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ 262 ಮಕ್ಕಳನ್ನು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಲಾಗಿದೆ. ಸಂಕಷ್ಟದಲ್ಲಿ ಸಿಲುಕಿದ 671 ಮಹಿಳಾ ಪ್ರಯಾಣಿಕರಿಗೆ ಕೂಡ ಸಹಾಯ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಟೀ ಕುಡಿಯೋದು ಎಷ್ಟು ಡೇಂಜರ್​​? ಚಹಾ ಬಿಟ್ರೆ ಲಾಭಗಳೇನು? ಎಲ್ಲರೂ ಓದಲೇಬೇಕಾದ ಸ್ಟೋರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment