/newsfirstlive-kannada/media/post_attachments/wp-content/uploads/2025/01/8TH-PAY-COMMISSION.jpg)
ಕೇಂದ್ರ ಸರ್ಕಾರ ಬಹುನಿರೀಕ್ಷಿತ 8ನೇ ವೇತನ ಆಯೋಗಕ್ಕೆ ಒಪ್ಪಿಗೆ ನೀಡಿದೆ. ಸುಮಾರು 50 ಲಕ್ಷ ಕೇಂದ್ರ ಸರ್ಕಾರ ನೌಕರರ ಸಂಬಳದಲ್ಲಿ ಭಾರೀ ಬದಲಾವಣೆಗಳು ಆಗಲಿವೆ. ಈಗಾಗಲೇ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 8ನೇ ವೇತನ ಆಯೋಗ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರಿ ನೌಕರರ ಸಂಬಳದಲ್ಲಿ ಏರಿಕೆಯಾಗಲಿದ್ದು ಅವರ ಡಿಎ ಅಂದ್ರೆ ತುಟ್ಟಿಭತ್ಯೆ ಕೂಡ ಹೆಚ್ಚಾಗಲಿದೆ.
ವರದಿಗಳ ಪ್ರಕಾರ ಸರ್ಕಾರಿ ನೌಕರರ ಮೂಲ ವೇತನ ಅಂದ್ರೆ ಬೇಸಿಕ್ ಸ್ಯಾಲರಿ ಕನಿಷ್ಠವೆಂದರೂ ತಿಂಗಳಿಗೆ 40 ಸಾವಿರ ರೂಪಾಯಿ ಆಗಲಿದೆ ಎಂದು ಹೇಳಲಾಗುತ್ತಿದೆ. ಅದರ ಜೊತಗೆ ಹಲವು ಭತ್ಯೆಗಳು ಹಾಗೂ ಉತ್ತಮ ಕಾರ್ಯ ನಿರ್ವಹಣೆ ಆಧಾರದ ಮೇಲೆಯೂ ಹಲವು ಸೌಲಭ್ಯಗಳು ದೊರೆಯಲಿವೆ ಎಂದು ಹೇಳಲಾಗುತ್ತಿದೆ. ಈ ಬಾರಿ ಕೇಂದ್ರ ಸರ್ಕಾರಿ ನೌಕರರ ಸಂಬಳದಲ್ಲಿ ಸುಮಾರು ಶೇಕಡಾ 25 ರಿಂದ 30ರಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಅದೇ ರೀತಿ ನಿವೃತ್ತಿ ವೇತನದಲ್ಲಿಯೂ ಭಾರೀ ಏರಿಕೆಯಾಗಲಿದೆ.
ಇದನ್ನೂ ಓದಿ:ನಿವೃತ್ತ ಅಧಿಕಾರಿಗಳಿಂದ ಅರ್ಜಿ ಆಹ್ವಾನಿಸಿದ NHAI.. ಸಂಬಳ 75,000 ದಿಂದ 2 ಲಕ್ಷ ರೂಪಾಯಿ
ಈ ಒಂದ ಪರಿಷ್ಕರಣೆ ಹಣದುಬ್ಬರ, ಬೆಲೆ ಏರಿಕೆ ಹಾಗೂ ಸಾರ್ವಜನಿಕ ಖಾಸಗಿ ವಲಯಗಳ ನಡುವೆ ಇರುವ ಸಂಭಾವನೆಯ ಅಂತರವನ್ನು ತೊಡೆದು ಹಾಕಲು ಈ ಒಂದು ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ. ಸಂಬಳದಲ್ಲಿ ಏರಿಕೆಯನ್ನು ಪ್ರಮುಖವಾಗಿ ಸೇವೆ ಹಾಗೂ ಸಂಬಳಕ್ಕನುಗಣವಾಗಿ ನಿರ್ಧರಿಸಲಾಗುತ್ತದೆ. ಇದು ಸುಮಾರು 2.57 ರಿಂದ 2.86 ರಷ್ಟು ಏರಿಕೆಯಾಗುವ ಸಂಭಾವ್ಯವಿದೆ. ಸದ್ಯ ಮೂಲ ವೇತನ ಅಂದ್ರೆ ಬೇಸಿಕ್ ಸ್ಯಾಲರಿ 18 ಸಾವಿರ ರೂಪಾಯಿಯಿಂದ 40 ಸಾವಿರ ರೂಪಾಯಿಯವರೆಗೆ ಹಾಗೂ 51,480 ರೂಪಾಯಿವರೆಗೂ ಏರಿಕೆಯಾಗಲಿದೆ ಎಂದು ಹೇಳಲಾಗುತ್ತದೆ.
ಸದ್ಯ ಇರುವ ಮಾಹಿತಿ ಪ್ರಕಾರ ಸದ್ಯ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 18 ಸಾವಿರ ರೂಪಾಯಿ ಇದೆ ಪ್ರತಿ ತಿಂಗಳಿಗೆ. 6ನೇ ವೇತನ ಆಯೋಗದ ಅನ್ವಯ ಮೂಲ ವೇತನ 7 ಸಾವಿರ ರೂಪಾಯಿದಷ್ಟು ಇತ್ತು. 7ನೇ ವೇತನ ಆಯೋಗದಲ್ಲಿ ಅದನ್ನು 18 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಈಗ 18 ಸಾವಿರ ರೂಪಾಯಿ ಮೂಲ ವೇತನ 40 ಸಾವಿರದಿಂದ 51,480 ರೂಪಾಯಿವರೆಗೂ ಆಗಲಿದೆ ಎಂದು ಹೇಳಲಾಗುತ್ತಿದೆ
ಎಲ್ಲಾ ಭತ್ಯೆಗಳು, ಅಂದ್ರೆ ಡಿಎ, ಹೆಚ್​ಆರ್​ಎ, ಟಿಎ ಹಾಗೂ ಉಳಿದ ಎಲ್ಲಾ ಭ್ಯತ್ಯೆಗಳನ್ನು ಸೇರಿಸಿದರೆ ಮೂಲ ವೇತನ 7ನೇ ವೇತನ ಆಯೋಗದ ಅನ್ವಯ ಒಟ್ಟು ತಿಂಗಳಿಗೆ 36,020 ಬರುತ್ತಿತ್ತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us