/newsfirstlive-kannada/media/post_attachments/wp-content/uploads/2024/12/VITAMINS-FRUIT-AND-VEGETABLE.jpg)
ನಮ್ಮ ಜೀವಕಣಗಳು ಆರೋಗ್ಯವಾಗಿರಬೇಕು ಅಂದ್ರೆ ಅಥವಾ ನಮ್ಮ ದೇಹ ಆರೋಗ್ಯಯುತವಾಗಿ ದೃಢವಾಗಿ ಇರಬೇಕು ಅಂದ್ರೆ ಅದಕ್ಕೆ ಜೀವಸತ್ವಗಳ, ಖನಿಜಾಂಶಗಳ, ಪೋಷಕಾಶಂಗಳನ್ನು ನಿರಂತರ ಪೂರೈಕೆ ಆಗುತ್ತಲೇ ಇರಬೇಕು. ಅವುಗಳೆಲ್ಲಾ ನಾವು ನಿತ್ಯ ಸೇವಿಸುವ ಆಹಾರಗಳಲ್ಲಿಯೇ ಇದೆ. ಆದ್ರೆ ಪ್ರಮುಖವಾಗಿ ಜೀವಸತ್ವಗಳು ಅಂದ್ರೆ ವಿಟಮಿನ್ಸ್ಗಳು ನಮ್ಮ ದೇಹಕ್ಕೆ ಪೂರೈಕೆ ಮಾಡಬೇಕು ಅಂದ್ರೆ ನಾವು ಪ್ರಮುಖವಾಗಿ ಕೆಲವು ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಬೇಕು. ಈ ತರಕಾರಿ ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದ ಜೀವಸತ್ವಗಳು ಇವೆ ಅವುಗಳಲ್ಲಿ ಪ್ರಮುಖವಾಗಿ ಕೆಳಗಿನಂತಿವೆ.
1. ಪಾಲಕ್: ಪಾಲಕ್ ಅಂದ ತಕ್ಷಣ ನಮಗೆ ನೆನಪಿಗೆ ಬರೋದು ಕಬ್ಬಿಣಾಂಶದ ಕಣಜ ಎಂದು ಹೇಳಲಾಗುತ್ತದೆ. ಪಾಲಕ್ನಲ್ಲಿ ಕೇವಲ ಕಬ್ಬಿಣಾಂಶವಿಲ್ಲ. ಇದು ಅತ್ಯಂತ ಹೇರಳವಾಗಿ ವಿಟಮಿನ್ ಎ ಮತ್ತು ಇ ಯನ್ನು ಹೊಂದಿದೆ. ಬೇಯಿಸಿದ ಪಾಲಕ್ ಸೊಪ್ಪಿನಲ್ಲಿ ನಿಮಗೆ ಸುಮಾರು 4 ಮಿಲಿಗ್ರಾಮನಷ್ಟು ವಿಟಮಿನ್E ಸಿಗುತ್ತದೆ. ಅದು ನಮ್ಮ ದೇಹಕ್ಕೆ ನಿತ್ಯ ಬೇಕಾದ ಶೇಕಡಾ 25 ರಷ್ಟರ ಪ್ರಮಾಣವನ್ನು ಪೂರೈಸುತ್ತದೆ.
2. ಬೆಣ್ಣೆ ಹಣ್ಣು (Butterfruit): ಒಂದು ಸಾಧಾರಣ ಗಾತ್ರದ ಬೆಣ್ಣೆ ಹಣ್ಣಿನಲ್ಲಿ ಸುಮಾರು 4.2 ಮಿಲಿ ಗ್ರಾಂನಷ್ಟು ವಿಟಮಿನ್ E ದೊರಕುತ್ತದೆ. ಇದನ್ನು ನಿತ್ಯ ನೀವು ನಿಮ್ಮ ಆಹಾರದ ಒಂದು ಭಾಗ ಮಾಡಿಕೊಂಡಲ್ಲಿ. ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳ ಪೂರೈಕೆ ಆಗುತ್ತದೆ. ವಿಟಮಿನ್ ಇ ಜೊತೆಗೆ ಆ್ಯಂಟಿಆಕ್ಸಿಡೆಂಟ್ ಅಂಶವು ಕೂಡ ನಿಮ್ಮ ದೇಹವನ್ನು ಸೇರುತ್ತದೆ.
3. ಕೆಂಪು ದೊಣ್ಣೆ ಮೆಣಸಿನಕಾಯಿ : ಒಂದು ಕಪ್ ದೊಣ್ಣೆ ಮೆಣಸಿನಕಾಯಿಯಲ್ಲಿ 1.9 ಎಂಜಿ ವಿಟಮಿನ್ ಇ ಸಿಗುತ್ತದೆ. ಅದರ ಜೊತೆಗೆ ವಿಟಮಿನ್ ಸಿ ಕೂಡ ಸಿಗುತ್ತದೆ. ಸಲಾಡ್ ಹಾಗೂ ಕರಿಽ ಮಾಡಿಕೊಂಡು ತಿನ್ನುವುದರಿಂದ ಕೆಂಪು ದೊಣ್ಣೆ ಮೆಣಸಿನಕಾಯಿ ನಿಮಗೆ ಸಾಕಷ್ಟು ಆರೋಗ್ಯದ ಪ್ರಯೋಜನಗಳನ್ನು ತಂದು ಕೊಡುತ್ತದೆ.
4. ಕಿವಿ ಹಣ್ಣು: ಒಂದು ಕಿವಿ ಹಣ್ಣಿನಲ್ಲಿ ಸುಮಾರು 1.1ಎಂಜಿಯಷ್ಟು ವಿಟಮಿನ್ ಇ ಸಿಗುತ್ತದೆ. ಸಂಜೆಯ ಸಮಯದಲ್ಲಿ ಸ್ನ್ಯಾಕ್ಸ್ ರೂಪದಲ್ಲಿ ಇದನ್ನು ತಿನ್ನುವುದರಿಂದ ದೇಹದ ಆರೋಗ್ಯಕ್ಕೆ ತುಂಬಾ ಉಪಯೋಗ
5. ಕೊಸುಗಡ್ಡೆ: ಒಂದು ಕಪ್ ಬೇಯಿಸಿದ ಕೋಸುಗಡ್ಡೆಯಲ್ಲಿ ಸುಮಾರು 2 ರಿಂದ 3 ಎಂಜಿಯಷ್ಟು ವಿಟಮಿನ್ ಇ ಮತ್ತು ಎ ಸಿಗುತ್ತದೆ. ಇದನ್ನು ಹಸಿಯಾಗಿಯೂ ಕೂಡ ತಿನ್ನಬಹುದು. ಆದ್ರೆ ಅದರಲ್ಲಿ ಹಲವು ರೀತಿಯ ಕೀಟಗಳು ಸೇರಿರುವ ಸಾಧ್ಯತೆಯೂ ಜಾಸ್ತಿ ಇರುವುದುರಿಂದ ಇದನ್ನು ಬೇಯಿಸಿ ತಿನ್ನುವುದೇ ಉತ್ತಮ
6. ಮಾವಿನಹಣ್ಣು: ಮಾವಿನ ಹಣ್ಣು ಅಂದ್ರೆ ಹಣ್ಣುಗಳ ರಾಜ ಎಂದೇ ಕರೆಯುತ್ತಾರೆ. ಇದನ್ನು ಜ್ಯೂಸ್ ರೀತಿಯಲ್ಲಿಯೂ ಸೇವಿಸಬಹುದು ಹಾಗೂ ನೇರವಾಗಿಯೂ ಸೇವಿಸಬಹುದು. ಒಂದು ಕಪ್ ಮಾವಿನ ಹಣ್ಣಿನ ಜ್ಯೂಸ್ನಲ್ಲಿ 1.5 ಎಂಜಿ ವಿಟಮಿನ್ ಇ ಸಿಗುತ್ತದೆ.
7. ಟೊಮ್ಯಾಟೊ: ಟೊಮ್ಯಾಟೊ ಕೂಡ ವಿಟಮಿನ್ ಸಿ ಗಳನ್ನು ಸಂಗ್ರಹಿಸಿಕೊಂಡ ರುಚಿಯಾದ ಹಣ್ಣು. ಒಂದು ಕಪ್ ಟೊಮ್ಯಾಟೊ ಹಣ್ಣಿನಲ್ಲಿ ನಮಗೆ ಸುಮಾರು 2.8 ಎಂಜಿಯಷ್ಟು ವಿಟಮಿನ್ ಇ ದೊರೆಯತ್ತದೆ. ಇದನ್ನು ನಾವು ನೇರವಾಗಿ ಸೇವಿಸಬಹುದು, ಸಲಾಡ್ ರೂಪದಲ್ಲಿ ಸೇವಿಸಬಹುದು ಇಲ್ಲವೇ ಫಿಜ್ಜಾ ಮೇಲೆ ಡಿಸೈನ್ ಮಾಡಿಕೊಂಡು ಕೂಡ ಸೇವಿಸಬಹುದು.
8. ಬ್ಲ್ಯಾಕ್ ಬೆರಿಽ: ಬ್ಲ್ಯಾಕ್ ಬರಿಽ ಹಣ್ಣು ಅಂದ್ರೆ ಯಾರಿಗೆ ಇಷ್ಟವಿಲ್ಲ. ಅನೇಕರ ಪ್ರಿಯವಾದ ಹಣ್ಣು ಇದು. ನಿತ್ಯ ಒಂದು ಕಪ್ ಹಣ್ಣನ್ನು ನಾವು ಸೇವಿಸುವುದರಿಂದ ನಮಗೆ 1.7 ಎಂಜಿಯಷ್ಟು ವಿಟಮಿನ್ ಇ ದೊರೆಯತ್ತದೆ. ಅದರ ಜೊತೆಗೆ ವಿಟಮಿನ್ ಎ ಕೂಡ ಇದರಲ್ಲಿ ಇದೆ.
9.ಗೆಣಸು: ಒಂದು ಸಾಧಾರಣ ಗಾತ್ರದ ಗೆಣಸು ನಮಗೆ ಸುಮಾರು 1.2 ಎಂಜಿಯಷ್ಟು ವಿಟಮಿನ್ ಇ ಯನ್ನು ಪೂರೈಕೆ ಮಾಡುತ್ತದೆ. ಇವುಗಳನ್ನು ಚೆನ್ನಾಗಿ ಕುದಿಸಿ ಹಾಲಿನೊಂದಿಗೆ ಸೇವಿಸಬಹುದು. ಹಸಿಯಾಗಿಯೂ ಕೂಡ ತಿನ್ನಬಹುದು. ಇದು ಕೂಡ ಅನೇಕ ಜೀವಸತ್ವಗಳನ್ನು ನಮ್ಮ ದೇಹಕ್ಕೆ ಪೂರೈಕೆ ಮಾಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ