RCB ವಿಜಯೋತ್ಸವ; ದಾಖಲೆ ಮಟ್ಟದಲ್ಲಿ ನಮ್ಮ ಮೆಟ್ರೋದಲ್ಲಿ ಸಂಚಾರ.. ಎಷ್ಟು ಲಕ್ಷ ಜನ?

author-image
Bheemappa
Updated On
RCB ವಿಜಯೋತ್ಸವ; ದಾಖಲೆ ಮಟ್ಟದಲ್ಲಿ ನಮ್ಮ ಮೆಟ್ರೋದಲ್ಲಿ ಸಂಚಾರ.. ಎಷ್ಟು ಲಕ್ಷ ಜನ?
Advertisment
  • ಹಿಂದೆಂದೂ ಓಡಾಡದಷ್ಟು ಜನರು ಮೆಟ್ರೋದಲ್ಲಿ ನಿನ್ನೆ ಪ್ರಯಾಣ
  • 7 ಲಕ್ಷ, 8 ಲಕ್ಷ ಪ್ರಯಾಣಿಕರು ಅಲ್ಲವೇ ಅಲ್ಲ, ಅದಕ್ಕಿಂತಲೂ ಹೆಚ್ಚು
  • ಪ್ರಯಾಣಿಕರು ದಾಖಲೆ ಮಟ್ಟದಲ್ಲಿ ನಮ್ಮ ಮೆಟ್ರೋದಲ್ಲಿ ಪ್ರಯಾಣ

ಬೆಂಗಳೂರು: ರಾಯಲ್ ಚಾಲೆಂಜರ್ಸ್​ ಬೆಂಗಳೂರು ಟೀಮ್ ಐಪಿಎಲ್ ಟ್ರೋಫಿ ಗೆದ್ದಿದ್ದೇ ಗೆದ್ದಿದ್ದು ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಆರ್​ಸಿಬಿ ಅಭಿಮಾನಿಗಳಂತ ಖುಷಿ ಹೇಳ ತೀರದು. ಇದರ ಜೊತೆ ಟ್ರೋಫಿ ಗೆದ್ದ ಆರ್​ಸಿಬಿ ಆಟಗಾರರು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಬರುತ್ತಾರೆ ಎನ್ನುವ ಸುದ್ದಿ ಯಾವಾಗ ಹೊರ ಬಿತ್ತೋ ದಾಖಲೆ ಮಟ್ಟದಲ್ಲಿ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.

ಸಿಲಿಕಾನ್ ಸಿಟಿಯ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ವಿಜಯೋತ್ಸವ ಕಣ್ತುಂಬಿಕೊಳ್ಳಲು ದಾಖಲೆ ಮಟ್ಟದಲ್ಲಿ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ. ಈ ಮೊದಲು ಸ್ಟೇಡಿಯಂನಲ್ಲಿ ಕ್ರಿಕೆಟ್​ ಪಂದ್ಯಗಳು ಇದ್ದರೂ ಈ ಮಟ್ಟದಲ್ಲಿ ಜನರು ಓಡಾಡಿರಲಿಲ್ಲ. ಆದರೆ ಆರ್​ಸಿಬಿ ಟ್ರೋಫಿ ಗೆದ್ದು ಚಿನ್ನಸ್ವಾಮಿ ಮೈದಾನಕ್ಕೆ ಬರುತ್ತೋ ಎಂದು ಗೊತ್ತಾಯಿತೋ ಅವಾಗ 9 ಲಕ್ಷ ಕ್ಕೂ ಅಧಿಕ ಜನರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ.

ಇದನ್ನೂ ಓದಿ:ಮದುವೆಗೆ ಹುಡುಗಿನ ನೋಡಿದ್ವಿ.. RCB ಅಂತ ಬೆಂಗಳೂರಿಗೆ ಹೋಗಿದ್ದು ಗೊತ್ತಿಲ್ಲ- ಮಗನಿಗಾಗಿ ತಾಯಿಯ ಆಕ್ರಂದನ

publive-image

ಮೆಟ್ರೋದಲ್ಲಿ ಜೂನ್​​ 4 ರಂದು ದಾಖಲೆ ಮಟ್ಟದಲ್ಲಿ ಪ್ರಯಾಣಿಕರ ಸಂಚಾರ

ಒಟ್ಟು‌ 9,66,732 ಮಂದಿ ಪ್ರಯಾಣಿಕರ ಓಡಾಟ
ಲೈನ್ 1ರಲ್ಲಿ‌ 4,78,334 ಪ್ರಯಾಣಿಕರ ಸಂಚಾರ
ಲೈನ್ 2ರಲ್ಲಿ 2,84,674 ಪ್ರಯಾಣಿಕರ ಸಂಚಾರ
ಮೆಜೆಸ್ಟಿಕ್ ಇಂಟರ್​ ಚೇಂಜ್​ನಲ್ಲಿ 2,03,724 ಪ್ರಯಾಣಿಕರ ಓಡಾಟ

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದ ಖುಷಿಯಲ್ಲಿ ಸಂಭ್ರಮದ ನಡುವೆ ಆಘಾತ, ಆಕ್ರಂದನ ಎಲ್ಲವೂ ನಡೆದು ಹೋಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವಕ್ಕೆ ಸಾಗರೋಪಾದಿಯಲ್ಲಿ ಅಭಿಮಾನಿಗಳು ಕ್ರೀಡಾಂಗಣದ ಬಳಿ ಸೇರಿದ್ದರು. ಕಾಲಿಡಲು ಸ್ಥಳವಿಲ್ಲದಷ್ಟು ಜಾಗ ಇರದ ಕಾರಣ ಕಾಲ್ತುಳಿತ ಸಂಭವಿಸಿ 11 ಅಭಿಮಾನಿಗಳು ಕೊನೆಯುಸಿರೆಳೆದ್ದಾರೆ.​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment