newsfirstkannada.com

Video: 90ನೇ ವಯಸ್ಸಿಗೆ 5ನೇ ಮದುವೆಯಾದ ಅಜ್ಜ! ಕಂಗ್ರಾಜುಲೇಶನ್ ಹೇಳಿದ ಮೊಮ್ಮಗ!

Share :

17-07-2023

    ವಯಸ್ಸಲ್ಲದ ವಯಸ್ಸಿಗೆ 5ನೇ ಮದುವೆಯಾದ ಅಜ್ಜ

    90ನೇ ವಯಸ್ಸಿನಲ್ಲಿ ವಿವಾಹ ಬಯಕೆ ಈಡೇರಿಕೊಂಡ ಮುದುಕ

    5ನೇ ವಿವಾಹದ ಸಂಗತಿ ಕೇಳಿ ಶುಭಾಶಯ ಕೋರಿದ ಮೊಮ್ಮಗ

ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡಿಸಬೇಕು ಎಂಬುದು ಬಹುತೇಕ ಪೋಷಕರ ಕನಸು. ಆದರೆ ವಯಸ್ಸಲ್ಲದ ವಯಸ್ಸಿನಲ್ಲಿರುವ ಪೋಷಕನೇ ಮದುವೆಯಾಗಲು ಹೊರಟರೇ ಇದಕ್ಕೆ ಏನು ಹೇಳಬೇಕು ಹೇಳಿ?. ಇಲ್ಲೊಬ್ಬ ವ್ಯಕ್ತಿ ತನ್ನ 90ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾನೆ. ಅಷ್ಟಕ್ಕೆ ಆತ ಆಗಿರೋದು ಮೊದಲ ಮದುವೆಯಂತು ಅಲ್ಲವೇ ಅಲ್ಲ. ಎಷ್ಟನೆಯದು ಗೊತ್ತಾ? ಈ ಸ್ಟೋರಿ ಪೂರ್ತಿ ಓದಿ.

ಕಲಿಯುಗ ಕಳೆದು ಮಧ್ಯಂತರ ಯುಗವಿದು. ಸದ್ಯ ಈ ಕಾಲದಲ್ಲಿ ಮದುವೆಯಾಗೋದು ಅಂದರೆ ಸುಲಭದ ಮಾತು ಅಲ್ಲವೇ ಅಲ್ಲ. ಅದರಲ್ಲೂ ಅದ್ಧೂರಿ ಮದುವೆಯನ್ನು ಬಯಸುವವರೇ ಜಾಸ್ತಿ. ಆದರೆ ಸೌದಿ ಅರೇಬಿಯಾದ 90 ವರ್ಷದ ವೃದ್ಧ ನಾಸರ್​​ ಬಿನ್​ ದಹೀಮ್​ ಬಿನ್​ ವಹ್ಕ್​​ ಅಲ್​​ ಮರ್ಷಿದಿ ಅಲ್​​ ಒತೈಬಿ 5ನೇ ಮದುವೆಯಾಗಿದ್ದಾನೆ. ಇದೇ ಕಾರಣಕ್ಕೆ ಸುದ್ದಿಯೂ ಆಗಿದ್ದಾನೆ.

ಅಚ್ಚರಿ ಎಂದರೆ ಸಾಮಾಜಿಕ ಜಾಲತಾಣದಲ್ಲಿ ಈತನ ಮದುವೆ ಸುದ್ದಿ ಭಾರೀ ವೈರಲ್​ ಆಗುತ್ತಿದೆ. ಅನೇಕರು ಈತನ ವಿವಾಹದ ಸಂಗತಿ ಕೇಳಿ ಶುಭಾಶಯ ಕೋರಿದ್ದಾರೆ. ಅಷ್ಟು ಮಾತ್ರವಲ್ಲ, ಆತನ ಮೊಮ್ಮಗನೇ ಶುಭಾಶಯ ಕೋರಿದ್ದಾನೆ.

ಏನೇ ಇರಲಿ ಇಂಥಾ ವಯಸ್ಸಲ್ಲದ ವಯಸ್ಸಲ್ಲಿ ಹುಡುಗಿ ಹುಡುಕಿ 5ನೇ ಮದುವೆಯಾದ ನಾಸರ್​​ ಬಿನ್​ ದಹೀಮ್​ ಬಿನ್​ ವಹ್ಕ್​​ ಅಲ್​​ ಮರ್ಷಿದಿ ಅಲ್​​ ಒತೈಬಿಗೆ ಕಂಗ್ರಾಜುಲೇಶನ್​ ಹೇಳಲೇಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Video: 90ನೇ ವಯಸ್ಸಿಗೆ 5ನೇ ಮದುವೆಯಾದ ಅಜ್ಜ! ಕಂಗ್ರಾಜುಲೇಶನ್ ಹೇಳಿದ ಮೊಮ್ಮಗ!

https://newsfirstlive.com/wp-content/uploads/2023/07/Marriage-3.jpg

Load More