/newsfirstlive-kannada/media/post_attachments/wp-content/uploads/2025/01/Laurene-Powell-Jobs.jpg)
ಆ್ಯಪಲ್ ಸಹ ಸಂಸ್ಥಾಪಕನ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪಾವೆಲ್ ಜಾಬ್ ಇತ್ತೀಚೆಗೆ ಮಹಾಕುಂಭಮೇಳದಲ್ಲಿ ಭಾಗವಹಿಸಲು ಪ್ರಯಾಗರಾಜ್ಗೆ ಭೇಟಿ ಕೊಟ್ಟಿದ್ದರು. ಜಗತ್ತಿನ ಅತಿದೊಡ್ಡ ಆಧ್ಯಾತ್ಮಿಕ ಕೂಟದಲ್ಲಿ ಭಾಗವಹಿಸಿದ್ದ ಲಾರೆನ್ ಪಾವೆಲ್ ಮೊದಲ ದಿನ ಆರೋಗ್ಯ ಸಮಸ್ಯೆಯಿಂದಾಗಿ ಗಂಗಾನದಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ವಂಚಿತರಾಗಿದ್ದರು. ಅವರ ಪ್ರಯಾಗರಾಜ್ನ ಭೇಟಿಯೇ ಜಗತ್ತಿನ ದೃಷ್ಟಿಯನ್ನು ಭಾರತದತ್ತ ಸೆಳೆದಿತ್ತು. ಕುಂಭಮೇಳದ ಅವರ ಆಧ್ಯಾತ್ಮಿಕ ಅನುಭವ ಜಗತ್ತಿನ ಪತ್ರಿಕೆಗಳ ತಲೆಬರಹಗಳಾಗಿದ್ದವು. ಅವರ ಭೇಟಿ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು.
ಲಾರೆನ್ ಪಾವೆಲ್ ಅವರ ಫ್ಲೈಟ್ ಗಮನಾರ್ಹವಾಗಿದ್ದು ಹೇಗೆ ?
ಭೂತಾನ್ ಏರ್ವೇಸ್ ವಿಮಾನವೊಂದು ಇತ್ತೀಚೆಗೆ ಪ್ರಯಾಗರಾಜ್ನಲ್ಲಿ ಲ್ಯಾಂಡ್ ಆಗಿತ್ತು. ಆ ಫ್ಲೈಟ್ ಮೂಲಕವೇ ಅಮೆರಿಕಾದ ಬಿಲೇನಿಯರ್ ಲಾರೆನ್ ಪಾವೆಲ್ ಜಾಬ್ಸ್ ಬಂದಿಳಿದಿದ್ದರು. ಕುಂಭಮೇಳದಲ್ಲಿ ಭಾಗವಹಿಸಿದ ಬಳಿಕ ಅವರು ವಾಪಸ್ ಭೂತಾನ್ಗೆ ಅದೇ ಫ್ಲೈಟ್ನಲ್ಲಿ ವಾಪ್ ಹೋದರು. ಈ ಒಂದು ಕ್ಷಣ ಭಾರತದಲ್ಲಿ ಐತಿಹಾಸಿಕ ಕ್ಷಣವಾಗಿ ಮೈಲಿಗಲನ್ನು ನೆಟ್ಟಿತು. ಪ್ರಯಾಗರಾಜ್ನಲ್ಲಿ 93 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ವಿಮಾನವೊಂದು ಮೊದಲ ಬಾರಿಗೆ ಲ್ಯಾಂಡ್ ಆದ ಐತಿಹಾಸಿಕ ಕ್ಷಣವನ್ನು ಬರೆಯಿತು.
ಇದನ್ನೂ ಓದಿ:ವಿವಾದಗಳ ಚೆಲುವೆ ಈಗ ಎಲ್ಲವನ್ನೂ ತ್ಯಜಿಸಿದ ಸಾಧ್ವಿ; ಮಮತಾ ಕುಲಕರ್ಣಿ ಸನ್ಯಾಸಿ ಆಗಿದ್ದು ಯಾಕೆ?
1911ರಲ್ಲಿ ಮೊದಲ ಬಾರಿ ಹೆನ್ರಿ ಫ್ರಿಕ್ವೆಟ್ ಸ್ಥಳೀಯ ಕಮರ್ಷಿಯಲ್ ವಿಮಾನಯಾನವನ್ನು ಭಾರತದಲ್ಲಿ ಕೈಗೊಂಡಿದ್ದರು. ಅಲಹಾಬಾದ್ ಅಂದ್ರೆ ಇಂದಿನ ಪ್ರಯಾಗರಾಜ್ನಿಂದ ನೈನಿವರೆಗೆ ಸಂಚಾರ ಮಾಡಲಾಗಿತ್ತು. 1931ರಲ್ಲಿ ಅಲಹಾಬಾದ್ನಲ್ಲಿ ಮೊದಲ ಬಾರಿ ಏರೋಡ್ರಮ್ ಸ್ಥಾಪಿಸಲಾಯಿತು. ಆಗ ಅದು ಭಾರತದ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಹೆಸರು ಪಡೆದುಕೊಂಡಿತು. ಇಲ್ಲಿಂದ 1932ರಲ್ಲಿ ಲಂಡನ್ಗೆ ಫ್ಲೈಟ್ಸ್ಗಳು ತೆರಳಿದ್ದವು. ಇದಾದ ಬಳಿಕ ಪ್ರಯಾಗರಾಜ್ನಲ್ಲಿ ಅಂತಾರಾಷ್ಟ್ರೀಯ ವಿಮಾನವೊಂದು ಲ್ಯಾಂಡ್ ಆಗಿದ್ದು 2025ರಲ್ಲಿಯೇ ಅದು ಕೂಡ ಲಾರೆನ್ ಪಾವೆಲ್ ಜಾಬ್ಸ್ರನ್ನು ಹೊತ್ತುಕೊಂಡು ಬಂದ ಭೂತಾನ್ ಏರ್ವೇಸ್ ಏರ್ಕ್ರಾಫ್ಟ್. ಈ ಮೂಲಕ 93 ವರ್ಷದ ಪ್ರಯಾಗರಾಜ್ನ ಏರ್ಪೋರ್ಟ್ನ ಒಂದು ದಾಖಲೆಯನ್ನು ಮುರಿದಿದ್ದಾರೆ ಸ್ಟೀವ್ ಜಾಬ್ಸ್ ಪತ್ನಿ
ಪತ್ನಿ ಕುಂಭಮೇಳಕ್ಕೆ ಭೇಟಿ ನೀಡುವುದರಲ್ಲಿ ಸ್ಟೀವ್ ಜಾಬ್ಸ್ ಆಸೆಯೂ ಅಡಗಿತ್ತು.
ಫೆಬ್ರುವರಿ 2,3 1974ರಲ್ಲಿ ಸ್ಟೀವ್ ಜಾಬ್ಸ್ ತನ್ನ ಬಾಲ್ಯ ಸ್ನೇಹಿತ ಟೀಮ್ ಬ್ರೌನ್ಗೆ ಒಂದು ಪತ್ರ ಬರೆಯುತ್ತಾರೆ. ಆ ಪತ್ರದಲ್ಲಿ ನಾನು ಒಂದು ಬಾರಿಯಾದರೂ ಭಾರತದಲ್ಲಿ ನಡೆಯುವ ಕುಂಭಮೇಳವನ್ನು ನೋಡಬೇಕು. ಆ ಕೋಟ್ಯಾಂತರ ಜನ ಭಾಗಿಯಾಗುವ ಆ ಆಧ್ಯಾತ್ಮದ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಆಸೆಯನ್ನು ಅವರು ಹೊರ ಹಾಕಿರುತ್ತಾರೆ. ನಾನು ಭಾರತಕ್ಕೆ ಕುಂಭಮೇಳದ ಸಲುವಾಗಿ ಹೋಗಬೇಕು. ಅದು ಏಪ್ರಿಲ್ನಲ್ಲಿ ಶುರುವಾಗುತ್ತದೆ. ನಾನು ಮಾರ್ಚ್ನಲ್ಲಿ ಇಲ್ಲಿಂದ ಬಿಡಬೇಕು. ಆದ್ರೆ ಸದ್ಯಕ್ಕಲ್ಲ ಎಂದು ಹೇಳಿ ಶಾಂತಿ ಎಂಬ ಶಬ್ದದ ಮೂಲಕ ತಮ್ಮ ಪತ್ರವನ್ನು ಮುಗಿಸಿರುತ್ತಾರೆ. ಈ ಒಂದು ಪತ್ರ ಅವರಿಗೆ ಹಿಂದೂ ತತ್ವಶಾಸ್ತ್ರ ಹಾಗೂ ಆಧ್ಯಾತ್ಮಿಕತೆಯೊಂದಿಗೆ ಎಷ್ಟು ಆಳವಾದ ನಂಟು ಇತ್ತು ಎಂಬುದು ಗೊತ್ತಾಗುತ್ತದೆ. ಈ ಪತ್ರ ಇತ್ತೀಚೆಗೆ ಸುಮಾರು 4.32 ಕೋಟಿ ರೂಪಾಯಿಗೆ ಹರಾಜು ಆಯ್ತು.
ಇನ್ನು ಯೋಗಿಯ ಆತ್ಮಕತೆ ಎಂಬ ಹಿಂದೂ ಸಾಧು ಪರಮಹಂಸ ಯೋಗಾನಂದ ಅವರ ಪುಸ್ತಕ ಸ್ಟೀವ್ ಜಾಬ್ಸ್ ಬಗ್ಗೆ ತುಂಬಾ ಆಳವಾದ ಗಮನಾರ್ಹವಾಗಿ ಸೆಳೆದಿತ್ತಂತೆ. ವಾಲ್ಟರ್ ಇಸಾಸ್ಕಾನ್ಸ್ ಅವರ ಆತ್ಮಕತೆಯಲ್ಲಿ ಬರೆದ ಪ್ರಕಾರ ಜಾಬ್ಸ್ ತಮ್ಮ ಹದಿಹರೆಯದ ವಯಸ್ಸಿನಲ್ಲಿ ಈ ಪುಸ್ತಕ ಓದಿದ್ದರಂತೆ. ಅಂದಿನಿಂದಲು ಭಾರತಕ್ಕೆ ಹೋಗಬೇಕು ಎಂಬ ಬಯಕೆಯನ್ನು ಹೊಂದಿದ್ದರಂತೆ. ಪ್ರತಿ ವರ್ಷವೂ ಯೋಗಿಯ ಆತ್ಮಕತೆ ಪುಸ್ತಕವನ್ನು ಓದುವ ರೂಢಿಯಿಟ್ಟುಕೊಂಡಿದ್ದರಂತೆ. ಅದರಿಂದ ಪ್ರಭಾವಿತರಾದ ಅವರು ತಮ್ಮ ಸ್ನೇಹಿತನಿಗೆ ಕೊನೆಯ ಉಡುಗೊರೆಯಾಗಿ ಆ ಪುಸ್ತಕವನ್ನು ಕೊಟ್ಟಿದ್ದರಂತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ