/newsfirstlive-kannada/media/post_attachments/wp-content/uploads/2025/01/earthquake-tibet.jpg)
ನೇಪಾಳದ ಗಡಿಯಲ್ಲಿರುವ ಟಿಬೆಟ್ನಲ್ಲಿ ಸುಮಾರು 7.1 ರಿಕ್ಟರ್ ಮಾಪಕದಲ್ಲಿ ಭೂಕಂಪ ಉಂಟಾದ ಪರಿಣಾಮ ಸುಮಾರು 95 ಜನರು ಸಾವನ್ನಪ್ಪಿದ್ದಾರೆ. ಭೀಕರ ಭೂಕಂಪನಕ್ಕೆ ಭಾರತದ ಹಲವು ರಾಜ್ಯಗಳಲ್ಲಿ ಬಿಹಾರ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಕೂಡ ಭೂಮಿ ಕಂಪಿಸಿದ ಅನುಭವಾಗಿದೆ ಎಂದು ವರದಿಯಾಗಿದೆ.
ಶಿಗೇಟ್ಸ್ ನಗರದ ಟಿಂಗ್ರಿಯನ್ನು ಭೂಕಂಪನದ ಕೇಂದ್ರ ಎಂದು ಗುರುತಿಸಲಾಗಿದೆ. ಇದು ಟಿಬೆಟ್ನ ರಾಜಧಾನಿ ಲ್ಹಾಸಾದಿಂದ ಸುಮಾರು 400 ಕಿಲೋ ಮೀಟರ್ ದೂರದಲ್ಲಿದೆ. ನೇಪಾಳದ ಗಡಿಯೊಂದಿಗೆ ಹೊಂದಿಕೊಂಡಿರುವ ಈ ಪ್ರದೇಶ ಮೌಂಟ್ ಎವರೆಸ್ಟ್ ಪ್ರವಾಸಕ್ಕೆ ಬರುವವರ ಟೂರಿಸಂ ಹಬ್ ಎಂದು ಗುರುತಿಸಿಕೊಂಡಿದೆ.
ಇದನ್ನೂ ಓದಿ:ದೆಹಲಿ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆ: ಫೆಬ್ರವರಿ 5 ರಂದು ಮತದಾನ , 8ಕ್ಕೆ ಫಲಿತಾಂಶ
ಎನ್ಸಿಎಸ್ ಹೇಳುವ ಪ್ರಕಾರ ಬೆಳಗಿನ ಜಾವ ಸುಮಾರು 6.35 ರ ಸುಮಾರಿಗೆ ಭೂಕಂಪನ ಉಂಟಾಗಿದೆ. ಒಟ್ಟು ಎರಡು ಬಾರಿ ಭೂಮಿ ಕಂಪಿಸಿದ್ದು, ಮೊದಲ ಭೂಕಂಪನ ಆದ ಕೆಲವೇ ನಿಮಿಷಗಳಲ್ಲಿ ಎರಡನೇ ಬಾರಿ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ. ಎರಡನೇ ಭೂಕಂಪನ ಬೆಳಗಿನ ಜಾವ 7.02 ನಿಮಿಷಕ್ಕೆ ಆಗಿದ್ದು ಅದರ ತೀವ್ರತೆ 4.7 ರಿಕ್ಟರ್ ಮಾಪನದಷ್ಟಿತ್ತು ಎಂದು ಹೇಳಲಾಗಿದೆ. ನಂತರ 7.07 ನಿಮಿಷಕ್ಕೆ ಭೂಮಿ ಮೂರನೇ ಬಾರಿ ಕಂಪಿಸಿದ್ದು ಆಗ ಸುಮಾರು 4.9 ರಿಕ್ಟರ್ ಮಾಪಕ ಭೂಕಂಪ ದಾಖಲಾಗಿದೆ. ಈ ಭೂಕಂಪದ ತೀವ್ರತೆಗೆ ಒಟ್ಟು 95 ಜನರು ಮೃತಪಟ್ಟಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ