ಅಂಬಾನಿ, ನಾರಾಯಣಮೂರ್ತಿ ಮಾತು ನಂಬಬೇಡಿ.. ಬೆಂಗಳೂರಿಗರಿಗೆ ₹95 ಲಕ್ಷ ಪಂಗನಾಮ; ಆಗಿದ್ದೇನು?

author-image
admin
Updated On
ಅಂಬಾನಿ, ನಾರಾಯಣಮೂರ್ತಿ ಮಾತು ನಂಬಬೇಡಿ.. ಬೆಂಗಳೂರಿಗರಿಗೆ ₹95 ಲಕ್ಷ ಪಂಗನಾಮ; ಆಗಿದ್ದೇನು?
Advertisment
  • ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹೆಸರಲ್ಲಿ ಮೋಸ
  • ಇನ್ಫೋಸಿಸ್ ನಾರಾಯಣಮೂರ್ತಿ ವಿಡಿಯೋ ನೋಡಿ ಹಣ ಹೂಡಿಕೆ
  • ನೋಡ, ನೋಡುತ್ತಿದ್ದಂತೆ 90ಕ್ಕೂ ಹೆಚ್ಚು ಲಕ್ಷ ರೂಪಾಯಿ ಹಣ ಗುಳುಂ

ಬೆಂಗಳೂರು: ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ, ಇನ್ಫೋಸಿಸ್ ನಾರಾಯಣಮೂರ್ತಿ ಅಂತಹ ದಿಗ್ಗಜರು ನಿಮಗೇನಾದ್ರೂ ವಿಡಿಯೋ ಕಾಲ್‌ ಮಾಡಿ ಹೇಳಿದ್ರು ನಂಬಬೇಡಿ. ಯಾಕಂದ್ರೆ ಡೀಪ್‌ ಫೇಕ್‌ ಅನ್ನೋ ಮಾಯಜಾಲ ಅತಿ ದೊಡ್ಡ ಅಪಾಯವನ್ನು ಉಂಟು ಮಾಡುತ್ತಿದೆ. ಸೈಬರ್ ವಂಚಕರು ಡೀಪ್‌ ಫೇಕ್ ವಿಡಿಯೋ ಮೂಲಕ ಬೆಂಗಳೂರಿಗರಿಗೆ ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಮುಖೇಶ್ ಅಂಬಾನಿ, ನಾರಾಯಣ ಮೂರ್ತಿ ಸೇರಿದಂತೆ ಪ್ರತಿಷ್ಠಿತ ಶ್ರೀಮಂತ ಉದ್ಯಮಿಗಳ ಡೀಪ್ ಫೇಕ್ ವಿಡಿಯೋ ಮಾಡಿ ವಂಚಿಸುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಪ್ರತಿಷ್ಠಿತ ವ್ಯಕ್ತಿಗಳು ನಮ್ಮ ಜೊತೆ ಮಾತಾಡುತ್ತಿದ್ದಾರೆ ಎಂದು ನಂಬಿ ಲಕ್ಷ, ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ. ಹಣ ವರ್ಗಾವಣೆ ಆಗುತ್ತಿದ್ದಂತೆ ಸೈಬರ್ ವಂಚಕರು 90ಕ್ಕೂ ಹೆಚ್ಚು ಲಕ್ಷ ರೂಪಾಯಿಯನ್ನು ಗುಳುಂ ಮಾಡಿದ್ದಾರೆ.

publive-image

ಸೈಬರ್ ವಂಚಕರು ಇನ್ಫೋಸಿಸ್‌ ನಾರಾಯಣಮೂರ್ತಿ, ಮುಖೇಶ್ ಅಂಬಾನಿ ಅವರೇ ಎಫ್ ಎಕ್ಸ್ ರೋಡ್ ಫ್ಲಾಟ್ ಫಾರ್ಮ್ ಟ್ರೇಡಿಂಗ್ ಬಗ್ಗೆ ಮಾತನಾಡಿದಂತೆ ಫೇಕ್ ವಿಡಿಯೋ ಮಾಡಿದ್ದಾರೆ. ನಾರಾಯಣಮೂರ್ತಿ ಅವರೇ ತಮ್ಮ ಫ್ಲಾಟ್ ಫಾರ್ಮ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ಮಾತನಾಡಿದ್ದು ಪ್ರತ್ಯೇಕ ಎರಡು ವಂಚನೆ ಪ್ರಕರಣದಲ್ಲಿ 86 ಲಕ್ಷ ರೂಪಾಯಿ ವಂಚಿಸಲಾಗಿದೆ.

ಇದನ್ನೂ ಓದಿ: ಯುಎಸ್​ ಚುನಾವಣೆಯಲ್ಲಿ ಹೊಸ ಇತಿಹಾಸ ಬರೆದ ಅಮೆರಿಕನ್ ಭಾರತೀಯರು; 6 ಕ್ಷೇತ್ರಗಳಲ್ಲಿ ಭರ್ಜರಿ ಜಯ 

ಹೈ-ಟೆಕ್‌ ಮೋಸ ನಂ.1
ಖದೀಮರು ಬೆಂಗಳೂರಿನ ಮಹಿಳೆಯೊಬ್ಬರಿಗೆ 67 ಲಕ್ಷ ರೂಪಾಯಿ ವಂಚಿಸಿದ್ದಾರೆ. ಅದು ಹೇಗೆ ಅಂದ್ರೆ ಮೊದಲಿಗೆ ನೀವು ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸುತ್ತಾರೆ. 1.39 ಲಕ್ಷ ಪಾವತಿಸಿಕೊಂಡು ಇದಕ್ಕೆ ಪ್ರತಿಯಾಗಿ 8 ಸಾವಿರ ಲಾಭ ನೀಡಿದ್ದಾರೆ. ಇದೇ ರೀತಿ ಹಂತ-ಹಂತವಾಗಿ ಮಹಿಳೆಯಿಂದ 67 ಲಕ್ಷ ಹಣ ಪಾವತಿಸಿಕೊಂಡು ವಂಚನೆ ಮಾಡಿದ್ದಾರೆ.

publive-image

ಹೈ-ಟೆಕ್‌ ಮೋಸ ನಂ.2
ಬೆಂಗಳೂರಿನ ಅಶೋಕ್ ಕುಮಾರ್ ಎಂಬುವವರಿಗೆ ಆನ್‌ ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿದರೆ ಹೆಚ್ಚಿನ ಹಣ ನೀಡುವುದಾಗಿ ಹೇಳಿದ್ದಾರೆ. ಮುಖೇಶ್ ಅಂಬಾನಿ ಹೆಸರಿನಲ್ಲಿ ಡೀಪ್‌ ಫೇಕ್‌ ಪೋಟೋ ಸೃಷ್ಟಿಸಿ ಖದೀಮರು ವಂಚಿಸಿದ್ದಾರೆ. ಫೇಸ್‌ಬುಕ್ ಮೂಲಕ ಲಿಂಕ್ ಕಳುಹಿಸಿ ಹಣ ಹೂಡಿಕೆ ಮಾಡುವಂತೆ ಹೇಳಿ ಅಶೋಕ್ ಕುಮಾರ್ ಎಂಬುವವರಿಗೆ 19 ಲಕ್ಷ ರೂಪಾಯಿ ವಂಚಿಸಿದ್ದಾರೆ.

ಈ ವಂಚಕರ ಜಾಲ ಸಿನಿಮಾ ನಟ-ನಟಿಯರ ಡೀಪ್‌ ಫೇಕ್‌ ಪೋಟೋ ಅಥವಾ ವಿಡಿಯೋ ಸೃಷ್ಟಿಸಿ ವಂಚಿಸುತ್ತಿದ್ದರು. ಇದೀಗ ಇನ್ಫೋಸಿಸ್ ನಾರಾಯಣಮೂರ್ತಿ, ಮುಖೇಶ್ ಅಂಬಾನಿ ಅವರಂತಹ ಪ್ರತಿಷ್ಠಿತ ವ್ಯಕ್ತಿಗಳ ಹೆಸರಿನಲ್ಲಿ ಆನ್ ಲೈನ್ ಟ್ರೇಡಿಂಗ್ ಹೆಸರಲ್ಲಿ ಡೀಪ್ ಫೇಕ್ ವಿಡಿಯೋ ಸೃಷ್ಟಿಸಿ ತಮ್ಮ ಫ್ಲಾಟ್ ಫಾರ್ಮ್ ನಲ್ಲಿ ಹಣ ಹೂಡಿಕೆ ಮಾಡುವಂತೆ ಹೇಳಿ ವಂಚಿಸುತ್ತಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಹಾಗೂ ಬೆಂಗಳೂರು ಸೆನ್ ಠಾಣೆಯಲ್ಲಿ ಈ ವಂಚನೆಯ ಎರಡು ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment