newsfirstkannada.com

×

ಟೀ ಅಂಗಡಿ ಮಾಲೀಕನಿಗೆ ಬಂಪರ್​​; ಬರೋಬ್ಬರಿ 999 ಕೋಟಿ ರೂ. ಜಮಾ; ಆಮೇಲೇನಾಯ್ತು?

Share :

Published October 14, 2024 at 6:22am

Update October 14, 2024 at 6:25am

    ಎಲ್ಲರಿಗೂ ಕೋಟ್ಯಾಧಿಪತಿ ಆಗಬೇಕು ಅನ್ನೋ ಕನಸು!

    ಹಾಗಾಗಿ ಪ್ಯಾಸೀವ್​​ ಇನ್ಕಮ್​ ಮೇಲೆ ಡಿಪೆಂಡ್​ ಆಗ್ತಾರೆ

    ಕೆಲವೊಮ್ಮೆ ಕೋಟಿ ಬಿಡಿ ಲಕ್ಷ ಗಳಿಸೋದು ಕೂಡ ಕಷ್ಟ

ಎಲ್ಲರಿಗೂ ಕೋಟ್ಯಾಧಿಪತಿ ಆಗಬೇಕು ಅನ್ನೋ ಕನಸು. ಹಾಗಾಗಿ ಆ್ಯಕ್ಟೀವ್​​ ಇನ್ಕಮ್​​ ಬದಲಿಗೆ ಪ್ಯಾಸೀವ್​​ ಇನ್ಕಮ್​ ಮೇಲೆ ಡಿಪೆಂಡ್​ ಆಗಿರುತ್ತಾರೆ. ಕೇವಲ ಸಂಬಳಕ್ಕಾಗಿ ಮಾತ್ರವಲ್ಲ ಯಾವುದಾದ್ರೂ ಒಂದು ಸೈಡ್​ ಬ್ಯುಸಿನೆಸ್​ ಮಾಡುತ್ತಲೇ ಇರ್ತಾರೆ. ಎಷ್ಟು ದುಡಿದ್ರೂ ಕೆಲವೊಮ್ಮೆ ಕೋಟಿ ಬಿಡಿ ಲಕ್ಷ ಗಳಿಸೋದು ಕೂಡ ಕಷ್ಟ. ಇದರ ಮಧ್ಯೆ ಕೆಲವರು ಇದ್ದಕ್ಕಿದ್ದಂತೆ ಶ್ರೀಮಂತರು ಆಗಿಬಿಡುತ್ತಾರೆ. ಇಂಥದ್ದೇ ಒಂದು ಮ್ಯಾಜಿಕಲ್​ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಸಣ್ಣ ಟೀ ಅಂಗಡಿ ನಡೆಸುತ್ತಿರೋ ಪ್ರಭಾಕರ್ ಅನ್ನೋರ ಹೆಂಡತಿ ಖಾತೆಗೆ ಬರೋಬ್ಬರಿ 999 ಕೋಟಿ ರೂ. ಜಮಾ ಆಗಿದೆ. ಅದರಲ್ಲೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿರೋ ಸೇವಿಂಗ್ಸ್​ ಖಾತೆಗೆ 999 ಕೋಟಿ ರೂ. ಜಮಾ ಆಗಿರೋದು. ಈ ವಿಷಯ ತಿಳಿದು ಪ್ರಭಾಕರ್​ ಕಂಗಾಲಾಗಿ ಹೋಗಿದ್ದಾರೆ.

ಸಮಸ್ಯೆ ಹೊತ್ತು ತಂದ 999 ಕೋಟಿ

ತಮ್ಮ ಹೆಂಡತಿ ಖಾತೆಗೆ 999 ಕೋಟಿ ಜಮಾ ಆದ ಕೂಡಲೇ ಪ್ರಭಾಕರ್​ ಮೊದಲು ಶಾಕ್​ ಆಗಿದ್ದಾರೆ. ನಂತರ ತಾಂತ್ರಿಕ ದೋಷದಿಂದ ಏನಾದ್ರೂ ಸಮಸ್ಯೆ ಆಗಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದಾರೆ. ಆದರೆ, ಇದರಿಂದ ಪ್ರಭಾಕರ್​ ಅವರಿಗೆ ಸಮಸ್ಯೆ ಎದುರಾಗಿದೆ. ಜಮಾ ಆಗಿರೋ ₹999 ಕೋಟಿಯನ್ನು ಬ್ಯಾಂಕ್​ ಇನ್ನೂ ಹಿಂಪಡೆದಿಲ್ಲ. ಬದಲಿಗೆ ಬ್ಯಾಂಕ್ ಖಾತೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಚಿಕ್ಕ ಬ್ಯುಸಿನೆಸ್ ನಡೆಸೋ ಪ್ರಭಾಕರ್ ಅವರಿಗೆ 999 ಕೋಟಿ ಸಮಸ್ಯೆಗಳನ್ನೇ ಹೊತ್ತು ತಂದಿದೆ.

ಆರ್ಥಿಕ ತಜ್ಞರು ಏನಂದ್ರು?

ತಾಂತ್ರಿಕ ದೋಷದಿಂದ ಭಾರೀ ದೋಷ ಸಂಭವಿಸಿರುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಅಷ್ಟೇ ಅಲ್ಲದೇ ಇದನ್ನು ಎಚ್ಚರಿಕೆಯಿಂದ ತನಿಖೆ ಮಾಡಬೇಕಾಗುತ್ತದೆ. ಒಂದು ವೇಳೆ ಬ್ಯಾಂಕ್​​ನವ್ರು ಈ ಸಮಸ್ಯೆ ಬಗೆಹರಿಸದಿದ್ರೆ ಆರ್​​ಬಿಐಗೆ ದೂರು ನೀಡಬೇಕಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: PM internship scheme; ಅರ್ಜಿ ಆರಂಭ.. 500 ಕಂಪನಿ, 90 ಸಾವಿರಕ್ಕೂ ಹೆಚ್ಚು ಪೋಸ್ಟ್, ತಕ್ಷಣ ಅಪ್ಲೇ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀ ಅಂಗಡಿ ಮಾಲೀಕನಿಗೆ ಬಂಪರ್​​; ಬರೋಬ್ಬರಿ 999 ಕೋಟಿ ರೂ. ಜಮಾ; ಆಮೇಲೇನಾಯ್ತು?

https://newsfirstlive.com/wp-content/uploads/2024/01/Money-11.jpg

Load More