newsfirstkannada.com

ಬೆಳ್ಳಿ ವಿಗ್ರಹಗಳೇ ಇವನ ಟಾರ್ಗೆಟ್.. ಕೊನೆಗೂ ಬಸವೇಶ್ವರರ ಮೂರ್ತಿ ಕದ್ದ ಕೇಸ್​​ನಲ್ಲಿ ಲಾಕ್..!

Share :

Published June 5, 2023 at 7:18am

    ಬೆಳ್ಳಿ ವಿಗ್ರಹಗಳೇ ಈ ಖತರ್ನಾಕ್ ಕಳ್ಳನ ಟಾರ್ಗೆಟ್

    ಶ್ರೀ ಶರಣಬಸವೇಶ್ವರರ ಅವಳಿ ಬೆಳ್ಳಿ ಮೂರ್ತಿ ಕದ್ದ ಕಳ್ಳ

    ಕೊನೆಗೂ ಪೊಲೀಸ್​​ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದ ಈ ಖದೀಮ

ಕಲಬುರಗಿ: ಶ್ರೀ ಶರಣಬಸವೇಶ್ವರರ ಅವಳಿ ಬೆಳ್ಳಿ ಮೂರ್ತಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸ್​ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರ ಮೂಲದ ಕುಖ್ಯಾತ ಕಳ್ಳ ಗಣೇಶ್ ಜಾಧವ್ ಬಂಧಿತ ಆರೋಪಿ. ನಿಂಬರ್ಗಾ ಮತ್ತು ಹಡಲಗಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿ ಎಸ್ಕೇಪ್​ ಆಗಿದ್ದ. ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಂಬರ್ಗಾ ಠಾಣೆ ಪೊಲೀಸರಿಂದ ಕುಖ್ಯಾತ ಕಳ್ಳನನ್ನು ಬಂಧಿಸಿದ್ದಾರೆ.

2021ರ ನವೆಂಬರ್ ತಿಂಗಳಲ್ಲಿ ನಿಂಬರ್ಗಾ ಗ್ರಾಮದ ಶ್ರೀ ಶರಣಬಸವೇಶ್ವರರ ದೇಗುಲಕ್ಕೆ ಕನ್ನ ಹಾಕಿ 4 ಕೆಜಿ ಬೆಳ್ಳಿಯ ಅವಳಿ ಮೂರ್ತಿಗಳನ್ನ ಕಳ್ಳತನ ಮಾಡಿ ಪರಾರಿಯಾಗಿದ್ದ.

ಇದರ ಜೊತೆಗೆ ಹಡಲಗಿ ಗ್ರಾಮದ ಮನೆಯೊಂದಕ್ಕೆ ಕನ್ನ ಹಾಕಿ 20 ಗ್ರಾಂ. ಚಿನ್ನ ದೋಚಿದ್ದ. ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಂಬರ್ಗಾ ಪೊಲೀಸ್ ಅಧಿಕಾರಿಗಳು 20 ಗ್ರಾಂ. ಚಿನ್ನ, 4 ಕೆಜಿಯ ಬೆಳ್ಳಿ ಅವಳಿ ಮೂರ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಿ ವಿಗ್ರಹಗಳೇ ಇವನ ಟಾರ್ಗೆಟ್.. ಕೊನೆಗೂ ಬಸವೇಶ್ವರರ ಮೂರ್ತಿ ಕದ್ದ ಕೇಸ್​​ನಲ್ಲಿ ಲಾಕ್..!

https://newsfirstlive.com/wp-content/uploads/2023/06/kalaburagi.jpg

Load More