ಆಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ನರ್ಸ್ ಆಗಿದ್ದ ಲೂಸಿ
ಬಾಣಂತಿಯರು ಶೌಚಾಲಯಕ್ಕೆ ಹೋದಾಗ ಮಕ್ಕಳ ಹತ್ಯೆ
ಸೀರಿಯಲ್ ಕಿಲ್ಲರ್ ನರ್ಸ್ಗೆ ಶಿಕ್ಷೆ ನೀಡಿದ ಕೋರ್ಟ್
ನರ್ಸ್ ಕೆಲಸದಂತ ಪುಣ್ಯದ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ನವಜಾತ ಶಿಶುಗಳ ಪಾಲಿಗೆ ನರರಾಕ್ಷಸಿಯಾಗಿದ್ದಾಳೆ. ಏನೂ ಅರಿಯದ 7 ಮುಗ್ಧ ಕಂದಮ್ಮಗಳನ್ನ ಕೊಂದು ಸೀರಿಯಲ್ ಕಿಲ್ಲರ್ ಹಣೆಪಟ್ಟಿ ಕಟ್ಟಿಕೊಂಡಿದ್ದಾಳೆ. ಈ ಮಕ್ಕಳ ಸೀರಿಯಲ್ ಕಿಲ್ಲರ್ಗೆ ಭಾರತ ಮೂಲದ ಸಿಬ್ಬಂದಿಯೂ ಒಬ್ಬರು ಸಾಥ್ ನೀಡಿರೋದು ಶಾಕ್ ಉಂಟುಮಾಡಿದೆ.
ನರರಾಕ್ಷಸಿ ನರ್ಸ್
ಇಂಗ್ಲೆಂಡ್ನ ಆಸ್ಪತ್ರೆಯೊಂದರ ಹೆರಿಗೆ ವಾರ್ಡ್ನಲ್ಲಿ ಈ ಲೂಸಿ ಲೆಟ್ಟಿ ಕಾರ್ಯ ನಿರ್ವಹಿಸುತ್ತಿದ್ದಳು. ಈ ವೇಳೆ ಹಲವು ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಕೆಲಸವನ್ನು ಈ ಲೂಸಿ ಮಾಡುತ್ತಿದ್ದಳು. ಆದರೆ ಆ ಮೇಲೆ ಈಕೆಗೆ ಅದೇನಾಗ್ತಿತ್ತೋ ಗೊತ್ತಿಲ್ಲ. ಬಾಣಂತಿಯರು ಮಗುವನ್ನು ಬಿಟ್ಟು ಶೌಚಾಲಯಕ್ಕೆ ಹೋದಾಗ ಯಾರಿಗೂ ತಿಳಿಯಂದಂತೆ ಕೊಲೆ ಮಾಡುತ್ತಿದ್ದಳು.. ಹೀಗೆ ಈ ಲೂಸಿ ಲೆಟ್ಟಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ನವಜಾತ ಶಿಶುಗಳನ್ನ ಹತ್ಯೆಮಾಡಿದ್ದಳು. ಸಿರಿಯಲ್ ಮಕ್ಕಳ ಕಿಲ್ಲರ್ ಆಗಿ ಎಲ್ಲರಿಗೂ ಶಾಕ್ ನೀಡಿದ್ದಾಳೆ.
7 ಮಕ್ಕಳನ್ನ ಕೊಂದ ರಾಕ್ಷಸಿಗೆ ಜೀವಾವಧಿ ಶಿಕ್ಷೆ ಪ್ರಕಟ
ಬಾಳಿ ಬದುಕಬೇಕಿದ್ದ 7 ಮಕ್ಕಳ ಜೀವವನ್ನು ಕಿತ್ತುಕೊಂಡ ಲೂಸಿ ಲೆಟ್ಟಿ ಎಂಬ ರಾಕ್ಷಸಿಗೆ ಲಂಡನ್ನ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಕೋರ್ಟ್ ಈ ಬಗ್ಗೆ ತೀರ್ಪು ಪ್ರಕಟಿಸುತ್ತಿದ್ದಂತೆ ಇಂಗ್ಲೆಂಡ್ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.. ಅಲ್ಲದೇ ಪೊಲೀಸರ ವಿಚಾರಣೆ ವೇಳೆ ಲೂಸಿ ಇನ್ನೂ ಹಲವರ ಹತ್ಯೆಗೆ ಪ್ರಯತ್ನಿಸಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಮಾತ್ರವಲ್ಲದೇ ಈಕೆ ಇನ್ನೂ 6 ಮಕ್ಕಳ ಹತ್ಯೆಗೆ ಸಂಚು ರೂಪಿಸಿದ್ದು ಪೋಷಕರನ್ನ ಬೆಚ್ಚಿ ಬೀಳುವಂತೆ ಮಾಡಿದೆ.
ಒಟ್ನಲ್ಲಿ ನವಜಾತ ಶಿಶುಗಳ ಪಾಲಿಗೆ ಎರಡನೇ ತಾಯಾಗಿ ಆಸ್ಪತ್ರೆ ವಾರ್ಡ್ನಲ್ಲಿ ಮಮತೆ ನೀಡಬೇಕಿದ್ದ ಓರ್ವ ನರ್ಸ್ ನಡೆಸಿರೋ ಕೃತ್ಯ 7 ತಾಯಂದಿರ ಕಣ್ಣೀರಿಗೆ ಕಾರಣವಾಗಿದೆ. ಈ ಘಟನೆ ಬಳಿಕ ಯಾರನ್ನ ನಂಬಬೇಕು ಯಾರನ್ನ ನಂಬಬಾರದು ಅನ್ನೋ ಯಕ್ಷ ಪ್ರಶ್ನೆ ಎಲ್ಲರನ್ನ ಕಾಡತೊಡಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ