newsfirstkannada.com

2 ಕೋಟಿಗೂ ಅಧಿಕ ನೋಟು, 50 ಲಕ್ಷದ ನಾಣ್ಯಗಳು.. ಬೆಂಗಳೂರಲ್ಲಿ ವಿನಾಯಕನಿಗೆ ಸ್ಪೆಷಲ್ ಶೃಂಗಾರ..! ಫೋಟೋಸ್

Share :

Published September 18, 2023 at 2:33pm

    ನೋಟು, ನಾಣ್ಯದಿಂದಲ್ಲೇ ಇಡೀ ದೇವಾಲಯ ಸಿಂಗಾರ

    ನೋಡಲು 2 ಕಣ್ಣು ಸಾಲದು, ಪಾರ್ವತಿ ಸುತ ಗಣೇಶನ ವಿಗ್ರಹ

    ನೋಟುಗಳ ಬಣ್ಣಗಳ ಆಧಾರದ ಮೇಲೆ ಹೂವಿನ ಹಾರ ತಯಾರಿ

ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಡಗರಕ್ಕೆ ಒಂದಲ್ಲ, ಎರಡಲ್ಲ ಬರೋಬ್ಬರಿ 2 ಕೋಟಿಗೂ ಹೆಚ್ಚು ನೋಟುಗಳು ಹಾಗೂ 50 ಲಕ್ಷ ಮೌಲ್ಯದ ನಾಣ್ಯಗಳಿಂದ ವಿಘ್ನ ವಿನಾಶಕ ವಿನಾಯಕನನ್ನು ಸಿಂಗಾರ ಮಾಡಲಾಗಿದೆ. ನಗರದ ಪುಟ್ಟೇನಹಳ್ಳಿಯ ಸತ್ಯಸಾಯಿ ಗಣಪತಿ ದೇವಾಲಯ ಬರೀ ದುಡ್ಡಲ್ಲೇ ಶೃಂಗಾರಗೊಂಡು ಕಂಗೊಳಿಸುತ್ತಿದೆ.

ಜೆ.ಪಿ ನಗರದ ಶ್ರೀಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್​ನಿಂದ ವೈಭವದ ಗಣೇಶೋತ್ಸವ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ದೇವಾಲಯವನ್ನು 10, 20, 50, 100, 200, 500, 2000 ರೂಪಾಯಿಗಳ ನೋಟುಗಳಿಂದ ವಿಶೇಷವಾಗಿ ಸೌಂದರ್ಯಯುತವಾಗಿ ಡೆಕೋರೇಷನ್ ಮಾಡಲಾಗಿದೆ. ನೋಟುಗಳ ಕಲರ್​​ಗೆ ತಕ್ಕಂತೆ ದೊಡ್ಡ ದೊಡ್ಡ ಹಾರಗಳನ್ನು ತಯಾರಿಸಲಾಗಿದೆ. ನೋಡಲು ಅತ್ಯದ್ಭುತವಾಗಿ ಕಾಣುತ್ತಿದ್ದು ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನೋಟು, ನಾಣ್ಯಗಳಿಂದಲೇ ಅಲಂಕಾರ ಮಾಡಿದ್ದರಿಂದ ದೇವಾಲಯಕ್ಕೆ ಬರುವ ಭಕ್ತರ ಮೇಲೆ 22 ಸಿಸಿಟಿವಿ ಕಣ್ಗಾವಲಿರಿಸಲಾಗಿದೆ. ಅಲಂಕಾರ ಮಾಡಿದ ನೋಟುಗಳನ್ನು ಯಾರು ಮುಟ್ಟದಂತೆ ಜಾಗ್ರತೆ ವಹಿಸಲಾಗಿದ್ದು ಬ್ಯಾರಿಕೇಡ್, ಗನ್​ ಮ್ಯಾನ್, ಸೆಕ್ಯೂರಿಟಿ ಹಾಗೂ ಟ್ರಸ್ಟ್​ ಸದಸ್ಯರು ನಿರಂತರವಾಗಿ ಪರಿಶೀಲನೆ ಮಾಡುತ್ತಿದ್ದಾರೆ.

ದೇವರು ಹಾಗೂ ದೇವಾಲಯವನ್ನು ನೋಟುಗಳಿಂದ ಅಲಂಕಾರ ಮಾಡಿರುವುದರ ಜೊತೆಗೆ ಚಂದ್ರಯಾನ- 3, ಜೈ ಕರ್ನಾಟಕ, ಜೈ ಜವಾನ್‌ ಜೈ ಕಿಸಾನ್‌, ಮೇರಾ ಭಾರತ್‌ ಮಹಾನ್‌ ಥೀಮ್ಸ್​ ಕೂಡ ಅಳವಡಿಕೆ ಮಾಡಲಾಗಿದೆ. ಇದೆಲ್ಲವನ್ನೂ ಮಾಡಲು ಹಬ್ಬಕ್ಕೂ ಮೊದಲೇ ಸುಮಾರು 150ಕ್ಕೂ ಹೆಚ್ಚು ಜನರು 15 ದಿನ ನಿರಂತರವಾಗಿ ಶ್ರಮ ವಹಿಸಿದ್ದಾರೆ. ಇಂದು ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತಲಿದ್ದು ಸಾಕಷ್ಟು ಭಕ್ತರು ಸಾಲಿನಲ್ಲಿ ದರ್ಶನ ಪಡೆಯುತ್ತಿದ್ದಾರೆ.

ಮೇಲಿನ ಫೋಟೋಗಳಲ್ಲಿ ನಾಣ್ಯಗಳನ್ನು ಬಳಸಿಕೊಂಡು ಕೊಡಗಳಿಗೆ ಹಾಗೂ ಚಂದ್ರಯಾನ- 3ಯ ಥೀಮ್​ ಅನ್ನು ಸಿದ್ಧ ಪಡಿಸಿರುವುದು. ಹಾಗೂ ನೋಟುಗಳಿಂದ ಹಾರಗಳನ್ನು ತಯಾರು ಮಾಡಿ ಡೆಕೋರೆಶನ್ ಮಾಡಿರುವುದು ಕಾಣಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ಕೋಟಿಗೂ ಅಧಿಕ ನೋಟು, 50 ಲಕ್ಷದ ನಾಣ್ಯಗಳು.. ಬೆಂಗಳೂರಲ್ಲಿ ವಿನಾಯಕನಿಗೆ ಸ್ಪೆಷಲ್ ಶೃಂಗಾರ..! ಫೋಟೋಸ್

https://newsfirstlive.com/wp-content/uploads/2023/09/BNG_JP_NAGAR_VINAYAKA.jpg

Load More