newsfirstkannada.com

ಸುಮಾರು 5 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ದೇವಾಲಯ ದಿಢೀರ್​​ ಪ್ರತ್ಯಕ್ಷ.. ಏನಿದು ಸ್ಟೋರಿ..?

Share :

Published September 22, 2023 at 6:10pm

    97 ಅಡಿ ಜಲಾಶಯದ ನೀರಿನ‌ ಮಟ್ಟ ಕುಸಿಯುತ್ತಿರುವುದರಿಂದ ಪ್ರತ್ಯಕ್ಷವಾದ ದೇವಾಲಯ!

    ಕೇವಲ ಮೂರು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಏಕಾಏಕಿ ಪ್ರತ್ಯಕ್ಷವಾದ ಟೆಂಪಲ್

    ಮೈಸೂರು ತಾಲೂಕಿನ ಬೋರೆ ಆನಂದೂರು ಬಳಿಯ ಹಿನ್ನೀರಿನಲ್ಲಿ ದೇವಸ್ಥಾನ ಗೋಚರ

ಮಂಡ್ಯ: ತಮಿಳುನಾಡಿಗೆ ನೀರು ಹರಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ಈ ನಡುವೆಯೂ ತಮಿಳುನಾಡಿಗೆ ಕಾವೇರಿ ಹರಿದಿದ್ದು, ಶುಕ್ರವಾರವೂ 5 ಸಾವಿರ ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಇದರ ಮಧ್ಯೆ 5 ವರ್ಷದಿಂದ ಜನರ ಕಣ್ಣಿಗೆ ಕಾಣಿಸದ ಮೈಸೂರು ತಾಲೂಕಿನ ಬೋರೆ ಆನಂದೂರು ಬಳಿಯಿರೋ ದೇವಾಲಯ ಮತ್ತೆ ಪ್ರತ್ಯಕ್ಷವಾಗಿದೆ.

ಇದನ್ನು ಓದಿ: Boeing India: ಅಮೆರಿಕ ಬಳಿಕ ಬೆಂಗಳೂರಲ್ಲಿ ಬೋಯಿಂಗ್‌ ಅತಿ ದೊಡ್ಡ ಏರ್​ಸ್ಪೇಸ್​ ಪಾರ್ಕ್; ಇದು ಓದಲೇಬೇಕಾದ ಸ್ಟೋರಿ!

ಹೌದು, ಕೆಆರ್​ಎಸ್​ ಜಲಾಶಯದಲ್ಲಿ ಮುಳುಗಡೆಗೊಂಡಿದ್ದ ನಾರಾಯಣಸ್ವಾಮಿ ದೇವಾಲಯ ಮತ್ತೆ ಪ್ರತ್ಯಕ್ಷವಾಗಿದೆ. ತಮಿಳುನಾಡಿಗೆ ನೀರು ಹೋಗುತ್ತಿದ್ದಂತೆ ಕಾವೇರಿ ಒಡಲು ಬರಿದಾಗುತ್ತಿದೆ. ಜಲಾಶಯದ ಹಿನ್ನೀರಿನಲ್ಲಿ ದೇವಾಲಯ ಮುಳುಗಡೆಯಾಗಿತ್ತು. ಅದು ಅಲ್ಲದೆ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ನಾರಾಯಣಸ್ವಾಮಿ ದೇವಾಲಯ ಪ್ರತ್ಯಕ್ಷಗೊಂಡಿದೆ. ಇನ್ನೂ, ಕೆಆರ್​ಎಸ್​ ಜಲಾಶಯ ನಿರ್ಮಾಣದ ವೇಳೆ ದೇವರ ವಿಗ್ರಹವನ್ನ ಬೇರೆಡೆ ಪ್ರತಿಷ್ಠಾಪನೆ ಮಾಡಲಾಗಿತ್ತು. ದೇವಾಲಯದ ಗೋಪುರವನ್ನ ಮಾತ್ರ ಇಲ್ಲಿ ಉಳಿಸಲಾಗಿತ್ತು. ಇದೀಗ 97 ಅಡಿ ಜಲಾಶಯದ ನೀರಿನ‌ ಮಟ್ಟ ಕುಸಿದಿದ್ದರಿಂದ ದೇವಾಲಯ ಪ್ರತ್ಯಕ್ಷವಾಗಿದೆ.

ಇನ್ನೂ ಕಾವೇರಿ ನೀರಿಗಾಗಿ ನಡೆಯುತ್ತಿರೋ ಹೋರಾಟ ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆಯುತ್ತಿದೆ. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ವೇದಿಕೆ, ರೈತ ಸಂಘಟನೆಗಳು ನಾಳೆ ಮಂಡ್ಯ ಬಂದ್‌ಗೆ ಕರೆ ನೀಡಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಂಡ್ಯ ಬಂದ್ ಆಚರಿಸಲು ನಿರ್ಧಾರ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಮಾರು 5 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ದೇವಾಲಯ ದಿಢೀರ್​​ ಪ್ರತ್ಯಕ್ಷ.. ಏನಿದು ಸ್ಟೋರಿ..?

https://newsfirstlive.com/wp-content/uploads/2023/09/temple-1.jpg

Load More