ಮಾಲೀಕನ ಸರ್ಪ್ರೈಸ್ ಗಿಫ್ಟ್ ಕಂಡು ನೌಕರರು ಶಾಕ್
ಎಷ್ಟು ಕಾರುಗಳನ್ನು ಗಿಫ್ಟ್ ಆಗಿ ನೀಡಿದ್ದಾರೆ ಗೊತ್ತಾ..?
ಹೃದಯವಂತ ಎಂ.ಕೆ.ಭಾಟಿಯಾ ಈ ಬಗ್ಗೆ ಹೇಳಿದ್ದೇನು..?
ಹರಿಯಾಣದ ಫಾರ್ಮಾ ಕಂಪನಿ (Pharma Company) ಉದ್ಯೋಗಿಗಳಿಗೆ ಮಾಲೀಕ ಭರ್ಜರಿ ದೀಪಾವಳಿ ಗಿಫ್ಟ್ ಕೊಟ್ಟಿದ್ದಾರೆ. ಮಿಟ್ಸ್ಕಾರ್ಟ್ (MitsKart) ಅಧ್ಯಕ್ಷ ಎಂ.ಕೆ.ಭಾಟಿಯಾ ಅವರು, ತಮ್ಮ 12 ನೌಕರರಿಗೆ ಟಾಟಾ ಪಂಚ್ (Tata Punch) ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕಂಪನಿ ಮಾಲೀಕ ಸರ್ಪ್ರೈಸ್ ಆಗಿ ನೀಡಿದ ಗಿಫ್ಟ್ ಕಂಡು ಉದ್ಯೋಗಿಗಳೆಲ್ಲ ಒಂದು ಕ್ಷಣ ಶಾಕ್ ಆಗಿದ್ದಾರೆ. ಕಂಪನಿ ಶುರುವಾದಾಗಿನಿಂದ ಉದ್ಯೋಗಿಗಳು ನನ್ನ ಜೊತೆ ಕಷ್ಟಪಟ್ಟು ದುಡಿದಿದ್ದಾರೆ. ಹೀಗಾಗಿ ದೀಪಾವಳಿ ಗಿಫ್ಟ್ ಆಗಿ ನೀಡುತ್ತಿದ್ದೇನೆ. ಅವರೆಲ್ಲರೂ ನನ್ನ ಸ್ಟಾರ್ ಸೆಲೆಬ್ರಿಟಿಗಳು. ಅವರ ಶ್ರಮಕ್ಕೆ ಈ ಗಿಫ್ಟ್ ನೀಡಿದ್ದೇವೆ. ಮುಂದೆ ಇನ್ನು 50 ಕಾರುಗಳಿಗೆ ವಿಸ್ತರಿಸುವ ಚಿಂತನೆ ಇದೆ ಎಂದಿದ್ದಾರೆ.
ನನ್ನ ಸಹೋದ್ಯೋಗಿಗಳ ಹಾರ್ಡ್ ವರ್ಕ್ಗೆ ಫಿದಾ ಆಗಿದ್ದೇನೆ. ಅದೇ ಕಾರಣಕ್ಕೆ ನಾನು ಅವರಿಗೆ ವಿಶೇಷ ಗಿಫ್ಟ್ ನೀಡುತ್ತಿದ್ದೇನೆ. ಕಂಪನಿ ಶುರುವಾದಾಗಿಂದ ನನ್ನ ಜೊತೆಯೇ ಇದ್ದು, ನಮ್ಮ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ಅವರಿಗಾಗಿ ಇಷ್ಟೂ ಮಾಡದಿದ್ದರೆ ಹೇಗೆ ಎಂದಿದ್ದಾರೆ. ಇನ್ನು ಭಾಟಿಯಾ ಅವರು ಕಾರುಗಳನ್ನು ಗಿಫ್ಟ್ ಆಗಿ ನೀಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟಾಟಾ ಪಂಚ್ ಅನ್ನು 2021ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. 6 ಲಕ್ಷದಿಂದ ಅವುಗಳ ಬೆಲೆ ಶುರುವಾಗುತ್ತದೆ. ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ನಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ