newsfirstkannada.com

ದಸರಾ ಆನೆ ಅರ್ಜುನ ಸಾವು.. ಇಂದು ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ.. ರಾಜವಂಶಸ್ಥರಿಂದಲೂ ಅಂತಿಮ ನಮನ

Share :

Published December 5, 2023 at 7:31am

    ಎಂಟು ಬಾರಿ ವಿಶ್ವ ವಿಖ್ಯಾತ ಮೈಸೂರು ಅಂಬಾರಿ ಹೊತ್ತಿದ್ದ ಅರ್ಜುನ

    ಜನರಿಗೆ ಕಂಟಕವಾಗಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾವು

    ಅರಮನೆಯ ಪುರೋಹಿತರಿಂದ ಅರ್ಜುನನಿಗೆ ಅಂತಿಮ ವಿಧಿ ವಿಧಾನ

ಹಾಸನ: ಕಾರ್ಯಾಚರಣೆಯಲ್ಲಿ ಕಾಡಾನೆಯನ್ನು ಸೆರೆ ಹಿಡಿಯುವಾಗ 8 ಬಾರಿ ಮೈಸೂರು ದಸರಾದ ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಸಾವನ್ನಪ್ಪಿದೆ. ಇಂದು ಸಕಲ ಸರ್ಕಾರಿ ಗೌರವ ಹಾಗೂ ರಾಜ ಮರ್ಯಾದೆಯೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಸಕಲೇಶಪುರ ತಾಲೂಕಿನ ಯಸಳೂರು ಸಮೀಪದ ನೆಡುತೋಪಿನಲ್ಲಿ ಅರ್ಜುನನ ಅಂತ್ಯಕ್ರಿಯೆಯನ್ನು ಇಂದು ಬೆಳಗ್ಗೆ 11 ಗಂಟೆ ನಂತರ ನಡೆಸಲಾಗುತ್ತದೆ. ಅರಮನೆಯ ಪುರೋಹಿತರಿಂದ ಅಂತಿಮ ವಿಧಿ ವಿಧಾನ ನೆರವೇರಿಸಲಾಗುತ್ತದೆ. ಈ ವೇಳೆ ಅರ್ಜುನನಿಗೆ ಮೈಸೂರು ಅರಮನೆಯ ರಾಜ ವಂಶಸ್ಥರು ಅಂತಿಮ ಗೌರವ ಸಲ್ಲಿಸಲಿದ್ದಾರೆ.

ಮೈಸೂರು ದಸರಾ ಆನೆ ಅರ್ಜುನ

ಸತತ 8 ಬಾರಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಜನರಿಗೆ ಕಂಟಕವಾಗಿದ್ದ ಕಾಡಾನೆಯನ್ನು ಸೆರೆ ಹಿಡಿಯುವಾಗ ಸಾವನ್ನಪ್ಪಿದ್ದಾನೆ. ಹಾಸನದ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಅರಣ್ಯ ಇಲಾಖೆ ಸಿಬ್ಬಂದಿ 4 ಸಾಕಾನೆಗಳೊಂದಿಗೆ ಕಾಡಾನೆಗಳ ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ. ಹೀಗಾಗಿ ಮದಗಜಗಳ ಕಾಳಗದಲ್ಲಿ ಅರ್ಜುನ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಸರಾ ಆನೆ ಅರ್ಜುನ ಸಾವು.. ಇಂದು ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ.. ರಾಜವಂಶಸ್ಥರಿಂದಲೂ ಅಂತಿಮ ನಮನ

https://newsfirstlive.com/wp-content/uploads/2023/12/ARJUN_LAST.jpg

Load More