ರೈತನ ಮಗನಾಗಿದ್ದ ಪಲ್ಲವಿ ಪ್ರಶಾಂತ್ ಈಗ ಬಿಗ್ಬಾಸ್ ಸೀಸನ್ 7 ವಿನ್ನರ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಬಿಗ್ಬಾಸ್ ವಿಜೇತರ ಹೆಸರು
ಬಿಗ್ಬಾಸ್ ಸೀಸನ್ 7ಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದ ಪಲ್ಲವಿ ಪ್ರಶಾಂತ್
ತೆಲುಗಿನ ಬಿಗ್ಬಾಸ್ ಸೀಸನ್ 7 ವಿನ್ನರ್ ಯಾರೆಂದು ಪ್ರಕಟವಾಗುವ ಮುನ್ನವೇ ವಿಜೇತರ ಹೆಸರು ಸೋರಿಕೆಯಾಗಿದೆ. ಹೌದು, ನಾಗಾರ್ಜುನ ನಿರೂಪಣೆಯಲ್ಲಿ ಅದ್ಧೂರಿಯಾಗಿ ಮೂಡಿ ಬರುತ್ತಿರೋ ರಿಯಾಲಿಟಿ ಶೋ ಇದಾಗಿದೆ. 100 ದಿನಗಳ ಕಾಲ ಮನರಂಜನೆಯ ನಂತರ ಮುಕ್ತಾಯಗೊಳ್ಳುತ್ತಿದೆ ಬಿಗ್ಬಾಸ್ ಸೀಸನ್ 7.
ಈಗಾಗಲೇ ಆರು ಸೀಸನ್ಗಳು ಯಶಸ್ವಿಯಾಗಿ ಮುಗಿಸಿಕೊಂಡು ಬಿಗ್ಬಾಸ್ ಸೀಸನ್ 7 ಕೊನೆಗೊಳ್ಳುತ್ತಿದೆ. ಆದರೆ ಫೈನಲ್ ಪ್ರಸಾರಕ್ಕೂ ಮುನ್ನವೇ ವಿಜೇತ ಯಾರು ಎಂಬುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಗ್ಬಾಸ್ 7 ಸೀಸನ್ ಸೆಪ್ಟೆಂಬರ್ 3ರಂದು ಪ್ರಾರಂಭವಾಗಿ ಅಂತ್ಯ ಕಂಡಿದೆ. ಹಿರಿಯ ನಟ ನಾಗಾರ್ಜುನ ಅವರು ಬಿಗ್ಬಾಸ್ ಸೀಸನ್ 7 ಹೋಸ್ಟ್ ಮಾಡುತ್ತಿದ್ದಾರೆ. ಕೊನೆಯ ಗ್ರ್ಯಾಂಡ್ ಫಿನಾಲೆ ಶೂಟಿಂಗ್ ನಡೆಯುತ್ತಿತ್ತು.
ಆರು ಮಂದಿ ಫೈನಲಿಸ್ಟ್ ಆಗಿದ್ದರು. 19 ಜನರು ಸ್ಪರ್ಧಿಗಳಲ್ಲಿ ಶಿವಾಜಿ, ಪ್ರಿಯಾಂಕಾ ಜೈನ್, ಪಲ್ಲವಿ ಪ್ರಶಾಂತ್, ಅಮರದೀಪ್ ಚೌಧರಿ, ರಾಜಕುಮಾರ ಯವರ್, ಎಂದು ಅರ್ಜುನರು ಭವ್ಯ ಫೈನಲ್ನಲ್ಲಿದ್ದರು. ಆದರೆ ನಟ ನಾಗಾರ್ಜುನ್ ಬಿಗ್ಬಾಸ್ ವಿನ್ನರ್ ಯಾರೆಂದು ಘೋಷಣೆ ಮಾಡುವುದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹೀಗಾಗಿ ಟಿವಿಯಲ್ಲಿ ಪ್ರಸಾರವಾಗುವ ಮೊದಲೇ ಪಲ್ಲವಿ ಪ್ರಶಾಂತ್ ಅವರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಎಂಬ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ರೈತನ ಮಗ ಪಲ್ಲವಿ ಪ್ರಶಾಂತ್ ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಆತನ ಫೋಟೋಗಳನ್ನು ಶೇರ್ ಮಾಡಿಕೊಂಡು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪಲ್ಲವಿ ಪ್ರಶಾಂತ್ 13ನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಪ್ರವೇಶಿಸಿದ್ದರು. ರೈತ ಕುಟುಂಬದಿಂದ ಬಂದಿರುವ ಅವರು, ರೈತನ ಮಗನಾಗಿದ್ದು, ಫೈನಲ್ ತಲುಪಿದ್ದು, ಇದೀಗ ಪಲ್ಲವಿ ಪ್ರಶಾಂತ್ ಅವರು ಚಾಂಪಿಯನ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ