ಕ್ರಿಕೆಟ್ ಆಡುವಾಗ ಮಾತಿಗೆ ಮಾತು ಬೆಳೆದು ಜೋರು ಜಗಳ
ಕ್ಲೀನ್ ಬೌಲ್ಡ್ ಮಾಡಿದ್ದಕ್ಕೆ 14 ವರ್ಷದ ಬಾಲಕನ ಮೇಲೆ ಹಲ್ಲೆ
ಅಣ್ಣ ತಮ್ಮ ಇಬ್ಬರು ಸೇರಿ ಬಾಲಕನ ಕತ್ತು ಹಿಸುಕಿ ಕೊಂದರು..!
ಕಾನ್ಪುರ: ಕ್ರಿಕೆಟ್ನಲ್ಲಿ ಕ್ಲೀನ್ ಬೌಲ್ಡ್ ಮಾಡಿದ್ದಕ್ಕೆ 14 ವರ್ಷದ ಬಾಲಕನನ್ನು 17 ವರ್ಷದ ಕಿಡಿಗೇಡಿಯೋರ್ವ ಕತ್ತು ಹಿಸುಕಿ ಕೊಂದಿದ್ದಾನೆ. ಈ ಕೃತ್ಯ ಉತ್ತರ ಪ್ರದೇಶ ಕಾನ್ಪುರದ ರಾಹ್ತಿ ದೇರಾ ಎಂಬ ಗ್ರಾಮದಲ್ಲಿ ನಡೆದಿದೆ.
ಇಂದು ಗ್ರಾಮದ ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಮೃತ ಬಾಲಕ ಬ್ಯಾಟಿಂಗ್ ಮಾಡುತ್ತಿದ್ದ ಆರೋಪಿಗೆ ಬೌಲಿಂಗ್ ಮಾಡುತ್ತಿದ್ದ. ಬೌಲಿಂಗ್ನಲ್ಲಿ ಆರೋಪಿಯನ್ನು ಕ್ಲೀನ್ ಬೌಲ್ಡ್ ಮಾಡಿದ್ದಾನೆ. ಔಟಾದ್ರೂ ಪಿಚ್ನಿಂದ ಹೊರ ಹೋಗಲು ಆರೋಪಿ ಹಿಂದೆ ಮುಂದೆ ನೋಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಜಗಳ ಆಗಿದೆ. ಈ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.
ಇನ್ನು, ಬೌಲ್ಡ್ ಮಾಡಿದ್ದ ಬಾಲಕನೊಂದಿಗೆ ಜಗಳವಾಡಲು ಆರೋಪಿ ತನ್ನ ಅಣ್ಣನನ್ನು ಕರೆದುಕೊಂಡು ಬಂದಿದ್ದ. ಅಣ್ಣ, ತಮ್ಮ ಇಬ್ಬರು ಸೇರಿ ಗ್ರೌಂಡ್ನಲ್ಲೇ ಮೃತ ಬಾಲಕನನ್ನು ಎಳೆದಾಡಿದ್ದಾರೆ. ಅಲ್ಲದೇ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಕ್ರಿಕೆಟ್ ಆಡುತ್ತಿದ್ದ ಹುಡುಗರು ಮೃತ ಬಾಲಕನ ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ