ಸಾಕಷ್ಟು ರೀಲ್ಸ್ ಮಾಡುವ ಮೂಲಕ ಫೇಮಸ್ ಆದ ಸೀಮಾ
ಪಬ್ಜೀ ಪ್ರಿಯಕರನಿಗಾಗಿ ಮಕ್ಕಳ ಜತೆ ಭಾರತಕ್ಕೆ ಬಂದ ಹೈದರ್
ಹೊಸ ವರ್ಷದ ದಿನವೇ ಗುಡ್ನ್ಯೂಸ್ ಕೊಟ್ಟ ಸೀಮಾ ಹೈದರ್
ಸೀಮಾ ಹೈದರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಪಬ್ಜೀ ಪ್ರಿಯಕರ ಸಚಿನ್ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಸೀಮಾ ಹೈದರ್ ಸಾಕಷ್ಟು ಸುದ್ದಿಯಾಿಗದ್ದಾರೆ. ಸೀಮಾ ಹೈದರ್ ಬಗ್ಗೆ ಸದಾ ಒಂದಲ್ಲಾ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಆದರೀಗ ಸೀಮಾ ಹೈದರ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ.
ಸಚಿನ್ ಮೇಲಿನ ಪ್ರೀತಿಗಾಗಿ ಪಾಕಿಸ್ತಾನದಿಂದ ತನ್ನ ಮಕ್ಕಳನ್ನು ಕರೆದುಕೊಂಡು ಸೀಮಾ ಭಾರತಕ್ಕೆ ಬಂದಿದ್ದರು. ಆ ಬಳಿಕ ಸಚಿನ್ನನ್ನು ಮದುವೆ ಆಗಿದ್ದರು. ಇದೀಗ ಹೊಸ ವರ್ಷವನ್ನು ಸ್ವಾಗತಿಸುವುದರ ಜೊತೆಗೆ ಸೀಮಾ ಹೈದರ್ ಕೂಡ ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರು ಸಚಿನ್ ಮೀನಾ ಅವರೊಂದಿಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನು ಓದಿ: EXCLUSIVE: ಶ್ರೀರಾಮನ ಭಕ್ತರೇ ಗಮನಿಸಿ.. ಅಯೋಧ್ಯೆಯ ರಾಮ ಲಲ್ಲಾ ಮೂರ್ತಿ ಇದಲ್ಲವೇ ಅಲ್ಲ; ಹೇಗಿರುತ್ತೆ?
ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಸೀಮಾ ಹೈದರ್, ಹೌದು ಶೀಘ್ರದಲ್ಲೇ ನಾನು ತಾಯಿಯಾಗುತ್ತಿದ್ದೇನೆ ಎಂದಿದ್ದಾರೆ. ಸೀಮಾ ಹೈದರ್ ಗರ್ಭಿಣಿ ಎಂಬ ಪ್ರಶ್ನೆಯನ್ನು ಸಚಿನ್ ತಂದೆ ಕೂಡ ಖಚಿತಪಡಿಸಿದ್ದಾರೆ. ಸಂದರ್ಶನದ ವೇಳೆ ಸಚಿನ್ ಅವರ ತಂದೆ ಸೊಸೆಯ ಕೈಯನ್ನು ನೋಡಿದ್ದೇವೆ. ಗಂಡು ಮಗುವೇ ಜನನವಾಗಲಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ