newsfirstkannada.com

ಭಾರತವನ್ನು ಕೆಣಕಿ ಕೈಸುಟ್ಟುಕೊಂಡ ಮಾಲ್ಡೀವ್ಸ್​.. ಕಂಗನಾ, ತೆಂಡುಲ್ಕರ್ ಸೇರಿ ಸೆಲೆಬ್ರಿಟಿಗಳಿಂದಲೂ ತಪರಾಕಿ..!

Share :

Published January 8, 2024 at 8:46am

    ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ದ ಮೂರು ಮಾಲ್ಡೀವ್ಸ್ ಸಚಿವರು ಅಮಾನತು

    ಸಾಮಾಜಿಕ ಜಾಲಾತಣದಲ್ಲಿ ‘ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನಕ್ಕೆ ಬೆಂಬಲ

    ಭಾರತದ ದ್ವೀಪಗಳನ್ನ ಅನ್ವೇಷಿಸೋಣ ಎಂದ ಮಾಸ್ಟರ್ ಬ್ಲಾಸ್ಟರ್

ಭಾರತ-ಮಾಲ್ಡೀವ್ಸ್ ಸಂಬಂಧ ಮತ್ತಷ್ಟು ಹದಗೆಡುವ ಸೂಚನೆ ದೊರಕಿದೆ. ಚೀನಾ ಪರ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ, ಒಂದೊಂದೇ ತಗಾದೆ ತೆಗೆಯುತ್ತಿರುವ ಮಾಲ್ಡೀವ್ಸ್‌ಗೆ ಮೋದಿ ಲಕ್ಷದ್ವೀಪ ಭೇಟಿ ಹಾಗೂ ಪ್ರವಾಸೋದ್ಯಮ ಪ್ರಚಾರದಿಂದ ಮಾಲ್ಡೀವ್ಸ್​ ವಿಚಲಿತಗೊಂಡಿದೆ. ಭಾರತೀಯರು ಮಾಲ್ಡೀವ್ಸ್ ಬದಲು ಲಕ್ಷದ್ವೀಪ ಪ್ರವಾಸಕ್ಕೆ ಆಯ್ಕೆಗೆ ಮನವಿ ಮಾಡಿದ ಬೆನ್ನಲ್ಲೆ ಮಹತ್ವದ ಬೆಳವಣಿಗೆಗಳು ನಡೆದಿವೆ.

ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ದ ಮಾಲ್ಡೀವ್ಸ್ ಸಚಿವರು ಅಮಾನತು

ಮೊನ್ನೆ ಮೊನ್ನೆಯಷ್ಟೇ ಪ್ರಧಾನಿ ಮೋದಿ ಲಕ್ಷ ದ್ವೀಪದಲ್ಲಿ ವಿಹರಿಸಿದ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಭಾರತೀಯರು ವಿದೇಶಗಳಿಗೆ ತೆರಳುವ ಬದಲು ಲಕ್ಷದ್ವೀಪಕ್ಕೆ ಬನ್ನಿ ಎಂಬ ಸಂದೇಶ ನೀಡಿದ್ದರು. ಪ್ರಧಾನಿ ಮೋದಿ ಆಹ್ವಾನಕ್ಕೆ ಅಣಕವಾಡಿದ್ದ ಮಾಲ್ಡೀವ್ಸ್ ರಾಜಕಾರಣಿಗಳು, ಮಾಲ್ಡೀವ್ಸ್‌ನಲ್ಲಿ ಅತ್ಯುತ್ತಮ ದರ್ಜೆಯ ಪ್ರವಾಸೋದ್ಯಮಕ್ಕೆ ಭಾರತ ಸರಿಸಾಟಿ ಇಲ್ಲ ಎಂದಿದ್ದರು. ಹೀಗೆ ಲೇವಡಿ ಮಾಡಿದ್ದ ಮಾಲ್ಡೀವ್ಸ್ ಸಚಿವರಾದ ಮರ್ಯಮ್ ಶಿಯುನಾ, ಮಲ್ಶಾ ಷರೀಫ್, ಮಹಜೂಮ್ ಮಜೀದ್​​​​​ರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತು ಮಾಡಿದೆ.

ಸರ್ಕಾರಿ ಹುದ್ದೆಯಲ್ಲಿದ್ದು ಸಾಮಾಜಿಕ ಜಾಲತಾಣದಲ್ಲಿ ಇಂತಹ ಪೋಸ್ಟ್ ಮಾಡಿದವರನ್ನು ಅಮಾನತುಗೊಳಿಸಿದ್ದೇವೆ ಅಂತ ಮಾಲ್ಡೀವ್ಸ್ ಸರ್ಕಾರ ಹೆಸರು ಬಹಿರಂಗಪಡಿಸದೇ ಹೇಳಿಕೆ ನೀಡಿದೆ. ನೆರೆಯ ದೇಶದ ಬಗ್ಗೆ ಇಂತಹ ಹೇಳಿಕೆಗಳು ಭಯಾನಕ ಅಂತ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ. ಈ ಬೆನ್ನಲ್ಲೇ ಮಾಲ್ಡೀವ್ಸ್ ಹಾಲಿ ಅಧ್ಯಕ್ಷ ಮೊಹಮ್ಮದ್ ಮೊಯಿಝು ಕೂಡ ಸರ್ಕಾರದ ಪ್ರತಿನಿಧಿಗಳು ಇಂತಹ ಹೇಳಿಕೆಗಳನ್ನು ನೀಡಬಾರದು ಅಂತ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ದಕ್ಕೆ ಬಾಲಿವುಡ್ ಸಮರ!

ಪ್ರಧಾನಿ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರ ಹೇಳಿಕೆಯನ್ನು ಭಾರತದಲ್ಲಿ ಕೋಲಾಹಲ ಎಬ್ಬಿಸಿದೆ. ಮಾಲ್ಡೀವ್ಸ್ ಕಟ್ಟಿ ಬೆಳೆಸಲು, ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಅಪಾರ ಕೊಡುಗೆ ನೀಡಿದ್ದ ಬಾಲಿವುಡ್ ನಟ-ನಟಿಯರೇ ಈಗ ಮಾಲ್ಡೀವ್ಸ್ ವಿರುದ್ಧ ಸಮರ ಸಾರಿದ್ದಾರೆ. ನಟ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಜಾನ್ ಅಬ್ರಹಾಂ, ಶ್ರದ್ಧಾ ಕಪೂರ್, ಕಂಗನಾ ರನೌತ್ ಸೇರಿದಂತೆ ಬಾಲಿವುಡ್ ಮಂದಿ ಮಾಲ್ಡೀವ್ಸ್ ಕಿಡಿಕಾರಿದ್ದಾರೆ.

‘ಮಾಲ್ಡೀವ್ಸ್‌ ಸರ್ಕಾರದ ಸಚಿವರು ಭಾರತೀಯರ ಮೇಲೆ ದ್ವೇಷಪೂರಿತ ಮತ್ತು ಜನಾಂಗೀಯ ಹೇಳಿಕೆಗಳನ್ನು ನೀಡಿದ್ದಾರೆ. ಮಾಲ್ಡೀವ್ಸ್​​ಗೆ ಗರಿಷ್ಠ ಸಂಖ್ಯೆಯ ಪ್ರವಾಸಿಗರನ್ನು ಕಳುಹಿಸುವ ದೇಶಕ್ಕೆ ಈ ರೀತಿ ಮಾಡಿರೋದು ಆಶ್ಚರ್ಯ ತಂದಿದೆ. ನಮ್ಮ ನೆರೆಹೊರೆಯವರೊಂದಿಗೆ ಒಳ್ಳೆಯವರು, ಆದರೆ, ನಾವೇಕೆ ಇಂತಹ ಅಪ್ರಚೋದಿತ ದ್ವೇಷವನ್ನು ಸಹಿಸಿಕೊಳ್ಳಬೇಕು?

ಅಕ್ಷಯ್ ಕುಮಾರ್, ಬಾಲಿವುಡ್ ನಟ

ವಾಸನೆ, ಶಾಶ್ವತ ವಾಸನೆ, ಏನು? ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರೂ ಸಹ, ಬೃಹತ್ ಮುಸ್ಲಿಂ ಫೋಬಿಯಾದಿಂದ ಬಳಲುತ್ತಿದ್ದಾರೆ. ಲಕ್ಷದ್ವೀಪವು ಶೇ.98ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಮಾಲ್ಡೀವ್ಸ್ ಸರ್ಕಾರದ ಈ ಪ್ರಮುಖ ವ್ಯಕ್ತಿಗಳನ್ನು ಕೆಟ್ಟ ವಾಸನೆಯ ಹಾಗೂ ಕೀಳು ಅಭಿರುಚಿ ಹೊಂದಿರುವವರು ಎನ್ನಬಹುದು.

ಕಂಗನಾ ರಣಾವತ್, ಬಾಲಿವುಡ್ ನಟಿ

ಭಾರತದ ದ್ವೀಪಗಳನ್ನ ಅನ್ವೇಷಿಸೋಣ ಎಂದ ಮಾಸ್ಟರ್ ಬ್ಲಾಸ್ಟರ್ ಸಂದೇಶ!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಮಾಲ್ಡೀವ್ಸ್ ನಿಲುವಿಗೆ ಬೇಸರ ವ್ಯಕ್ತಪಡಿಸಿದ್ದಾರೆ.2023ರಲ್ಲಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ತಮ್ಮ 50ನೇ ಹುಟ್ಟುಹಬ್ಬದ ಆಚರಣೆ ನೆನಪಿಸಿಕೊಂಡು ಪೋಸ್ಟ್ ಮಾಡಿರುವ ತೆಂಡೂಲ್ಕರ್ ವಿದೇಶಿ ಜಾಗಗಳಿಗೆ ಬದಲಾಗಿ ಸ್ಥಳೀಯ ಬೀಚ್​​ಗಳನ್ನೇ ಬಳಸಬೇಕು. ಇಲ್ಲಿಯೂ ಎಲ್ಲಾ ತರದ ಸೌಲಭ್ಯ ಇದೆ ಅಂತ ಕೊಂಡಾಡಿದ್ದಾರೆ.

ಭಾರತವು ಸುಂದರವಾದ ಕರಾವಳಿಗಳು ಮತ್ತು ಪ್ರಾಚೀನ ದ್ವೀಪಗಳಿಂದ ಆಶೀರ್ವದಿಸಲ್ಪಟ್ಟಿದೆ. ‘ಅತಿಥಿ ದೇವೋಭವ’ ತತ್ವದೊಂದಿಗೆ, ನಾವು ಅನ್ವೇಷಿಸಲು ತುಂಬಾ ಇದೆ, ಹಲವಾರು ನೆನಪುಗಳನ್ನು ಸೃಷ್ಟಿಸಲು ಕಾಯುತ್ತಿದೆ.

ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗ

ಪ್ರಧಾನಿ ಮೋದಿ ಲಕ್ಷದ್ವೀಪ ಪ್ರವಾಸೋದ್ಯಮ ಉತ್ತೇಜಿಸಿದ ಬೆನ್ನಲ್ಲೇ ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿ ಲಕ್ಷದ್ವೀಪಕ್ಕೆ ಪ್ರವಾಸ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಮುಂದಾಗುತ್ತಿದ್ದಾರೆ. ಹೀಗಾಗಿ ಮಾಲ್ಡೀವ್ಸ್​​ ಪ್ರವಾಸೋದ್ಯಮಕ್ಕೆ ತೀವ್ರ ಹೊಡೆತ ಕೊಟ್ಟಿದೆ. ಮಾಲ್ಡೀವ್ಸ್‌ ದೇಶದ ಭಾರತ ವಿರೋಧಿ ನೀತಿಗೆ ಚೀನಾ ಕಿತಾಪತಿಯೇ ಕಾರಣ. ಭಾರತದ ಜೊತೆ ಸುಮಧುರ ಸಂಬಂಧ ಹೊಂದಿದ್ದ ಮಾಲ್ಡೀವ್ಸ್‌ ಜೊತೆ ದೋಸ್ತಿ ಮಾಡಿಕೊಂಡು ಚೀನಾದ ಕೈಗೊಂಬೆಯಾಗಿ ಮಾಲ್ಡೀವ್ಸ್ ಹೀಗೆ ವರ್ತಿಸ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ. ಒಟ್ಟಾರೆ ‘ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನಕ್ಕೆ ಬಾರಿ ಬೆಂಬಲ ವ್ಯಕ್ತವಾಗಿದೆ. ಭಾರತದ ಬಾಂಧವ್ಯ ಕಡಿದುಕೊಳ್ತಿರುವ ಮಾಲ್ಡೀವ್ಸ್​​​​​ಗೆ ಇದರಿಂದ ನಷ್ಟವೇ ಹೊರತು ಲಾಭ ಇಲ್ಲ. ಯಾಕಂದ್ರೆ ಭಾರತದಂತ ನಂಬಿಕಸ್ಥನನ್ನ ಬಿಟ್ಟು ಮಾಲ್ಡೀವ್ಸ್ ಮಾಡಿರೋದು ಕುತಂತ್ರಿ ಚೀನಾ ಸ್ನೇಹವನ್ನ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತವನ್ನು ಕೆಣಕಿ ಕೈಸುಟ್ಟುಕೊಂಡ ಮಾಲ್ಡೀವ್ಸ್​.. ಕಂಗನಾ, ತೆಂಡುಲ್ಕರ್ ಸೇರಿ ಸೆಲೆಬ್ರಿಟಿಗಳಿಂದಲೂ ತಪರಾಕಿ..!

https://newsfirstlive.com/wp-content/uploads/2024/01/maldives-1-1.jpg

Load More