newsfirstkannada.com

ರಾಮಮಂದಿರದ ಲೋಕಾರ್ಪಣೆಗೆ ಕಾಂಗ್ರೆಸ್ ಗೈರು; ಅಯೋಧ್ಯೆ ಟ್ರಸ್ಟ್ ಆಹ್ವಾನ ತಿರಸ್ಕಾರ; ಹೇಳಿದ್ದೇನು?

Share :

Published January 10, 2024 at 5:59pm

Update January 10, 2024 at 6:01pm

    ಅಯೋಧ್ಯೆ ರಾಮಮಂದಿರ ಟ್ರಸ್ಟ್‌ ನೀಡಿರೋ ಆಹ್ವಾನ ತಿರಸ್ಕಾರ

    RSS/BJP ಈ ಕಾರ್ಯಕ್ರಮವನ್ನು ರಾಜಕೀಯಕ್ಕಾಗಿ ಮಾಡಿದೆ

    2019ರ ಸುಪ್ರೀಂಕೋರ್ಟ್ ತೀರ್ಪುನ್ನು ಕಾಂಗ್ರೆಸ್ ಗೌರವಿಸುತ್ತೆ

ನವದೆಹಲಿ: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯ ಐತಿಹಾಸಿಕ ಕಾರ್ಯಕ್ರಮಕ್ಕೆ ಭಾಗಿಯಾಗದಿರಲು ಕಾಂಗ್ರೆಸ್ ನಾಯಕರು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಮುಖ್ಯ ವಕ್ತಾರ ಜೈರಾಮ್ ರಮೇಶ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅಯೋಧ್ಯೆ ರಾಮಮಂದಿರ ಟ್ರಸ್ಟ್‌ ನೀಡಿರೋ ಆಹ್ವಾನವನ್ನು ಗೌರವಪೂರ್ವಕವಾಗಿ ನಿರಾಕರಿಸಿರುವುದಾಗಿ ತಿಳಿಸಿದ್ದಾರೆ.

ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಗಣ್ಯಾತಿಗಣ್ಯರಿಗೆ ಅಯೋಧ್ಯೆ ಮಂದಿರ ಟ್ರಸ್ಟ್ ಖುದ್ದು ಭೇಟಿ ಮಾಡಿ ಆಹ್ವಾನ ಪತ್ರಿಕೆಯನ್ನು ನೀಡುತ್ತಿದೆ. ಲೋಕಾರ್ಪಣೆಯ ದಿನ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಭಾಗಿಯಾಗದೇ ಇರಲು ನಿರ್ಧಾರ ಮಾಡಿದ್ದಾರೆ. ಅಂದು ಅಯೋಧ್ಯೆಯ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಅಧೀರ್ ರಂಜನ್ ಚೌಧರಿ ಭಾಗಿಯಾಗಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ರಾಮಮಂದಿರಕ್ಕಾಗಿ ಸತತ 30 ವರ್ಷ ಮೌನವ್ರತ; ಈಗ ಪ್ರತಿಜ್ಞೆ ಮುರಿಯಲಿದ್ದಾರೆ ‘ಮೌನಿ ಮಾತಾ’!

RSS/BJP ಕಾರ್ಯಕ್ರಮ ಎಂದ ಕಾಂಗ್ರೆಸ್!
ಶ್ರೀರಾಮಮಂದಿರ ಲೋಕಾರ್ಪಣೆಗೆ ಭಾಗಿಯಾಗಲ್ಲ ಎಂದಿರುವ ಕಾಂಗ್ರೆಸ್ ನಾಯಕರು ಸ್ಪಷ್ಟನೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಪಕ್ಷ 2019ರ ಸುಪ್ರೀಂಕೋರ್ಟ್ ತೀರ್ಪು ಅನ್ನು ಗೌರವಿಸುತ್ತೆ. ಭಗವಾನ್ ಶ್ರೀರಾಮನನ್ನು ಮಿಲಿಯನ್ ಗಟ್ಟಲೇ ಭಕ್ತರು ಆರಾಧಿಸುತ್ತಾರೆ. ಧರ್ಮ ವೈಯಕ್ತಿಕ ವಿಷಯ. ಆದರೆ, ಬಿಜೆಪಿ, ಆರ್‌.ಎಸ್.ಎಸ್ ಅಯೋಧ್ಯೆಯ ಮಂದಿರ ವಿಷಯವನ್ನು ರಾಜಕೀಯ ವಿಷಯ ಮಾಡಿದ್ದಾರೆ. ಅಪೂರ್ಣ ದೇವಾಲಯ

ಉದ್ಘಾಟನೆಯನ್ನು ಚುನಾವಣಾ ಲಾಭಕ್ಕಾಗಿ ಮುಂಚೂಣಿಗೆ ತಂದಿದ್ದಾರೆ. ಆರ್‌.ಎಸ್.ಎಸ್ ಹಾಗೂ ಬಿಜೆಪಿ ಈ ಕಾರ್ಯಕ್ರಮವನ್ನು ರಾಜಕೀಯ ಲಾಭದ ಕಾರ್ಯಕ್ರಮ ಮಾಡಿದೆ. ಹೀಗಾಗಿ ಅಯೋಧ್ಯೆ ಟ್ರಸ್ಟ್ ಆಹ್ವಾನವನ್ನು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಅಧೀರ್ ರಂಜನ್ ಚೌಧರಿ ಅವರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಮಂದಿರದ ಲೋಕಾರ್ಪಣೆಗೆ ಕಾಂಗ್ರೆಸ್ ಗೈರು; ಅಯೋಧ್ಯೆ ಟ್ರಸ್ಟ್ ಆಹ್ವಾನ ತಿರಸ್ಕಾರ; ಹೇಳಿದ್ದೇನು?

https://newsfirstlive.com/wp-content/uploads/2023/07/Rahul-Gandhi-1.jpg

Load More