ಫ್ಲೈ ಓವರ್ ಮೇಲೆ ಹೋಯಿತು ಎರಡು ಜೀವಗಳ ಪ್ರಾಣ
ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು
ಒಂದು ಬೈಕ್ನಲ್ಲಿ ಮೂವರ ಪೈಕಿ ಸ್ಥಳದಲ್ಲೇ ಇಬ್ಬರು ಸಾವು
ಬೆಂಗಳೂರು: ಬೆಳ್ಳಂಬೆಳಗ್ಗೆ ಬೈಕ್ಗಳ ಮಧ್ಯೆ ಭೀಕರ ಡಿಕ್ಕಿ ಸಂಭವಿಸಿ ತಂದೆ ಹಾಗೂ 4 ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು ತಾಯಿಯ ಪರಿಸ್ಥಿತಿ ಗಂಭೀರವಾಗಿದೆ. ಈ ಘಟನೆ ನಗರದ ನೆಲಮಂಗಲ ಬಳಿಯ ಅಡಕಿಮಾರನಹಳ್ಳಿಯ ಪ್ಲೈಓವರ್ ಮೇಲೆ ನಡೆದಿದೆ.
ಮಕರ ಸಂಕ್ರಾಂತಿ ಹಬ್ಬ ಮುಗಿಸಿಕೊಂಡು ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ನೆಲಮಂಗಲ ಬಳಿಯ ಅಡಕಿಮಾರನಹಳ್ಳಿಯ ಪ್ಲೈಓವರ್ ಮೇಲೆ ಬೈಕ್ಗಳ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಒಂದು ಬೈಲ್ ಮೇಲಿದ್ದ ಮೂವರ ಪೈಕಿ ತಂದೆ, ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿಯ ಪರಿಸ್ಥಿತಿ ಗಂಭೀರವಾಗಿದೆ. ಸದ್ಯ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ