ಧ್ರುವ ಸರ್ಜಾ ಫಾರ್ಮ್ ಹೌಸ್ನಲ್ಲಿ ನಡೆಯಿತು ನಾಮಕರಣ ಶಾಸ್ತ್ರ
ಹಳ್ಳಿಕಾರ್ ಒಡೆಯರ್ ಕಡೆಯಿಂದ ನಟನಿಗೆ ಬಂತು ಅದ್ಭುತ ಗಿಫ್ಟ್
ಆಂಜನೇಯ ಪರಮ ಭಕ್ತನಾಗಿರೋ ನಟ ಸರ್ಜಾ ಮಕ್ಕಳ ನಾಮಕರಣ
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಶುಭ ದಿನದಂದು ಆಂಜನೇಯ ಪರಮ ಭಕ್ತನಾಗಿರೋ ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಮಗಳಿಗೆ ರುದ್ರಾಕ್ಷಿ ಡಿ. ಸರ್ಜಾ ಮತ್ತು ಮಗನಿಗೆ ಹಯಗ್ರೀವ ಡಿ. ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ಧ್ರುವ ಸರ್ಜಾ ಫಾರ್ಮ್ ಹೌಸ್ನಲ್ಲಿ ನಾಮಕರಣ ಶಾಸ್ತ್ರ ನಡೆಯಿತು.
ಇನ್ನು ವಿಶೇಷ ಎಂದರೆ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸ್ಪರ್ಧಿಯಾಗಿರೋ ವರ್ತೂರು ಸಂತೋಷ್ ಅವರು ನಟ ಧ್ರುವ ಸರ್ಜಾ ಅವರಿಗೆ ಎರಡು ಎತ್ತುಗಳನ್ನು ಗಿಫ್ಟ್ ಆಗಿ ನೀಡಿದ್ದಾರೆ. ಹೌದು, ನಟ ಧ್ರುವ ಸರ್ಜಾ ಅವರಿಗೆ ವರ್ತೂರು ಸಂತೋಷ್ ಅವರ ಸ್ನೇಹಿತರಿಂದ ಈ ಉಡುಗೊರೆಯನ್ನು ನೀಡಲಾಗಿದೆ. ಧ್ರುವ ಸರ್ಜಾ ಮಕ್ಕಳ ನಾಮಕರಣ ಸಮಾರಂಭಕ್ಕೆ ಬಾಲಿವುಡ್ ನಟ ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರೇಮ್ ಹಾಗೂ ರಕ್ಷಿತಾ ಕೂಡ ಭಾಗಿಯಾಗಿದ್ದರು. ಧ್ರುವಾ ಸರ್ಜಾ ಮಕ್ಕಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟ ಧ್ರುವ ಸರ್ಜಾ ಅವರಿಗೆ ಬಿಗ್ಬಾಸ್ ಖ್ಯಾತಿಯ ಹಳ್ಳಿಕಾರ್ ಒಡೆಯರ್ ವರ್ತೂರು ಸಂತೋಷ್ ಅವರ ಸ್ನೇಹಿತರಿಂದ ಎರಡು ಎತ್ತುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. @DhruvaSarja #DhruvaSarja #VarthurSanthosh #VarthurSathoshFriends #Ox #Hallikar #BiggBossVarthurSanthosh pic.twitter.com/Webjhvoj47
— NewsFirst Kannada (@NewsFirstKan) January 22, 2024
ಇನ್ನು ಎತ್ತುಗಳನ್ನು ನೋಡಿದ ಕೂಡಲೇ ನಟ ಧ್ರುವ ಸರ್ಜಾ ಫುಲ್ ಖುಷ್ ಆಗಿದ್ದಾರೆ. ಆ ಎರಡು ಎತ್ತುಗಳನ್ನು ತೋಟದಲ್ಲಿ ಇರಿಸಿಕೊಂಡಿದ್ದಾರೆ. ಸದ್ಯ ವರ್ತೂರು ಸಂತೋಷ್ ಅವರು ಬಿಗ್ಬಾಸ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ವೀಕ್ಷಕರ ಚಿತ್ತ ಬಿಗ್ಬಾಸ್ ಟ್ರೋಫಿ ಯಾರ ಕೈಗೆ ಸೇರಲಿದೆ ಎಂದು ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ