ವಿರಾಟ್ ಕೊಹ್ಲಿ ಉಗುಳಿದ್ದು ನಿಜಾನಾ?
ಕೊಹ್ಲಿ ಆ ಆಟಗಾರನ ಬಳಿ ಕ್ಷಮೆ ಕೇಳಲು ಕಾರಣ ಯಾರು?
ಅಂದು ವಿರಾಟ್ ಕೊಹ್ಲಿ 3 ಗಂಟೆಯವರೆಗೂ ಕುಡಿದಿದ್ದರಂತೆ!
ಟೀಂ ಇಂಡಿಯಾದ ಸೂಪರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ವಿರುದ್ಧ ಮಾಜಿ ನಾಯಕರರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಟೆಸ್ಟ್ ಪಂದ್ಯದ ವೇಳೆ ನನ್ನ ಮೇಲೆ ಉಗುಳಿದ್ದರು ಎಂದು ಹೇಳಿದ್ದಾರೆ. ಅಂದಹಾಗೆಯೇ ಈ ಆರೋಪ ಮಾಡಿರುವ ವ್ಯಕ್ತಿ ಯಾರು ಗೊತ್ತಾ?
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡೀನ್ ಎಲ್ಗರ್ ಈ ಆರೋಪ ಮಾಡಿದ್ದು, ಈ ಘಟನೆ ಯಾವಾಗ ನಡೆಯಿತು ಎಂಬ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ಇದು 2015ರ ಭಾರತ ಪ್ರವಾಸದ ವೇಳೆ ನಡೆದಿರಬಹುದೆಂದು ಮೂಲಗಳು ತಿಳಿಸಿವೆ.
ಡೀನ್ ಎಲ್ಗರ್ ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡುತ್ತಾ, ಈ ವಿಚಾರ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಕ್ರಿಸ್ ಮೊರೀಸ್ ಹಾಗೂ ರಗ್ಭಿ ಆಟಗಾರ ಜೀನ್ ಡಿ ವಿಲಿಯರ್ಸ್ ಜೊತೆಗೆ ಮಾತನಾಡುತ್ತಿರುವ ವೇಳೆ ಕೊಹ್ಲಿ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ.
2 ವರ್ಷದ ಬಳಿಕ ಸಾರಿ ಕೇಳಿದ ವಿರಾಟ್
ಬಳಿಕ ಮಾತನಾಡುತ್ತಾ ಡೀನ್ ಎಲ್ಗರ್ ಈ ಘಟನೆ ನಡೆದ 2 ವರ್ಷದ ಬಳಿಕ ಕೊಹ್ಲಿ ನನ್ನ ಬಳಿ ಕ್ಷಮೆಯಾಚಿಸಿದ್ದಾರೆ. ಎಬಿ ಡಿ ವಿಲಿಯರ್ಸ್ ಅವರಿಂದಾಗಿ ಕೊಹ್ಲಿ ನನ್ನ ಬಳಿ ಸಾರಿ ಕೇಳಿದ್ದಾರೆ ಎಂದು ಹೇಳಿದ್ದಾರೆ.
ಎಬಿ ಡಿಗೆ ಈ ವಿಚಾರ ಗೊತ್ತಾಯ್ತು
ನನ್ನ ಮೇಲೆ ಕೊಹ್ಲಿ ಉಗುಳಿದ ವಿಚಾರ ಎಬಿ ಡಿಗೆ ಗೊತ್ತಾಗಿದೆ. ಬಳಿಕ ಐಪಿಎಲ್ನಲ್ಲಿ ಈ ವಿಚಾರವನ್ನು ಕೊಹ್ಲಿ ಬಳಿ ಕೇಳಿದ್ದಾರೆ. ಬಳಿಕ ದ.ಆಫ್ರಿಕಾದ ಬಂದಾಗ ವಿರಾಟ್ ನನ್ನ ಬಳಿ ಕ್ಷಮೆ ಕೇಳಿದ್ದಾರೆ. ಅಂದು ನಾವು ಬೆಳಗ್ಗಿನ ಜಾವ 3 ಗಂಟೆ ವರೆಗೂ ಕುಡಿದಿದ್ದೆವು ಎಂದು ಹೇಳಿದ್ದಾರೆ.
3 ಗಂಟೆಯವರೆಗೂ ನಾನು ಕೊಹ್ಲಿ ಕುಡಿದಿದ್ದೆವು
ಡೀನ್ ಎಲ್ಗರ್ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಪಡೆದಿದ್ದಾರೆ. ಭಾರತದ ವಿರುದ್ಧವೇ ಇವರು ಕೊನೆಯ ಪಂದ್ಯವನ್ನು ಆಡಿದ್ದರು. ಆದರೆ ಪಂದ್ಯ ಮುಗಿದ ಬಳಿಕ ವಿರಾಟ್ ತನ್ನ ಜೆರ್ಸಿಯನ್ನು ಡೀನ್ ಎಲ್ಗರ್ಗೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ