newsfirstkannada.com

‘ಡಿಕೆಸು, ವಿನಯ್ ಕುಲಕರ್ಣಿ ದೇಶದ್ರೋಹಿಗಳು.. ಮೋದಿ ಅವರು ದೇಶದ್ರೋಹಿಗಳನ್ನು ಗುಂಡಿಕ್ಕುವ ಕಾನೂನು ತರಬೇಕು’ ಈಶ್ವರಪ್ಪ

Share :

Published February 9, 2024 at 7:40am

Update February 9, 2024 at 2:25pm

    ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟ ಮಾಜಿ ಸಚಿವ ಈಶ್ವರಪ್ಪ

    ಈಶ್ವರಪ್ಪ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಕಾಂಗ್ರೆಸ್

    ಭಯೋತ್ಪಾದನೆ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಆಗುತ್ತಾ?

ಮುತ್ತು ಒಡೆದ್ರೆ ಹೋಯ್ತು ಮಾತು ಆಡಿದ್ರೆ ಹೋಯ್ತು ಅಂತಾರೆ. ಆದ್ರೆ ಎಲುಬಿಲ್ಲದ ನಾಲಿಗೆ ಏನೇನೋ ಮಾತಾಡುತ್ತೆ. ಅದರಲ್ಲೂ ಕೆಲ ರಾಜಕಾರಣಿಗಳಂತೂ ವಿವಾದವನ್ನ ಮೈಮೇಲೆ ಎಳೆದುಕೊಳ್ತಾರೆ. ಮೊನಚು ಮಾತುಗಳಿಗೆ ಹೆಸರುವಾಸಿಯಾಗಿರೋ ಕೆ.ಎಸ್ ಈಶ್ವರಪ್ಪ, ಅದೇ ಮಾತುಗಳಿಂದ ವಿವಾದಗಳನ್ನ ಆಗಾಗ ಮೈ ಮೇಲೆ ಎಳೆದುಕೊಳ್ತಾನೇ ಇರ್ತಾರೆ. ಇದೀಗ ಮತ್ತೊಂದು ವಿವಾದವನ್ನ ತಮ್ಮ ಮಾತಿನಿಂದ ತಂದ್ಕೊಂಡಿದ್ದಾರೆ.

ಡಿ.ಕೆ ಸುರೇಶ್, ವಿನಯ್ ಕುಲಕರ್ಣಿ ರಾಷ್ಟ್ರ ದ್ರೋಹಿಗಳು

ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಆಡಿರೋ ಮಾತು ವಿವಾದ ಸೃಷ್ಟಿಸಿವೆ. ಕಾಂಗ್ರೆಸ್ ನಾಯಕರನ್ನ ಟೀಕಿಸೋ ಭರದಲ್ಲಿ ಯಡವಟ್ಟು ಮಾಡ್ಕೊಂಡಿದ್ದಾರೆ ದಾವಣಗೆರೆಯಲ್ಲಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಈಶ್ವರಪ್ಪ, ಡಿ.ಕೆ ಸುರೇಶ್ ಮತ್ತು ವಿನಯ್ ಕುಲಕರ್ಣಿ ಇಬ್ಬರು ರಾಷ್ಟ್ರ ದ್ರೋಹಿಗಳು ಅಂತಾ ಜರಿದಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಖಂಡ ಭಾರತ. ದಕ್ಷಿಣ ಭಾರತವನ್ನು ಬೇರೆ ರಾಷ್ಟ್ರವಾಗಿ ಮಾಡಬೇಕು ಎಂದು ಶಾಸಕ ವಿನಯ್ ಕುಲಕರ್ಣಿ ಮತ್ತು ಡಿ.ಕೆ.ಸುರೇಶ್ ಕೇಳಿದ್ದಾರೆ. ಈ ಇಬ್ಬರು ರಾಷ್ಟ್ರದ್ರೋಹಿಗಳನ್ನ ಪಕ್ಷದಿಂದ ಕಿತ್ತು ಬಿಸಾಕಿ.

ಕೆ.ಎಸ್ ಈಶ್ವರಪ್ಪ, ಮಾಜಿ ಡಿಸಿಎಂ

ಹೀಗೆ ಇಬ್ಬರನ್ನೂ ಪಕ್ಷದಿಂದ ಮಲ್ಲಿಕಾರ್ಜುನ ಖರ್ಗೆ ಕಿತ್ತಾಕಬೇಕು ಅಂತಾ ಆಗ್ರಹಿಸಿದ ಈಶ್ವರಪ್ಪ, ರಾಷ್ಟ್ರ ದ್ರೋಹಿಗಳನ್ನು ಗುಂಡಿಕ್ಕುವ ಕಾನೂನನ್ನು ಮೋದಿಯವರೇ ತರಬೇಕು ಅನ್ನೋ ಕಿಡಿನುಡಿಯನ್ನ ತೆರೆದಿಟ್ಟರು.

ಇದೇ ರೀತಿ ಮಾತನಾಡಿದರೆ ಇವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನನ್ನು ಮೋದಿ ಜಾರಿಗೆ ತರಬೇಕು ಎಂದು ನಾನು ಮನವಿ ಮಾಡುತ್ತೇನೆ.

ಕೆ.ಎಸ್ ಈಶ್ವರಪ್ಪ, ಮಾಜಿ ಡಿಸಿಎಂ

ಈಶ್ವರಪ್ಪರ ಈ ಮಾತು ಕಾಂಗ್ರೆಸ್​ನ ಆಕ್ರೋಶಕ್ಕೆ ಕಾರಣವಾಗಿದೆ. ಇದು ಭಯೋತ್ಪಾದನೆಗೆ ಪ್ರಚೋದನೆ ನೀಡುವ ಹೇಳಿಕೆ ಅಂತಾ ಹಸ್ತಪಡೆ ಕಿಡಿಕಾರಿದೆ. ಭಯೋತ್ಪಾದನೆ ನಿಗ್ರಹ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು ಅಂತಲೂ ಆಗ್ರಹಿಸಿದೆ

ಭಯೋತ್ಪಾದನೆಗೆ ಪ್ರಚೋದನೆ ನೀಡುವ ಹೇಳಿಕೆ

ಮಹಾತ್ಮ ಗಾಂಧಿಯವರಿಗೆ ಗುಂಡಿಕ್ಕಿದ ಗೋಡ್ಸೆ ಸಂತತಿಯವರಾದ ಬಿಜೆಪಿ ನಾಯಕರ ಭಯೋತ್ಪಾದಕ ಮನಸ್ಥಿತಿ ಅನಾವರಣವಾಗಿದೆ. ಸಂಸದರಾದ ಡಿ. ಕೆ ಸುರೇಶ್ ಹಾಗೂ ಶಾಸಕರಾದ ವಿನಯ್ ಕುಲಕರ್ಣಿಯವರನ್ನು ಗುಂಡಿಕ್ಕಿ ಕೊಲ್ಲಬೇಕು ಎನ್ನುವ ಮೂಲಕ ಬಿಜೆಪಿಯ ಈಶ್ವರಪ್ಪ ಭಯೋತ್ಪಾದನೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ್ದಾರೆ. ಈ ‘ಗುಂಡು’ ಹಾಕುವ ವ್ಯಕ್ತಿಯ ಮೇಲೆ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಗೃಹ ಸಚಿವರಲ್ಲಿ ಮನವಿ ಮಾಡುತ್ತೇವೆ.

-ಕರ್ನಾಟಕ ಕಾಂಗ್ರೆಸ್

ಇನ್ನು, ಈ ಬಗ್ಗೆ ಸಚಿವ ಹೆಚ್​.ಕೆ ಪಾಟೀಲ್ ಕೂಡ ಕಿಡಿಕಾರಿದ್ದು, 24 ಗಂಟೆಯೊಳಗೆ ಈಶ್ವರಪ್ಪ ತಮ್ಮ ಮಾತನ್ನು ವಾಪಸ್ ಪಡೆಯಬೇಕು ಅಂತಾ ಆಗ್ರಹಿಸಿದ್ರು. ಇಲ್ಲದಿದ್ದರೆ ಕ್ರಮ ಆಗುತ್ತೆ ಅಂತಾ ಎಚ್ಚರಿಕೆಯನ್ನೂ ರವಾನಿಸಿದ್ರು.

ಮಾತು ವಾಪಸ್ ಪಡೆಯಬೇಕು

ಹೀರೋ ಆಗಿಬಿಡುತ್ತೇವೆ ಎಂದು ಕಲ್ಪನಾ ಲೋಕದಲ್ಲಿ ಇರುವರು ದೊಡ್ಡ ಪ್ರಮಾದವನ್ನು ಮಾಡುತ್ತಿದ್ದಾರೆ. ಈಶ್ವರಪ್ಪ ಯಾವ ಆವೇಶದಲ್ಲಿ ಅಂದರು ಗೊತ್ತಿಲ್ಲ 24 ಗಂಟೆಯಲ್ಲಿ ಅವರು ತಮ್ಮ ಮಾತನ್ನು ವಾಪಸ್ ಪಡೆಯಬೇಕು. ಇದು ಅವರಿಗೆ ಒಳ್ಳೆಯದು.

ಹೆಚ್​.ಕೆ ಪಾಟೀಲ್, ಸಚಿವ

ಬಿಜೆಪಿಯ ವಿಭಜನೆ ಅಸ್ತ್ರ ಕಂಡು ಕಂಗಾಲಾಗಿದ್ದ ಕಾಂಗ್ರೆಸ್​​ಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಇದು ಇನ್ನಷ್ಟು ರಾಜಕೀಯ ಸಮರಕ್ಕೆ ಕಾರಣವಾಗೋ ಎಲ್ಲ ಲಕ್ಷಣ ಕಂಡುಬರ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಡಿಕೆಸು, ವಿನಯ್ ಕುಲಕರ್ಣಿ ದೇಶದ್ರೋಹಿಗಳು.. ಮೋದಿ ಅವರು ದೇಶದ್ರೋಹಿಗಳನ್ನು ಗುಂಡಿಕ್ಕುವ ಕಾನೂನು ತರಬೇಕು’ ಈಶ್ವರಪ್ಪ

https://newsfirstlive.com/wp-content/uploads/2024/02/KS_ESHWARAPPA-1.jpg

Load More