ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ
ಪರ್ಫ್ಯೂಮ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಾವು
ಬೆಂಕಿ ಬಿದ್ದ ತಕ್ಷಣ ಇಡೀ ಅಂಗಡಿಯನ್ನು ಆವರಿಸಿಕೊಂಡಿದ್ದ ಅಗ್ನಿ
ಬೆಂಗಳೂರು: ವಿದ್ಯುತ್ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಕುಂಬಳಗೂಡು ಬಳಿಯ ರಾಮಸಂದ್ರದಲ್ಲಿ ನಡೆದಿದೆ. ರಾಮಸಂದ್ರದ ಮನೆಯೊಂದರ ಸಮೀಪದಲ್ಲಿ ಬ್ಲ್ಯಾಸ್ಟ್ ಆಗಿದೆ.
ಇದನ್ನು ಓದಿ: VIDEO: ಅಬ್ಬಾ.. ಬೆಂಗಳೂರಿನ ಮನೆಯಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ; ಏನಾಯ್ತು?
ವಿದ್ಯುತ್ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆದ ಪರಿಣಾಮ ಪಕ್ಕದಲ್ಲೇ ಇದ್ದ ಸುಗಂಧ ದ್ರವ್ಯ ಗೋಡೌನ್ಗೂ ಬೆಂಕಿ ತಗುಲಿದೆ. ಇದೇ ವೇಳೆ ಗೋಡೌನ್ನಲ್ಲಿದ್ದ ಮೂವರು ಕಾರ್ಮಿಕರು ಅಲ್ಲೇ ಸಿಲುಕಿಕೊಂಡಿದ್ದಾರೆ. ಪರ್ಫ್ಯೂಮ್ ಫ್ಯಾಕ್ಟರಿಯ ಒಳಗಡೆ ಸಿಲುಕಿರೋ ಸಿಬ್ಬಂದಿ ಹೊರಗೆ ಬರಲು ಆಗದೇ ಮೂವರು ಸಜೀವವಾಗಿ ದಹನವಾಗಿದ್ದಾರೆ ಎಂದು ಶಂಕಿಸಲಾಗಿದೆ.
ಬೆಂಗಳೂರಿನ ರಾಮಸಂದ್ರದ ಮನೆಯೊಂದರ ಸಮೀಪದಲ್ಲಿ ಟ್ರ್ಯಾನ್ಸ್ ಫಾರ್ಮರ್ ಬ್ಲ್ಯಾಸ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ಆಗಮಿಸಿವೆ.#Bengaluru #Ramasandra #Fire #Karnataka #NewsFirstLive #NewsFirstKannada pic.twitter.com/BmmomqLSoj
— NewsFirst Kannada (@NewsFirstKan) February 18, 2024
ಸದ್ಯ ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಮೂವರು ಸಿಬ್ಬಂದಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ