ಡ್ರೋನ್ ಪ್ರತಾಪ್ ತಮ್ಮ ಬೈಕ್ ಅನ್ನು ಯಾರಿಗೆ ನೀಡಿರುವುದು ಗೊತ್ತಾ.?
ಬಿಗ್ ಬಾಸ್ನ ಸ್ಪರ್ಧಿ ಹಾಗೂ ರನ್ನರ್ ಅಪ್ ಆಗಿದ್ದ ಡ್ರೋನ್ ಪ್ರತಾಪ್
ಇನ್ಸ್ಟಾದಲ್ಲಿ ಫೋಟೋ ಶೇರ್ ಮಾಡಿ, ಸಂತಸ ಹಂಚಿಕೊಂಡ ಡ್ರೋನ್
ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ನ ಸ್ಪರ್ಧಿ ಹಾಗೂ ರನ್ನರ್ ಅಪ್ ಆಗಿದ್ದ ಡ್ರೋನ್ ಪ್ರತಾಪ್ ಅವರು ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ. ಬಿಗ್ಬಾಸ್ನಲ್ಲಿ ಬಹುಮಾನವಾಗಿ ಬಂದಿದ್ದ ಬೈಕ್ ಅನ್ನು ಯುವಕರೊಬ್ಬರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬಿಗ್ಬಾಸ್ನಲ್ಲಿ ರನ್ನರ್ ಅಪ್ ವಿನ್ ಆಗಿದ್ದಾಗ ಸುದೀಪ್ ಅವರು ಬೈಕ್ ಅನ್ನು ಏನು ಮಾಡುತ್ತೀರಾ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಪ್ರತಾಪ್ ಬೇರೆಯವರಿಗೆ ನೀಡುತ್ತೇನೆ ಎಂದಿದ್ದರು.
ಕಿಚ್ಚ ಸುದೀಪ್ ಅವರಿಗೆ ಕೊಟ್ಟ ಮಾತಿನಂತೆ ಡ್ರೋನ್ ಪ್ರತಾಪ್ ನಡೆದುಕೊಂಡಿದ್ದಾರೆ. ರಾಜು ಎನ್ನುವ ಯುವಕನಿಗೆ ಬೈಕ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಫೋಟೋ ಸಮೇತ ಶೇರ್ ಮಾಡಿ ಕೆಲ ಲೈನ್ಸ್ಗಳನ್ನ ಬರೆದುಕೊಂಡಿದ್ದಾರೆ. ಬಿಗ್ಬಾಸ್ನಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ಹೇಳಿದ ಹಾಗೆ ಯಾರಿಗೆ ನೀಡಿದೆ ಎನ್ನುವುದಕ್ಕೆ ಉತ್ತರ ಇಲ್ಲಿದೆ. ಇವರು ರಾಜು ಅಂತ ಮಧ್ಯಾಹ್ನದಿಂದ ಸಂಜೆವರೆಗೂ ಹೋಟೆಲ್ನಲ್ಲಿ ಕೆಲಸ ಮಾಡಿ ಹಾಗೂ ಸಂಜೆಯ ಮೇಲೆ ಫುಡ್ ಡೆಲಿವರಿ ಕೆಲಸ ಮಾಡುತ್ತಾರೆ. ಇವರು ತಮ್ಮ ಸ್ನೇಹಿತರ ಹೆಸರಲ್ಲಿ ಗಾಡಿಯನ್ನು ತೆಗೆದುಕೊಂಡು ಅದಕ್ಕೆ ತಿಂಗಳು ತಿಂಗಳು ಕಂತು ಕಟ್ಟುತ್ತಿದ್ದರು. ಆದರೆ ಅವರ ಸ್ನೇಹಿತ ಮಾಡಿದ ಮೋಸದಿಂದ ತಮ್ಮ ಬೈಕ್ನ್ನು ಬ್ಯಾಂಕ್ನವರು ಸೀಜ್ ಮಾಡಿದ್ದರು. ಹಾಗಾಗಿ ಇವರಿಗೆ, ಬಹುಮಾನವಾಗಿ ಬಂದ ಎಲೆಕ್ಟ್ರಿಕ್ ಬೈಕ್ ಅನ್ನು ನೀಡುತ್ತಿದ್ದೇನೆ. ಈ ಬೈಕ್ ಹುಡುಗನಿಗೆ ನೀಡಿರುವುದು ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.
View this post on Instagram
ಇನ್ನು ಈ ಬಾರಿಯ ಬಿಗ್ ಬಾಸ್ ಸೀಸನ್ ಸಾಕಷ್ಟು ಕುತೂಹಲ ಮೂಡಿಸಿತ್ತು. ಕೊನೆಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಪ್ರೇಕ್ಷಕರ ಎದೆ ಬಡಿತ ಜಾಸ್ತಿ ಮಾಡಿತ್ತು. ವೀಕ್ಷಕರ ವೋಟ್ಗಳಂತೆ ಪ್ರಥಮ ಸ್ಥಾನವನ್ನು ಕಾರ್ತಿಕ್ ಮಹೇಶ್ ಪಡೆದುಕೊಂಡರು. ಹಾಗೇ ದ್ವಿತೀಯ ಸ್ಥಾನವನ್ನು ಡ್ರೋನ್ ಪ್ರತಾಪ್ ಪಡೆದುಕೊಂಡಿದ್ದರು. ಇದೇ ವೇಳೆ ಪ್ರತಾಪ್ಗೆ ಈ ಬೈಕ್ ಅನ್ನು ನೀಡಲಾಗಿತ್ತು. ಸದ್ಯ ಡ್ರೋನ್ ಪ್ರತಾಪ್ ಮಾಡಿದ ಕಾರ್ಯಕ್ಕೆ ಸಾಕಷ್ಟು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ