2024ರ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ವಿಡಿಯೋ ವೈರಲ್
ಕಾಂಡೋಮ್ ಪ್ಯಾಕ್ ಮೇಲೆ ಕಾಣಿಸಿಕೊಂಡ ಎರಡು ಪಕ್ಷಗಳ ಚಿಹ್ನೆ
ಮತ ಪಡೆಯಲು ಕಾಂಡೋಮ್ ಗಿಮಿಕ್ಗೆ ಇಳಿಯಿತೇ ಪಕ್ಷಗಳು
ಚುನಾವಣೆ ಬಂತೆಂದರೆ ಸಾಕು ಗಿಫ್ಟ್ ಪಾಲಿಟಿಕ್ಸ್ ಶುರುವಾಗುತ್ತೆ. ಜನರಿಗೆ ಹಲವು ಆಮಿಷಗಳನ್ನವೊಡ್ಡಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಓಲೈಸುವ ಕೆಲಸಗಳು ನಡೆಯುತ್ತವೆ. ಅದರ ಜೊತೆಗೆ ಜಾಹೀರಾತಿಗೇನು ಕಡಿಮೆಯಿಲ್ಲ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಚುನಾವಣಾ ಜಾಹೀರಾತು ನೀಡುವ ಪಕ್ಷಗಳು, ರಾಜಕಾರಣಿಗಳು ಇದ್ದಾರೆ. ಆದರೆ ಪ್ರಸ್ತುತ ಸಮಾಜದಲ್ಲಿ ಚುನಾವಣ ಗಿಮಿಕ್ಸ್ ಎಲ್ಲಿಯವರೆಗೆ ತಲುಪಿದೆ ಎಂದರೆ ಕಾಂಡೋಮ್ ಪ್ಯಾಕ್ ಮಾರುವವರೆಗೆ ಅಂದ್ರೆ ನಂಬಲೇಬೇಕಾಗಿದೆ.
ಹೌದು. ಚುನಾವಣೆ ಸಮಯದಲ್ಲಿ ಕುಕ್ಕರ್, ಸೀರೆ, ಗಡಿಯಾರ, ಬೆಳ್ಳಿ ಸಾಮಾಗ್ರಿ, ನೋಟು ಹಂಚಿಕೆ ಮಾಡಿರುವ ಸಂಗತಿಯನ್ನು ಕೇಳಿರಬಹುದು. ಆದರೆ ಲೋಕಸಭಾ 2024ರ ಹೊತ್ತಲ್ಲಿ ಕಾಂಡೋಮ್ ಪ್ಯಾಕ್ ಮೇಲೆ ಎರಡು ಪಕ್ಷಗಳ ಚಿಹ್ನೆಗಳು ಮೂಡಿಬಂದಿದ್ದು, ಅದನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿರುವ ಸಂಗತಿ ಇದೀಗ ಬೆಳಿಕಿಗೆ ಬಂದಿದೆ. ಅಷ್ಟು ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ಕೂಡ ವೈರಲ್ ಆಗಿವೆ.
ಹೀಗೂ ಮಾಡ್ತಾರಾ ಚುನಾವಣೆ ಪ್ರಚಾರ?
ವೈಆರ್ಎಸ್ ಕಾಂಗ್ರೆಸ್ ಪಕ್ಷ ಮತ್ತು ವಿರೋಧ ಪಕ್ಷವಾದ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಪಕ್ಷಗಳ ಚಿಹ್ನೆ ಕಾಂಡೋಮ್ ಪ್ಯಾಕೆಟ್ ಮೇಲೆ ಮೂಡಿ ಬಂದಿದೆ. ಅದನ್ನು ಪಕ್ಷದ ಕಾರ್ಯಕರ್ತರಿಗೆ ನೀಡುವ ಮೂಲಕ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪವು ಕೇಳಿಬಂದಿದೆ.
ಇದೆಲ್ಲಾ ಮುಂಬರುವ ಲೋಕಸಭಾ ಚುನಾವಣೆಗಾಗಿ ಎನ್ನಲಾಗುತ್ತಿದೆ. ಮನೆ ಮನೆಗೆ ತೆರಳಿ ಕಾಂಡೋಮ್ ನೀಡುವ ಮೂಲಕ ಪಕ್ಷದ ಪ್ರಚಾರ ಮಾಡಲಾಗುತ್ತಿದೆ ಎಂಬ ದೂರುಗಳು ಕೂಡ ಕೇಳಿಬಂದಿವೆ.
Protection against politics?
Videos go viral wherein #condom packs marked with symbols of either parties, the ruling @YSRCParty and the lead opposition, @JaiTDP are seen, allegedly being distributed. #YSRCP#TDP #JanaSenaParty #AndhraPradeshElections2024 pic.twitter.com/r6DEiEuLR4
— Apoorva Jayachandran (@Jay_Apoorva18) February 21, 2024
ಸಾಮಾಜಿಕ ಜಾಲತಾಣದಲ್ಲಿ ಜಿದ್ದಾ-ಜಿದ್ದಿ
ಇದೇ ವಿಚಾರವಾಗಿ ಪಕ್ಷಗಳು ಜಗಳ ಕೂಡ ಮಾಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ವೈಎಸ್ಆರ್ಸಿಪಿ ಪಕ್ಷ ಎಕ್ಸ್ನಲ್ಲಿ ‘‘ಟಿಡಿಪಿ ಪಕ್ಷ ಎಷ್ಟು ಕೀಳು ಮಟ್ಟಕ್ಕೆ ಇಳಿದಿದೆ’’ ಎಂದು ಹೇಳಿದೆ.
ಅತ್ತ ಜಗನ್ ಮೋಹನ್ ರೆಡ್ಡಿ ಪಕ್ಷ ‘‘ಇದು ಕಾಂಡೋಮ್ಗಳೊಂದಿಗೆ ನಿಲ್ಲುತ್ತದೆಯೋ ಅಥವಾ ಸಾರ್ವಜನಿಕರಿಗೆ ವಯಾಗ್ರ ನೀಡಲು ಪ್ರಾರಂಭಿಸುತ್ತದೆಯೋ’’ ಎಂದು ಕೇಳಿದೆ. ಟಿಡಿಪಿ ಪಕ್ಷ ಕಾಂಡೋಮ್ ಪ್ಯಾಕ್ ಅನ್ನು YSRCP ಲಾಂಛನದೊಂದಿಗೆ ಪೋಸ್ಟ್ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ