ಚಿನ್ನ ಲೇಪಿತ ಗೋಲ್ಡ್ ಕೇಕ್ ಕಟ್ ಮಾಡಿದ ಐರಾವತ ನಟಿ
30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಊರ್ವಶಿ
ಕಾಂಟ್ರವರ್ಸಿ, ಟ್ರೋಲ್ನಿಂದಲೇ ಸುದ್ದಿಯಲ್ಲಿರೋ ನಟಿ ಇವರು!
ಬಾಲಿವುಡ್ ನಟಿ ಊರ್ವಶಿ 30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಿಂಗರ್ ಹನಿ ಸಿಂಗ್ ಜೊತೆ 24 ಕ್ಯಾರೆಟ್ ಚಿನ್ನದ ಲೇಪಿತ ಗೋಲ್ಡ್ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಇನ್ನು ತಮ್ಮ ಬರ್ತ್ಡೇಯ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಟಿ ಊರ್ವಶಿ ‘ಲವ್ ಡೋಸ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸೆಟ್ನಲ್ಲಿ ಊರ್ವಶಿ ಬರ್ತ್ಡೇ ಸೆಲೆಬ್ರೇಶನ್ ಮಾಡಲಾಗಿದೆ. ಹನಿ ಸಿಂಗ್ ಅವರ ಜೊತೆ ಗೋಲ್ಡ್ ಪ್ಲೇಟೆಡ್ ಕೇಕ್ ಕತ್ತರಿಸಿ ನಟಿ ಸಂಭ್ರಮಿಸಿದ್ದಾರೆ. ಇನ್ನು ಫೋಟೋಗಳನ್ನು ಶೇರ್ ಮಾಡಿಕೊಂಡ ನಟಿ ನನ್ನ ಬಗ್ಗೆ ನಿಜವಾದ ಕಾಳಜಿ ನನ್ನ ವೃತ್ತಿಜೀವನದಲ್ಲಿ ಅದ್ಭುತ ಅಧ್ಯಾಯವನ್ನು ರಚಿಸಿದೆ. ನನ್ನ ಭಾವನೆಗಳ ಆಳವನ್ನು ನಿಮಗಾಗಿ ಹಿಡಿದಿರುತ್ತೇನೆ. ನಿಮ್ಮ ಸಮಯಕ್ಕಾಗಿ ಧನ್ಯವಾಗಳು ಎಂದು ಹನಿ ಸಿಂಗ್ಗೆ ಬರೆದಿದ್ದಾರೆ.
ಇದನ್ನು ಓದಿ: ಬಿಕಿನಿ ಲುಕ್ನಲ್ಲಿ ಕಾಣಿಸಿಕೊಂಡ ‘ಕನ್ನಡತಿ’; ಇಷ್ಟೊಂದು ಹಾಟ್ ಆಗಿದ್ದೇಕೆ ಎಂದ ಫ್ಯಾನ್ಸ್!
ತಮ್ಮ ಹುಟ್ಟುಹಬ್ಬದ ಕೇಕ್ ಕಟ್ ಮಾಡುವ ಸಂದರ್ಭದಲ್ಲಿ ನಟಿ ಊರ್ವಶಿ ಕೆಂಪು ಬಣ್ಣದ ಥಾಯ್ ಸ್ಲಿಟ್ ಡ್ರೆಸ್ ಧರಿಸಿಕೊಂಡಿದ್ದಾರೆ. ಇನ್ನೂ ಇದರಲ್ಲಿ ಕುತೂಹಲದ ವಿಷಯ ಎಂದರೆ ಕಳೆದ ವರ್ಷ ನಟಿ ಹುಟ್ಟುಹಬ್ಬದಂದು ಡೈಮಂಡ್ ಕೇಕ್ ಅನ್ನು ಕಟ್ ಮಾಡಿದ್ದರು. ಈ ಭಾರೀ ಕಟ್ ಮಾಡಿದ ಕೇಕ್ ಬೆಲೆ ಬರೋಬ್ಬರಿ ಮೂರು ಕೋಟಿ ರೂಪಾಯಿಯಂತೆ.
View this post on Instagram
ಈ ಫೋಟೋ ನೋಡಿದ ನೆಟ್ಟಿಗರು ಹೊಸ ಬಾಯ್ಫ್ರೆಂಡ್ ಅಂತಾ ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾಗಿಂತ ಊರ್ವಶಿ ಅವರು ಕಾಂಟ್ರವರ್ಸಿ, ಟ್ರೋಲ್ನಿಂದಲೇ ಹೆಚ್ಚೆಚ್ಚು ಸುದ್ದಿಯಾಗಿದ್ದಾರೆ. ನಟ ದರ್ಶನ್ ನಟನೆಯ ‘ಐರಾವತ’ದಲ್ಲಿ ನಟಿ ಊರ್ವಶಿ ಅಭಿನಯಿಸಿದ್ದರು. ಕನ್ನಡ, ತೆಲುಗು, ಹಿಂದಿ ಸೇರಿದಂತೆ ಬಹುಭಾಷಾ ನಟಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ