ಚರ್ಚ್ಗೆ ಬರುತ್ತಿದ್ದ 5-6 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ?
ಪಾದ್ರಿಯ ಮೊದಲ ಹೆಂಡತಿಯ ಮಗಳು ಡೈಸಿ ಪ್ರಿಯಾಂಕ ಆರೋಪ
ಚರ್ಚ್ನಲ್ಲಿ ಕೆಲಸಕ್ಕೆ ಬಂದಿದ್ದ 31 ವರ್ಷದ ಮಹಿಳೆ ಜೊತೆ ಮದುವೆ
ದಾವಣಗೆರೆ ಜಯನಗರದ ಚರ್ಚ್ ಪಾದ್ರಿ ರಾಜಶೇಖರ ಎಂಬುವವರ ವಿರುದ್ಧ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿ ಬಂದಿದೆ. ಚರ್ಚ್ನಲ್ಲಿ ಪಾದ್ರಿಯಿಂದ ಅನೇಕ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನಡೆದಿದೆ. ತನ್ನ 57ನೇ ವಯಸ್ಸಿನಲ್ಲೂ ಎರಡನೇ ಮದುವೆ ಆಗುತ್ತಿದ್ದಾರೆ ಎಂದು ಆತನ ಮಗಳು ಡೈಸಿ ಪ್ರಿಯಾಂಕ ಆರೋಪಿಸಿದ್ದಾರೆ.
ಆರೋಪಿ ರಾಜಶೇಖರ್ ಎಂಬುವವರು ಜಯನಗರದ ಡಿಎಚ್ಎಂ ಚರ್ಚ್ನ ಸಂಸ್ಥಾಪಕರು. ಇವರು 30 ವರ್ಷಕ್ಕೂ ಹೆಚ್ಚು ಕಾಲ ಇದೇ ಚರ್ಚ್ನಲ್ಲಿ ಪಾದ್ರಿಯಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದಾರೆ. ಚರ್ಚ್ಗೆ ಬರುತ್ತಿದ್ದ 5-6 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಸಾಕಷ್ಟು ಮಹಿಳೆಯರು ಈ ಬಗ್ಗೆ ನನ್ನ ಬಳಿ ಹೇಳಿಕೊಂಡಿದ್ದಾರೆ. ಇಂತಹ ದೌರ್ಜನ್ಯ ಸಹಿಸೋಕೆ ಆಗಲ್ಲ. ಇದನ್ನ ತೀವ್ರವಾಗಿ ಖಂಡಿಸಬೇಕು ಅಂತ ನಾನು ಈಗ ಮಾಧ್ಯಮದ ಮುಂದೆ ಬಂದಿದ್ದೇನೆ ಎಂದು ಪಾದ್ರಿಯ ಮೊದಲ ಹೆಂಡತಿಯ ಮಗಳು ಡೈಸಿ ಪ್ರಿಯಾಂಕ ಹೇಳಿದ್ದಾರೆ.
ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಸಂತನ್ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ನಿಧನ
ಇನ್ನು, ಕಳೆದ ಕೆಲ ದಿನಗಳ ಹಿಂದೆ ಪಾದ್ರಿ ರಾಜಶೇಖರ 57ನೇ ವಯಸ್ಸಿನಲ್ಲಿ ಎರಡನೇ ಮದುವೆ ಆಗುತ್ತಿದ್ದರು. ಚರ್ಚ್ನಲ್ಲಿ ಕೆಲಸಕ್ಕೆ ಬಂದಿದ್ದ 31 ವರ್ಷದ ಜ್ಯೋತಿಭಾಯಿ ಮಹಿಳೆ ಜೊತೆ ಪಾದ್ರಿ ರಿಜಿಸ್ಟರ್ ಮದುವೆಯಾಗುತ್ತಿದ್ದರು. ಹೀಗಾಗಿ ತಂದೆಯ ದೌರ್ಜನ್ಯದ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಮಗಳು ಡೈಸಿ ಪ್ರಿಯಾಂಕ ಆರೋಪ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ