ಯುಪಿ ವಾರಿಯರ್ಸ್ ವಿರುದ್ಧ ಎಲ್ಲಿಸ್ ಪೆರ್ರಿ ಭರ್ಜರಿ ಬ್ಯಾಟಿಂಗ್
ಕ್ರೀಸ್ನಲ್ಲಿ ರೌದ್ರಾವಾತಾರ ತೋರಿದ ಸ್ಮೃತಿ ಮಂದಾನ, ಎಲ್ಲಿಸ್ ಪೆರ್ರಿ
ಯುಪಿಯ ದೀಪ್ತಿ ಶರ್ಮಾ ಹಾಕಿದ ಬೌಲ್ಗೆ ಎಲ್ಲಿಸ್ ಪೆರ್ರಿ ಹಿಟ್ಟಿಂಗ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದೆ. ಎಲ್ಲಿಸ್ ಪೆರ್ರಿ ಮತ್ತು ಸ್ಮೃತಿ ಮಂದಾನ ಅವರ ಭರ್ಜರಿ ಬ್ಯಾಟಿಂಗ್ನಿಂದ ಯುಪಿ ವಾರಿಯರ್ಸ್ ವಿರುದ್ಧ 23 ರನ್ಗಳ ಅಮೋಘ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಹೊಡಿಬಡಿ ಆಟಕ್ಕೆ ಮುಂದಾಗಿದ್ದ ಎಲ್ಲಿಸ್ ಪೆರ್ರಿ ಬಾರಿಸಿದ ಚೆಂಡು ಮೈದಾನದಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ಗೆ ಬಡಿದಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಯುಪಿ ಟೀಮ್, ಆರ್ಸಿಬಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿ ದೊಡ್ಡ ತಪ್ಪು ಮಾಡಿತು. ಆರ್ಸಿಬಿ ಪರ ಉತ್ತಮ ಆರಂಭದ ಬ್ಯಾಟಿಂಗ್ ಮಾಡಿದ ಮೇಘಾನ ಮತ್ತು ಸ್ಮೃತಿ ಮಂದಾನ ರನ್ಗಳನ್ನ ಕೊಳ್ಳೆ ಹೊಡೆದರು.
ಮೇಘಾನ 28 ರನ್ಗೆ ಔಟ್ ಆದ ಮೇಲೆ ಕ್ರೀಸ್ಗೆ ಬಂದ ಎಲ್ಲಿಸ್ ಪೆರ್ರಿ ಯುಪಿ ಬೌಲರ್ಸ್ಗೆ ಮನ ಬಂದಂತೆ ಚಚ್ಚಿದರು. ಪಂದ್ಯದ ವೇಳೆ 18.5 ಓವರ್ನಲ್ಲಿ ಆಡುತ್ತಿದ್ದ ಎಲ್ಲಿಸ್ ಪೆರ್ರಿ ಸಿಡಿಲಬ್ಬರದ ಸಿಕ್ಸರ್ವೊಂದನ್ನು ಸಿಡಿಸಿದರು. ಆಗ ಚೆಂಡು ನೇರ ಹೋಗಿ ಮೈದಾನದ ಬೌಂಡರಿ ಹೊರಗೆ ನಿಲ್ಲಿಸಿದ್ದ ಗಿಫ್ಟ್ ಕಾರಿನ ಗ್ಲಾಸ್ಗೆ ಬಡಿದಿದೆ. ಇದರಿಂದ ಕಾರಿನ ಗ್ಲಾಸ್ ಪುಡಿ, ಪುಡಿಯಾಗಿದೆ. ಕೇವಲ 37 ಎಸೆತಗಳನ್ನ ಎದುರಿಸಿದ ಪೆರ್ರಿ 4 ಫೋರ್, 4 ಭರ್ಜರಿ ಸಿಕ್ಸರ್ ಸಮೇತ 58 ರನ್ ಗಳಿಸಿದರು.
PERRY DESTROYED THE WINDOW GLASS OF THE CAR. 🔥🤯pic.twitter.com/Yq1W8DSrMQ
— Johns. (@CricCrazyJohns) March 4, 2024
ಎಲ್ಲಿಸ್ ಪೆರ್ರಿ, ಮಂದಾನ ರೌದ್ರಾವಾತರಕ್ಕೆ ಯುಪಿ ಮಹಿಳಾ ಮಣಿಗಳು ಬೆಂಡ್ ಆಗಿ ಹೋದರು. ಮೈದಾನದ ಮೂಲೆ ಮೂಲೆಗೂ ಇಬ್ಬರು ಬಾಲ್ ಕಳುಹಿಸಿದರು. ಇದರಿಂದ ಗ್ಯಾಲರಿಯಲ್ಲಿ ಕುಳಿತ ಆರ್ಸಿಬಿ ಅಭಿಮಾನಿಗಳೆಲ್ಲ ಕುಣಿದು ಕುಪ್ಪಳಿಸಿದರು. ಸ್ಮೃತಿ ಮಂದಾನ 50 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಮೇತ 80 ರನ್ ಗಳಿಸಿ ಆಡುವಾಗ ದೀಪ್ತಿ ಶರ್ಮಾ ಬೌಲಿಂಗ್ನಲ್ಲಿ ಔಟ್ ಆದರು.
https://twitter.com/i/status/1764674079687340229
ಆರ್ಸಿಬಿ ನಗದಿತ 20 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 198 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ್ದ ಯುಪಿ ವಾರಿಯರ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 175 ರನ್ ಮಾತ್ರ ಗಳಿಸಿ ಸೋಲೋಪ್ಪಿಕೊಂಡಿತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ