ಕೋಲಾರಕ್ಕಾಗಿ ಅಮಿತ್ ಶಾಗೆ ದಳಪತಿ ಡೆಡ್ಲೈನ್ ಫಿಕ್ಸ್
ಮಾರ್ಚ್ 23ರ ಬಳಿಕ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ
ಮೋದಿ ಬಂದರೂ ಆಹ್ವಾನ ನೀಡದ್ದಕ್ಕೆ ಜೆಡಿಎಸ್ ಬೇಸರ
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ಗೆ 3 ಕ್ಷೇತ್ರಗಳನ್ನು ಬಿಟ್ಟುಕೊಡುವ ಮಾತನ್ನಾಡಿದ್ದ ಬಿಜೆಪಿ ಹೈಕಮಾಂಡ್ ಈಗ ಯೂಟರ್ನ್ ಹೊಡೀತಿದ್ಯಾ ಅನ್ನೋ ಪ್ರಶ್ನೆ ಮೂಡಿದೆ. ಮಂಡ್ಯ, ಹಾಸನ ಜೊತೆ ಕೋಲಾರದಿಂದ ಸ್ಪರ್ಧಿಸೋದು ಜೆಡಿಎಸ್ ಪ್ಲಾನ್ ಆಗಿತ್ತು. ಆದ್ರೆ ಕೋಲಾರದಿಂದ ಬಿಜೆಪಿಯೇ ಸ್ಪರ್ಧಿಸೋ ಬಗ್ಗೆ ಚಿಂತನೆ ನಡೆದಿದೆ. ಇದು ಜೆಡಿಎಸ್ ಪಾಳಯದಲ್ಲಿ ತಳಮಳ ಮೂಡಿಸಿದ್ದು ಆಕ್ರೋಶವೂ ಭುಗಿಲೆದ್ದಿದೆ.
ಕೋಲಾರ ಮತಕ್ಷೇತ್ರ.. ನಾ ಕೊಡೆ, ನೀ ಬಿಡೆ ಸಮರ..!
ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಕ್ಷೇತ್ರ ಹೊಂದಾಣಿಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮಂಡ್ಯ, ಹಾಸನ ಕ್ಷೇತ್ರಗಳು ಜೆಡಿಎಸ್ಗೆ ಸಿಗುವುದು ಬಹುತೇಕ ಖಚಿತವಾಗಿದೆ. 3ನೇ ಕ್ಷೇತ್ರ ಕೋಲಾರಕ್ಕೂ ಜೆಡಿಎಸ್ ಬೇಡಿಕೆ ಇಟ್ಟಿದೆ.. ಆದ್ರೆ ಕೋಲಾರ ಬದಲು ಚಿಕ್ಕಬಳ್ಳಾಪುರ ಆಯ್ದುಕೊಳ್ಳುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ, ಕುಮಾರಸ್ವಾಮಿಗೆ ಆಫರ್ ಇಟ್ಟಿದ್ದಾರೆ.. ಈ ಎಲ್ಲಾ ಗೊಂದಲಗಳ ಹಿನ್ನೆಲೆ ಇವತ್ತು ಜೆಪಿ ಭವನದಲ್ಲಿ ಸಭೆ ನಡೆಸಿದ ದೇವೇಗೌಡರು ಹಾಗೂ ಕುಮಾರಸ್ವಾಮಿ ಜೆಡಿಎಸ್ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ.
ಟಿಕೆಟ್ ಕೊಡದಿದ್ರೆ ಜೆಡಿಎಸ್ ಅಭ್ಯರ್ಥಿ ಕಣಕ್ಕೆ!?
ಮೊನ್ನೆ ಅಮಿತ್ ಶಾ ಭೇಟಿಯಾಗಿದ್ದ ಕುಮಾರಸ್ವಾಮಿ ಕೋಲಾರವನ್ನು ಜೆಡಿಎಸ್ಗೆ ಬಿಟ್ಟುಕೊಡಿ ಅಂತ ಕೇಳಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ನ ಮೂವರು ಶಾಸಕರಿದ್ದಾರೆ, ಕಳೆದ ಬಾರಿ ಇಬ್ಬರು ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದಾರೆ. ಮತಗಳಿಕೆ ಪ್ರಮಾಣದಲ್ಲಿ ಜೆಡಿಎಸ್ 2ನೇ ಸ್ಥಾನದಲ್ಲಿದೆ. ಮೈತ್ರಿ ಟಿಕೆಟ್ ನೀಡದಿದ್ರೆ JDS ಅಭ್ಯರ್ಥಿ ಹಾಕ್ತೇವೆ ಅಂತ ಹೇಳಿದ್ದಾರೆ ಎನ್ನಲಾಗಿದೆ. ಕೋಲಾರ ಕ್ಷೇತ್ರ ನಮಗೇ ಇರಲಿ, ಬಿಜೆಪಿ ಅಭ್ಯರ್ಥಿ ಹಾಕ್ತೀವಿ ಅಂತ ಅಮಿತ್ ಶಾ ಹೇಳಿದ್ದಾರೆ. ನಮ್ಮಲ್ಲಿ 3-4 ಮಂದಿ ಆಕಾಂಕ್ಷಿಗಳಿದ್ದಾರೆ. ನೋಡೋನ ಸಮಯ ಕೊಡಿ ಅಂತ ಅಮಿತ್ ಶಾ ಕೇಳಿದ್ದಾರೆ ಎನ್ನಲಾಗಿದೆ.
ಮೋದಿ ಬಂದ್ರೂ ಆಹ್ವಾನ ನೀಡದ್ದಕ್ಕೆ ಜೆಡಿಎಸ್ ಬೇಸರ!
ಅದೂ ಅಲ್ಲದೇ ಮೈತ್ರಿಯಾದ ಮೇಲೆ ಪ್ರಧಾನಿ ಮೋದಿ ರಾಜ್ಯಕ್ಕೆ 2 ಬಾರಿ ಆಗಮಿಸಿದ್ರೂ ಜೆಡಿಎಸ್ಗೆ ಆಹ್ವಾನ ನೀಡಿಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಬಗ್ಗೆಯೂ ಜೆಡಿಎಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಗೊಂದಲಗಳ ಬೆನ್ನಲ್ಲೇ ಇವತ್ತು ಜೆಡಿಎಸ್ ನಾಯಕರು ಮಹತ್ವದ ಸಭೆ ನಡೆಸಿದ್ರು. ಜೆಡಿಎಸ್ ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ 3-4 ಸೀಟು ಕೊಡುವ ಬಗ್ಗೆ ಮೊದಲಿನಿಂದಲೂ ಮಾತುಕತೆ ನಡೆದಿತ್ತು. ಮೈತ್ರಿಯಲ್ಲಿ ಯಾವ ಗೊಂದಲವೂ ಇಲ್ಲ, ಜೆಡಿಎಸ್ 3 ಕ್ಷೇತ್ರಗಳಲ್ಲಿ ಸ್ಪರ್ಧೆಸುತ್ತೆ ಎಂದಿದ್ದಾರೆ. ಇನ್ನು, ಟಿಕೆಟ್ ಗೊಂದಲ ಹಿನ್ನೆಲೆಯಲ್ಲಿ ಜೆಡಿಎಸ್ ಟಿಕೆಟ್ ಘೋಷಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿದೆ. ಇಂದು ಹೃದಯದ ಶಸ್ತ್ರಚಿಕಿತ್ಸೆಗಾಗಿ ಹೆಚ್ಡಿಕೆ ಚೆನ್ನೈಗೆ ತೆರಳಲಿದ್ದು ವಾಪಸ್ ಬಂದ ಬಳಿಕ ಟಿಕೆಟ್ ಘೋಷಣೆ ಸಾಧ್ಯತೆ ಇದೆ. ಒಟ್ಟಾರೆ ಜೆಡಿಎಸ್, ಬಿಜೆಪಿ ನಡುವೆ ಟಿಕೆಟ್ ಫೈಟ್ ಮೈತ್ರಿಗೆ ಕುತ್ತು ತರುವ ಪ್ರಮೇಯ ಸೃಷ್ಟಿಸುತ್ತಾ ಅನ್ನೋದೇ ಸದ್ಯದ ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ