ಕುಮಾರ್ ಸಂಗಕ್ಕಾರ ಜೊತೆ ಕಿಂಗ್ ಕೊಹ್ಲಿ ಮಾತನಾಡಿದ್ದೇನು?
ಆರ್ಸಿಬಿ ಮಾಜಿ ಪ್ಲೇಯರ್ ಚಹಲ್ ಅಂದರೆ ಎಲ್ಲರಿಗೂ ಇಷ್ಟ
ಇಂದು ಸಂಜೆ ಆರ್ಆರ್ ವಿರುದ್ಧ ಕಣಕ್ಕೆ ಇಳಿಯುವ ಆರ್ಸಿಬಿ
ರಾಜಸ್ಥಾನದ ಜೈಪುರ್ದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಖಾಡಕ್ಕೆ ಇಳಿಯಲಿದೆ. ಇದಕ್ಕಾಗಿ ಈಗಾಗಲೇ ನೆಟ್ಸ್ನಲ್ಲಿ ಉಭಯ ತಂಡಗಳ ಪ್ಲೇಯರ್ಸ್ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ, ಮ್ಯಾಕ್ಸಿ ಪ್ರ್ಯಾಕ್ಟೀಸ್ನಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಆರ್ಸಿಬಿಯ ಮಾಜಿ ಪ್ಲೇಯರ್ ಯಜುವೇಂದ್ರ ಚಹಲ್ ಜೊತೆ ಫುಲ್ ಕಾಮಿಡಿ ಮಾಡಿ ಕೆಲ ಸಮಯ ಕಳೆದಿದ್ದಾರೆ.
ಆರ್ಸಿಬಿ ಪ್ಲೇಯರ್ ವಿರಾಟ್ ಕೊಹ್ಲಿ ಹಾಗೂ ರಾಜಸ್ಥಾನ ರಾಯಲ್ಸ್ ಸ್ಪಿನ್ನರ್ ಯಜುವೇಂದ್ರ ಚಹಲ್ ಅಭ್ಯಾಸದ ವೇಳೆ ಕೆಲ ಸಮಯ ಕಳೆದು ಫುಲ್ ಖುಷ್ ಆಗಿದ್ದಾರೆ. ಈ ವೇಳೆ ಚಹಲ್ ಮಾಡಿದ ಕಾಮಿಡಿಗೆ ಕಿಂಗ್ ಕೊಹ್ಲಿ ಬಿದ್ದು, ಬಿದ್ದು ನಕ್ಕಿದ್ದಾರೆ. ಚಹಲ್ ಎಂದರೆ ಕ್ರಿಕೆಟ್ ಕ್ಷೇತ್ರದಲ್ಲಿ ಎಲ್ಲರಿಗೂ ಇಷ್ಟ. ಹೀಗಾಗಿಯೇ ಕೆಲ ಆಟಗಾರರು ಚಹಲ್ ಬಳಿ ಟೈಮ್ ಪಾಸ್ ಮಾಡಲು ಕಾತುರದಲ್ಲಿರುತ್ತಾರೆ. ಚಹಲ್ರನ್ನ ತಬ್ಬಿಕೊಂಡ ಮಾಕ್ಸ್ವೆಲ್ ಯಾವುದೋ ಕಾಮಿಡಿಗೆ ಸಖತ್ ನಕ್ಕಿದ್ದಾರೆ. ಮ್ಯಾಕ್ಸ್ವೆಲ್ ಜೊತೆಯು ಕಾಮಿಡಿ ಮಾಡಿರುವ ಚಹಲ್ ಸಹ ಆಟಗಾರರನ್ನ ಸಂತಸ ಪಡಿಸಿದ್ದಾರೆ ಎಂದು ಹೇಳಲಾಗಿದೆ.
Sanga ↘️ cover drive ↙️ Virat#PlayBold #ನಮ್ಮRCB #IPL2024 pic.twitter.com/2GpXwBS1ee
— Royal Challengers Bengaluru (@RCBTweets) April 5, 2024
ಇದೇ ವೇಳೆ ಆರ್ಆರ್ ಬ್ಯಾಟಿಂಗ್ ಕೋಚ್ ಕುಮಾರ್ ಸಂಗಕಾರ್ ಹಾಗೂ ಕೊಹ್ಲಿ ಇಬ್ಬರು ಕೆಲ ಸಮಯ ಬ್ಯಾಟಿಂಗ್ ಬಗ್ಗೆ ಚರ್ಚೆ ಮಾಡಿದ್ದಾರೆ. ಐಪಿಎಲ್ನ 19ನೇ ಪಂದ್ಯವಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ಗೆ ತೆರಳಿದ್ದು ಅಲ್ಲಿ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಭರ್ಜರಿ ತಾಲೀಮು ನಡೆಸಿದೆ. ಪಂದ್ಯವು ಇಂದು ಸಂಜೆ 7:30ಕ್ಕೆ ನಡೆಯಲಿದೆ. ಈಗಾಗಲೇ 4 ಪಂದ್ಯಗಳನ್ನು ಆಡಿರುವ ಆರ್ಸಿಬಿ 3ರಲ್ಲಿ ಸೋತು 1 ಅನ್ನು ಗೆದ್ದುಕೊಂಡಿದೆ. ಹೀಗಾಗಿ ಇಂದಿನ ಪಂದ್ಯ ಗೆಲ್ಲುವುದು ಆರ್ಸಿಬಿಗೆ ಅನಿವಾರ್ಯ ಎಂದೇ ಹೇಳಬಹುದು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ