ಸಾಲಿಡ್ ಓಪನಿಂಗ್ ನೀಡಿದ್ದ ಫಾಫ್ ಡುಪ್ಲೆಸ್ಸಿ ಹಾಗೂ ವಿರಾಟ್ ಕೊಹ್ಲಿ
4 ಶತಕ ಸಿಡಿಸಿರುವ ಕೆ.ಎಲ್.ರಾಹುಲ್ 3ನೇ ಸ್ಥಾನ, ಫಸ್ಟ್ ಯಾರಿದ್ದಾರೆ?
ಕೊಹ್ಲಿ ಅಬ್ಬರಿಸದಿದ್ರೆ ಆರ್ಸಿಬಿ ಇನ್ನಷ್ಟು ಹೀನಾಯವಾಗಿ ಸೋಲುತ್ತಿತ್ತಾ?
ಜೈಪುರದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಲ್ಲ. ರಾಜಸ್ಥಾನ್ ರಾಯಲ್ಸ್ನಂಥ ಬಲಿಷ್ಠ ಬೌಲಿಂಗ್ ಮುಂದೆ ಕೊಹ್ಲಿ ಆಟ ನಡೆಯಲ್ಲ ಅನ್ನೋ ಮಾತುಗಳಿದ್ವು. ನಿನ್ನೆ ಆ ಟೀಕೆಗಳಿಗೆ ಕೊಹ್ಲಿ ಬ್ಯಾಟ್ನಿಂದಲೇ ಉತ್ತರ ಕೊಟ್ರು. ಆರ್ಆರ್ ಬೌಲಿಂಗ್ ಲೈನ್ ಅಪ್ ಅನ್ನೇ ಧೂಳಿಪಟ ಮಾಡಿದ್ರು. ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ವಿರಾಟ್ ವೀರಾವೇಶ ಹೇಗಿತ್ತು.?
ಟಫ್ ಕಂಡೀಷನ್ಸ್.. ಕ್ವಾಲಿಟಿ ಸ್ಪಿನ್ನರ್ಗಳು.. ಡೆಡ್ಲಿ ಪೇಸರ್ಗಳು.. ಆರ್ಸಿಬಿ ಮುಂದೆ ಇದ್ದಿದ್ದು ಬಿಗ್ ಟಾರ್ಗೆಟ್ ಸೆಟ್ ಮಾಡಬೇಕಾದ ಕಠಿಣ ಸವಾಲು. ಈ ಟಫ್ ಚಾಲೆಂಜ್ನ ಈಸಿಯಾಗಿ ಡೀಲ್ ಮಾಡಿದ್ದು ಕಿಂಗ್ ಕೊಹ್ಲಿ.
ಇದನ್ನೂ ಓದಿ: T20 ವಿಶ್ವಕಪ್ ಗೆಲ್ಲಲು ಪಾಕ್ ಪ್ಲೇಯರ್ಸ್ ಕಠಿಣ ಫಿಟ್ನೆಸ್ ಸೂತ್ರ.. ಆರ್ಮಿಯಂತೆ ಬೆಟ್ಟದಲ್ಲಿ ಕಲ್ಲು ಹೊತ್ತು ಟ್ರೈನಿಂಗ್
ಜೈಫುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ವಿರಾಟ್ ಆಟ ನಡೆಯಲ್ಲ ಅಂತಾ ಪಂದ್ಯಕ್ಕೂ ಮುನ್ನ ಹೇಳಲಾಗ್ತಿತ್ತು. ಅಂಕಿಅಂಶಗಳ ಲೆಕ್ಕ ನೀಡಿ ಟೀಕೆ ಮಾಡಲಾಗಿತ್ತು. ಇದಕ್ಕೆಲ್ಲ ವಿರಾಟ್, ಬ್ಯಾಟ್ನಿಂದ ಉತ್ತರಿಸಿದ್ರು.
ಫಾಫ್ ಜೊತೆ ಕೊಹ್ಲಿ ಉತ್ತಮ ಅಡಿಪಾಯ.!
ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ತಂಡಕ್ಕೆ ವಿರಾಟ್, ಫಾಫ್ ಡುಪ್ಲೆಸಿ ಉತ್ತಮ ಅಡಿಪಾಯ ಹಾಕಿದ್ರು. ಮೊದಲ ಇನ್ನಿಂಗ್ಸ್ಗೆ 125 ರನ್ಗಳ ಸಾಲಿಡ್ ಓಪನಿಂಗ್ ನೀಡಿದ್ರು. ಆದ್ರೆ, 44 ರನ್ ಗಳಿಸಿ ಬ್ಯಾಟ್ ಬೀಸ್ತಿದ್ದ ಫಾಫ್, ವಿಕೆಟ್ ಒಪ್ಪಿಸಿ ಹೊರ ನಡೆದ್ರು. ಆದ್ರೆ, ಮತ್ತೊಂದಡೆ ಭರ್ಜರಿ ಬ್ಯಾಟಿಂಗ್ ನಡೆಸ್ತಿದ್ದ ವಿರಾಟ್, ಕೇವಲ 39 ಎಸೆತದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದರು. ಈ ಮೂಲಕ ಐಪಿಎಲ್ನಲ್ಲಿ 7,500 ರನ್ ತಲುಪಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.
ಶತಕ ಸಿಡಿಸಿ ಮಿಂಚಿದ ವಿರಾಟ್ ಕೊಹ್ಲಿ..!
ಅರ್ಧಶತಕದ ಬಳಿಕ ವಿರಾಟ್, ಅಬ್ಬರ ಮತ್ತಷ್ಟು ಜೋರಾಯ್ತು. ರನ್ ಗಳಿಕೆಗೆ ವೇಗ ನೀಡಿದ ಕೊಹ್ಲಿ, 67 ಎಸೆತದಲ್ಲಿ 9 ಬೌಂಡರಿ, 4 ಸಿಕ್ಸ್ ಸಿಡಿಸಿದ್ರು. ಪಿಂಕ್ ಸಿಟಿಯಲ್ಲಿ ಶತಕ ಪೂರೈಸಿ ಸಂಭ್ರಮಿಸಿದ್ರು. ಇದರೊಂದಿಗೆ ಪ್ರಸಕ್ತ ಐಪಿಎಲ್ನಲ್ಲಿ ಚೊಚ್ಚಲ ಹಾಗೂ ಒಟ್ಟಾರೆ ಐಪಿಎಲ್ನಲ್ಲಿ 8ನೇ ಶತಕ ದಾಖಲಿಸಿದ ಸಾಧನೆ ಮಾಡಿದ್ರು.
ವಿರಾಟ್ ಕೊಹ್ಲಿ ಇನ್ನಿಂಗ್ಸ್
ವೇಗಿಗಳ 39 ಎಸೆತಗಳನ್ನ ಎದುರಿಸಿದ ವಿರಾಟ್, 67 ರನ್ ಸಿಡಿಸಿದ್ರು. 171.79ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ 11 ಬೌಂಡರಿ, 1 ಸಿಕ್ಸರ್ ದಾಖಲಿಸಿದ್ರು. ಸ್ಪಿನ್ನರ್ಗಳ 33 ಎಸೆತ ಎದುರಿಸಿದ ವಿರಾಟ್, 46 ರನ್ ಕಲೆ ಹಾಕಿದ್ರು. ಕೇವಲ 139.39ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ, 1 ಬೌಂಡರಿ, 3 ಸಿಕ್ಸರ್ ದಾಖಲಿಸಲಷ್ಟೇ ಶಕ್ತವಾದ್ರು.
ಶತಕದೊಂದಿಗೆ ಹಲವು ದಾಖಲೆ ಬರೆದ ವಿರಾಟ್..!
ಈ ಶತಕದೊಂದಿಗೆ ವಿರಾಟ್, ಐಪಿಎಲ್ನಲ್ಲಿ ಯಾರು ಮಾಡದ ಸಾಧನೆ ಮಾಡಿದ್ರು. ಗರಿಷ್ಠ ರನ್, ಗರಿಷ್ಠ ಶತಕ ಗಳಿಸಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಭಾಜನರಾದ್ರು.
ಇದನ್ನೂ ಓದಿ: ತುಳಸಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು.. ಮನೆ ಅಂದವಷ್ಟೇ ಅಲ್ಲ, ಆರೋಗ್ಯಕ್ಕೂ ವೃಂದಾ ಬಹುಉಪಕಾರಿ
ಐಪಿಎಲ್ನಲ್ಲಿ ಕೊಹ್ಲಿ ಗರಿಷ್ಠ ಶತಕದ ದಾಖಲೆ
ಐಪಿಎಲ್ನಲ್ಲಿ ವಿರಾಟ್ 8 ಶತಕ ದಾಖಲಿಸಿ ಮೊದಲ ಸ್ಥಾನದಲ್ಲಿದ್ರೆ, 6 ಶತಕಗಳೊಂದಿಗೆ ಕ್ರಿಸ್ಗೇಲ್ ಹಾಗೂ ಜೋಸ್ ಬಟ್ಲರ್ 2ನೇ ಸ್ಥಾನದಲ್ಲಿದ್ದಾರೆ. 4 ಶತಕ ಸಿಡಿಸಿರುವ ಕೆ.ಎಲ್.ರಾಹುಲ್ 3ನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿ ಶತಕ ಸಿಡಿಸಿ ದಾಖಲೆಗಳನ್ನ ದಮನ ಮಾಡಿದ್ರು ನಿಜ. ಆದ್ರೆ, ಇದೇ ಸೆಂಚುರಿ ಪೂರೈಸುವ ಹಂತದಲ್ಲಿ ಆಡಿದ ಸ್ಲೋ ಇನ್ನಿಂಗ್ಸ್ ತಂಡದ ಹಿನ್ನಡೆ ಕೂಡ ಆಯ್ತು. ಅದೇನೆ ಇರಲಿ. ಜೈಪುರದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸದೇ ಇದ್ದಿದ್ರೆ, ಆರ್ಸಿಬಿ ಇನ್ನಷ್ಟು ಹೀನಾಯ ಸೋಲಿಗೆ ಶರಣಾಗ್ತಿತ್ತು ಅನ್ನೋದೂ ಅಷ್ಟೇ ಸತ್ಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ