ಧೋನಿ ದರ್ಶನಕ್ಕಾಗಿ ಅಭಿಮಾನಿಗಳ ದಂಡೇ ಸ್ಟೇಡಿಯಂಗೆ ಲಗ್ಗೆ
ಧೋನಿ ಕ್ರಿಕೆಟ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಆಗಿದ್ದಾರೆ
ಧೋನಿ ಎಂಟ್ರಿ ಕೊಟ್ರೆ ಸಾಕು ಕ್ರೇಜ್ ನೆಕ್ಸ್ಟ್ ಲೆವೆಲ್ಗೆ ತಲುಪುತ್ತಿದೆ.!
ಮಹೇಂದ್ರ ಸಿಂಗ್ ಧೋನಿ ದಿ ಲೆಜೆಂಡ್. ಐಪಿಎಲ್ ಇತಿಹಾಸದ ಸರ್ವ ಶ್ರೇಷ್ಠ ನಾಯಕ. ಐಪಿಎಲ್ನ ರೂಲರ್. ಈ ಸೀಸನ್ನಲ್ಲಿ ಆಟ ಮಂಕಾದ್ರು, ಮಾಹಿ ಮಾತ್ರ ಐಪಿಎಲ್ನ ಚಕ್ರವರ್ತಿಯೇ ಆಗಿದ್ದಾರೆ. ಧೋನಿ ದರ್ಶನಕ್ಕಾಗಿ ಅಭಿಮಾನಿಗಳ ದಂಡೇ ಸ್ಟೇಡಿಯಂಗೆ ಲಗ್ಗೆ ಇಡ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಂತೂ ಆರಾಧನೆ ನಡೀತಿದೆ.
ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ನಾಯಕನಾಗಿ ಧೋನಿ ಮಾಡಿದ ಮೋಡಿಯನ್ನ ಮರೆಯೋಕೆ ಸಾಧ್ಯವಿಲ್ಲ. ಸದ್ಯ, ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಧೋನಿ, ಕೆಳಕ್ಕಿಗಿಳಿದಿದ್ದಾರೆ. ಆದ್ರೂ, ಪ್ರಸಕ್ತ ಐಪಿಎಲ್ನಲ್ಲಿ ಧೋನಿಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಈ ಬಾರಿಯ ಐಪಿಎಲ್ನಲ್ಲಿ ಮತ್ತೆ ಮಾಹಿಯ ಜಾತ್ರೆ ನಡೀತಿದೆ. ಕಳೆದ ವರ್ಷದಂತೆ ಈ ಬಾರಿ ಮಿಸ್ಟರ್ ಕೂಲ್ ಧೋನಿ ಹೋದಲ್ಲಿ, ಬಂದಲ್ಲಿ ಜನ ಸಾಗರವೇ ಹರಿದು ಬರ್ತಿದೆ. ಧೋನಿ ಎಂಟ್ರಿ ಕೊಟ್ರೆ ಸಾಕು ಕ್ರೇಜ್ ನೆಕ್ಸ್ಟ್ ಲೆವೆಲ್ಗೆ ತಲುಪುತ್ತಿದೆ.
ಇದನ್ನೂ ಓದಿ: ಬ್ಯಾಟ್ನಿಂದಲೇ ಟೀಕೆಗಳಿಗೆ ಉತ್ತರಿಸಿದ ಕಿಂಗ್ ಕೊಹ್ಲಿ.. ವಿರಾಟ್ ಸೆಂಚುರಿ ಬಾರಿಸದಿದ್ರೆ RCB ಗತಿ ಏನಾಗುತ್ತಿತ್ತು?
42ರ ವಯಸ್ಸಿನಲ್ಲೂ ಧೋನಿ ದರ್ಬಾರ್..!
ಪ್ರಸಕ್ತ ಆವೃತ್ತಿಯಲ್ಲಿ ಜಸ್ಟ್ ಆಟಗಾರನಾಗಿ ಮಾತ್ರವೇ ಕಾಣಿಸಿಕೊಳ್ಳುತ್ತಿರುವ ಮಾಹಿ, ಏಜ್ ಇಸ್ ಜಸ್ಟ್ ನಂಬರ್ ಅನ್ನೋದನ್ನ ಫ್ರೂವ್ ಮಾಡ್ತಿದ್ದಾರೆ. 42ರ ವಯಸ್ಸಿನಲ್ಲೂ 22 ಯಾರ್ಡ್ನಲ್ಲಿ ಅದ್ಬುತವನ್ನೇ ಸೃಷ್ಟಿಸುತ್ತಿದ್ದಾರೆ. ಯುವ ಕ್ರಿಕೆಟಿಗರನ್ನ ನಾಚಿಸುವಂತೆ ವಿಕೆಟ್ ಹಿಂದೆ ಸ್ಟನ್ನಿಂಗ್ ಕ್ಯಾಚ್ಗಳನ್ನ ಪಡೆದು ಎಲ್ಲರನ್ನ ನಿಬ್ಬೆರಗಾಗಿಸಿದ್ದಾರೆ.
ಬ್ಯಾಟಿಂಗ್ನಲ್ಲಿ ಬೌಂಡರಿ, ಸಿಕ್ಸರ್ಗಳ ಸುರಿಮಳೆ ಗೈಯುತ್ತಿರುವ ಫಿನಿಷರ್ ಧೋನಿ, ಫ್ಯಾನ್ಸ್ ಮನ ಗೆಲ್ತಿದ್ದಾರೆ. ಈ ಪರ್ಫಾಮೆನ್ಸ್ ಅನ್ನ ಎಲ್ಲರ ಮೆಚ್ಚಿದ್ದಾರೆ. ಹಾಡಿ-ಕೊಂಡಾಡಿದ್ದಾರೆ. ಇದ್ರ ಜೊತೆಗೆ ಆಟದ ಹೊರತಾಗಿ ಮಾಹಿಯ ಹೊಸ ಲುಕ್ ಕೂಡ ಸೆನ್ಸೇಷನ್ ಸೃಷ್ಟಿಸಿದೆ.
ಐಪಿಎಲ್ನಲ್ಲಿ ಮನ ಗೆದ್ದ ಮಾಹಿ ಹೇರ್ ಸ್ಟೈಲ್!
ಪ್ರಸಕ್ತ ಐಪಿಎಲ್ನಲ್ಲಿ ಚೆನ್ನೈ ಮಾಜಿ ನಾಯಕನ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಹೊರತಾಗಿ ಎಲ್ಲರ ಗಮನ ಸೆಳೆದಿದ್ದು ಹೇರ್ಸ್ಟೈಲ್.. ಧೋನಿಯ ವಿಂಟೇಜ್ ಲುಕ್ ಕ್ರಿಕೆಟ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಫ್ಯಾನ್ಸ್ ಮಾತ್ರವಲ್ಲ. ಎದುರಾಳಿ ತಂಡಗಳ ಆಟಗಾರರೂ ಕೂಡ ಮಹಿಯ ಲಾಂಗ್ ಹೇರ್ಸ್ಟೈಲ್ಗೆ ಫಿದಾ ಆಗಿದ್ದಾರೆ. ಹೈದ್ರಾಬಾದ್ ಪಿಚ್ ಕ್ಯುರೇಟರ್ ಅಂತೂ, ಧೋನಿಯನ್ನ ರೋಮನ್ ಚಕ್ರವರ್ತಿಗೆ ಹೋಲಿಸಿದ್ದಾರೆ.
ಇದನ್ನೂ ಓದಿ: ತುಳಸಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು.. ಮನೆ ಅಂದವಷ್ಟೇ ಅಲ್ಲ, ಆರೋಗ್ಯಕ್ಕೂ ವೃಂದಾ ಬಹುಉಪಕಾರಿ
ಈ ಸೀಸನ್ ಐಪಿಎಲ್ನಲ್ಲಿ ಧೋನಿ ಏನೇ ಮಾಡಿದ್ರೂ, ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ. ಮೊನ್ನೆ ಒಂದು ಕಮರ್ಷಿಯಲ್ ಶೂಟ್ನಲ್ಲಿ ಒಂದು ಹಾಡು ಹೇಳಿದ್ರು.. ಅದಂತೂ, ಫೇಸ್ಬುಕ್, ಟ್ವಿಟರ್, ಇನ್ಸ್ಸ್ಟಾಗ್ರಾಂನಲ್ಲಿ ಧೂಳ್ ಎಬ್ಬಿಸಿದೆ.
ಹೈದ್ರಾಬಾದ್ ಪಿಚ್ ಕ್ಯುರೇಟರ್ ಹೇಳಿದಂತೆ ಮಾಹಿ ಒಬ್ಬ ಚಕ್ರವರ್ತಿಯೇ. ಇಡೀ ದೇಶದ ಉದ್ದಗಲದಲ್ಲಿ ಇರೋ ಅಭಿಮಾನಿಗಳು, ಯಾವುದೇ ಊರಿನ, ಯಾವುದೇ ಸ್ಟೇಡಿಯಂಗೆ ಎಂಟ್ರಿ ಕೊಟ್ಟರೂ ಸಿಗ್ತಿರೋ ಭವ್ಯ ಸ್ವಾಗತ. ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರ್ತಿರೋ ಅಭಿಮಾನಿಗಳೇ ಇದಕ್ಕೆ ಸಾಕ್ಷಿ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ