newsfirstkannada.com

ಇಟ್ಟಲ್ಲಿಯೇ 19 ಕೆಜಿ ಗಾಂಜಾ ಮಾಯ, ಇಲಿ ತಿಂದು ಕಿಕ್ಕೇರಿಸಿಕೊಂಡಿವೆ ಎಂದ ಪೊಲೀಸರು..!

Share :

Published April 8, 2024 at 8:01am

    ವಶಪಡಿಸಿಕೊಂಡು ಗೋದಾಮಿನಲ್ಲಿ ಇಟ್ಟಿದ್ದ 19 ಕೆಜಿ ಗಾಂಜಾ ಮಾಯ

    10 ಕೆಜಿ ಗಾಂಜಾ ಮತ್ತು 9 ಕೆಜಿ ಭಾಂಗ್ ಅನ್ನು ಇಲಿಗಳು ತಿಂದಿವೆ ಎಂದ ಪೊಲೀಸರು

    ಇದು 2018ರ ಕೇಸ್​.. ಕೋರ್ಟ್ ವಿಚಾರಣೆ ವೇಳೆ​ ಕೇಳಿದ ಪ್ರಶ್ನೆಗೆ ಪೊಲೀಸರು ಏನಂದ್ರು?

ಜಾರ್ಖಂಡ್:​​​ ಧನ್ಬಾದ್ ಪೊಲೀಸರು 5 ವರ್ಷದ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ ತಂದೆ-ಮಗನನ್ನು ಬಂಧಿಸಿದ್ದರು. ಅವರ ಬಳಿ ಇದ್ದ ಗಾಂಜಾವನ್ನು ವಶಪಡಿಸಿಕೊಂಡು ಗೋದಾಮಿನಲ್ಲಿ ಇರಿಸಿದ್ದರು. ಆದರೀಗ ಗೋದಾಮಿನಲ್ಲಿ ಇರಿಸಿದ್ದ ಗಾಂಜಾದಲ್ಲಿ 19 ಕೆ.ಜಿಯಷ್ಟು ಇಲಿಗಳು ತಿಂದಿವೆ ಎಂದು ಪೊಲೀಸರು ನ್ಯಾಯಾಲಕ್ಕೆ ತಿಳಿಸಿದ್ದಾರೆ.

ಶಂಭು ಅಗರ್ವಾಲ್​ ಮತ್ತು ಆತನ ಮಗನನ್ನು ಗಾಂಜಾ ಮಾರಾಟ ಆರೋಪದಡಿ ಡಿಸೆಂಬರ್​​ 14, 2018ರಲ್ಲಿ ಬಂಧಿಸಿದ್ದರು. ಅವರ ಬಳಿಯಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಆದರೆ ವಶಪಡಿಸಿಕೊಂಡ 10 ಕೆಜಿ ಗಾಂಜಾ ಮತ್ತು 9 ಕೆಜಿ ಭಾಂಗ್ ಅನ್ನು ಇಲಿಗಳು ತಿಂದಿವೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಿನ್ಸಿಪಾಲ್​ ಮತ್ತ ಸೆಷನ್​ ನ್ಯಾಯಾಧೀಶ ರಾಮ್​ಶರ್ಮಾ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ವಸ್ತುಗಳನ್ನು ಪ್ರದರ್ಶಿಸುವಂತೆ ತನಿಖಾಧಿಕಾರಿ ಜೈ ಪ್ರಸಾದ್​ ಅವರಿಗೆ ಸೂಚಿಸಿದ್ದರು. ಆದರೆ ಅವುಗಳನ್ನು ಇಲಿಗಳು ಸೇವಿಸಿದ್ದರಿಂದ ನ್ಯಾಯಾಲಯದ ಆದೇಶದಂತೆ ಪೊಲೀಸರಿಗೆ ವಸ್ತುಗಳನ್ನು ಪ್ರದರ್ಶಿಸಲು ಸಾಧ್ಯವಾಗಿಲ್ಲ. ಈ ಕುರಿತಾಗಿ ಇದೇ ಏಪ್ರಿಲ್​ 6ರಂದು ತನಿಖಾಧಿಕಾರಿ ವರದಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮೋದಿ ರೋಡ್​​ ಶೋ ವೇಳೆ ಏಕಾಏಕಿ ಕುಸಿದ ವೇದಿಕೆ.. ಹಲವರಿಗೆ ಗಾಯ

ಇನ್ನು ಶಂಭು ಮತ್ತು ಆತನ ಪರ ವಕೀಲರು ತಮ್ಮ ಕಕ್ಷಿದಾರನ ಬಗ್ಗೆ ತಪ್ಪಾಗಿ ಆರೋಪ ಮಾಡಿದ್ದಾರೆ. ಪೊಲೀಸರು ಜಪ್ತಿ ಮಾಡಿದ ವಸ್ತುಗಳನ್ನು ನೀಡಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ಕುರಿತು ತನಿಖೆ ಮುಂದುವರೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಟ್ಟಲ್ಲಿಯೇ 19 ಕೆಜಿ ಗಾಂಜಾ ಮಾಯ, ಇಲಿ ತಿಂದು ಕಿಕ್ಕೇರಿಸಿಕೊಂಡಿವೆ ಎಂದ ಪೊಲೀಸರು..!

https://newsfirstlive.com/wp-content/uploads/2024/04/Rat.jpg

Load More