newsfirstkannada.com

ನಿಂತಿದ್ದ ಕಸದ ಲಾರಿಗೆ ಭಯಾನಕವಾಗಿ ಡಿಕ್ಕಿ ಹೊಡೆದ ಕಾರು.. ಸ್ಥಳದಲ್ಲೇ ಟೆಕ್ಕಿ ಸಾವು, ನಾಲ್ವರು ಗಂಭೀರ

Share :

Published April 8, 2024 at 10:22am

Update April 8, 2024 at 10:24am

    ನಗರದಲ್ಲಿ ಉದ್ಯೋಗ ಮಾಡ್ತಿದ್ದ ಓರ್ವ ಯುವಕ ಸಾವು

    ಬಾಲಗತ್ತ್ ಜಂಕ್ಷನ್​ ಬಳಿ ವೇಗವಾಗಿ ಬಂದ ಕಾರು ಡಿಕ್ಕಿ

    ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

ಬೆಂಗಳೂರು: ಕಸದ ಲಾರಿಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಟೆಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ವೈಟ್​ಫೀಲ್ಡ್​ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಗತ್ತ್ ಜಂಕ್ಷನ್​ನಲ್ಲಿ ನಡೆದಿದೆ.

ಓಡಿಶಾ ಮೂಲದ ಸಾಗರ್ ( 23) ಸಾವನ್ನಪ್ಪಿದ ಯುವಕ. ನಿನ್ನೆ ರಾತ್ರಿ 10:30ರ ವೇಳೆ ಬಾಲಗತ್ತ್ ಜಂಕ್ಷನ್​ ಬಳಿ ವೇಗವಾಗಿ ಬಂದ ಐವರು ಪ್ರಯಾಣಿಕರಿದ್ದ ಕಾರು ಕಸದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಉಳಿದ ನಾಲ್ವರು ಟೆಕ್ಕಿಗಳು ಗಾಯಗೊಂಡಿದ್ದಾರೆ. ಇವರೆಲ್ಲ ಒಡಿಶಾ ಮೂಲದವರಾಗಿದ್ದಾರೆ.

ಇದನ್ನೂ ಓದಿ: ದೇವರ ಕೊರಳಲ್ಲಿದ್ದ ತಾಳಿ ಸರ ಕದ್ದ ಕಳ್ಳ, ದೇವತೆಗೆ ಕೈ ಮುಗಿದಂತೆ ಕಳ್ಳನಾಟಕವಾಡಿದ ಚೋರ..! ವಿಡಿಯೋ

ಸದ್ಯ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈಟ್​ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಂತಿದ್ದ ಕಸದ ಲಾರಿಗೆ ಭಯಾನಕವಾಗಿ ಡಿಕ್ಕಿ ಹೊಡೆದ ಕಾರು.. ಸ್ಥಳದಲ್ಲೇ ಟೆಕ್ಕಿ ಸಾವು, ನಾಲ್ವರು ಗಂಭೀರ

https://newsfirstlive.com/wp-content/uploads/2024/04/BBMP_LORRY.jpg

Load More