ಸದ್ಯ ನಡೆಯುತ್ತಿರೋ 2024ರ ಇಂಡಿಯನ್ ಪ್ರೀಮಿಯರ್ ಲೀಗ್
RCB ಫ್ಯಾನ್ಸ್ ವಿರುದ್ಧ ಬೇಸರ ಹೊರಹಾಕಿದ ದಿನೇಶ್ ಕಾರ್ತಿಕ್!
ಚೆನ್ನಾಗಿ ಆಡಲಿಲ್ಲ ಎಂದರೆ ಫ್ಯಾಮಿಲಿ ಬಗ್ಗೆ ಮಾತಾಡ್ತಾರೆ ಎಂದ್ರು
ಸದ್ಯ ನಡೆಯುತ್ತಿರೋ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ಯಾಕ್ ಟು ಬ್ಯಾಕ್ 4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಒಬ್ಬರೇ ಆರ್ಸಿಬಿಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದಾರೆ. ಇವರಿಗೆ ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ಕೂಡ ಸಾಥ್ ನೀಡುತ್ತಿದ್ದಾರೆ. ಈ ಮಧ್ಯೆ ಆರ್ಸಿಬಿ ಸೋತ ಬಳಿಕ ಅಭಿಮಾನಿಗಳ ರಿಯಾಕ್ಷನ್ ಹೇಗಿದೆ ಎಂಬ ಬಗ್ಗೆ ದಿನೇಶ್ ಕಾರ್ತಿಕ್ ಮಾತಾಡಿದ್ದಾರೆ.
ಆರ್ಸಿಬಿ ಫ್ಯಾನ್ಸ್ ಮೋಸ್ಟ್ ಲಾಯಲ್ ಫ್ಯಾನ್ಸ್. ಅವರು ನಮ್ಮ ಫ್ಯಾಮಿಲಿ. ನಾನು ಇದನ್ನು ಒಳ್ಳೆ ಮತ್ತು ಕೆಟ್ಟ ರೀತಿಯಲ್ಲೂ ಹೇಳುತ್ತಿದ್ದೇನೆ. ಒಳ್ಳೆ ವಿಚಾರ ಏನಂದ್ರು ನಾನು ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದಾಗ ನನ್ನ ಹೆಸರು ಕೂಗಿ ಚಿಯರ್ ಮಾಡುತ್ತಾರೆ. ಭೂಮಿ ಮೇಲೆ ನನಗಿಂತ ಗ್ರೇಟೆಸ್ಟ್ ಪ್ಲೇಯರ್ ಯಾರು ಇಲ್ಲ ಅನ್ನೋ ರೀತಿ ಭಾವನೆ ಮೂಡಿಸುತ್ತಾರೆ. ಬೇರೆ ಯಾರಾದ್ರೂ ನನ್ನನ್ನು ಟ್ರೋಲ್ ಮಾಡಿದ್ರೆ ಕೌಂಟರ್ ಮಾಡುತ್ತಾರೆ, ಎಂದಿಗೂ ತಲೆಬಾಗುವುದಿಲ್ಲ. ನನಗಾಗಿ ಬೇರೆ ಅವ್ರು ಒಳ್ಳೆ ಪ್ಲೇಯರ್ ಎಂದು ವಾದಿಸುತ್ತಾರೆ ಎಂದರು.
ಅದೇ ಫ್ಯಾನ್ಸ್ ಮತ್ತೆ ಬಂದು ನನ್ನ ಅಬ್ಯೂಸ್ ಮಾಡುತ್ತಾರೆ. ನಾನು ಚೆನ್ನಾಗಿ ಆಡಲಿಲ್ಲ ಎಂದರೆ ತುಂಬಾ ಕೆಟ್ಟದಾಗಿ ಬೈಯುತ್ತಾರೆ. ಕೇವಲ ನನ್ನನ್ನು ಮಾತ್ರವಲ್ಲ, ನನ್ನಿಡೀ ಫ್ಯಾಮಿಲಿ ಬಗ್ಗೆ ಮಾತಾಡುತ್ತಾರೆ ಎಂದು ಬೇಸರ ಹೊರಹಾಕಿದ್ರು.
ಇದನ್ನೂ ಓದಿ: ರೋಹಿತ್ VS ಕೊಹ್ಲಿ.. ಟಿ20 ವಿಶ್ವಕಪ್ಗೆ ಮೊದಲ ಆಯ್ಕೆ ಯಾರು ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್