‘ಮುರುಮ್’ ಮಣ್ಣಿನ ಹೊಂಡಕ್ಕೆ ಬಿದ್ದ ಖಾಸಗಿ ಬಸ್
ಕಂಪನಿ ಉದ್ಯೋಗಿಗಳನ್ನು ಹೊತ್ತೊಯ್ದು ಸಾಗುತ್ತಿದ್ದ ಖಾಸಗಿ ಬಸ್
30ಕ್ಕೂ ಹೆಚ್ಚು ಜನರಿದ್ದ ಬಸ್.. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು
ಛತ್ತೀಸ್ಗಢ: ಖಾಸಗಿ ಬಸ್ವೊಂದು ಅಪಘಾತಕ್ಕೀಡಾಗಿದ್ದು ಸುಮಾರು 11 ಜನರು ಸಾವನ್ನಪ್ಪಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ.
ಮಂಗಳವಾರದಂದು ದುರ್ಗ್ ಜಿಲ್ಲೆಯಲ್ಲಿ ‘ಮುರುಮ್’ ಮಣ್ಣಿನ ಹೊಂಡಕ್ಕೆ ಖಾಸಗಿ ಬಸ್ ಬಿದ್ದಿದೆ. ರಾತ್ರಿ 8:30ರ ಸುಮಾರಿಗೆ ಬಸ್ ಅಪಘಾತವಾಗಿದೆ. ಬಸ್ ಅಪಘಾತದಲ್ಲಿ 11 ಜನರು ಅಸುನೀಗಿದ್ದಾರೆ.
ಡಿಸ್ಟಿಲರಿ ಕಂಪನಿಯ ಉದ್ಯೋಗಿಗಳು ಬಸ್ನಲ್ಲಿ ಮನೆಗೆ ತೆರಳುತ್ತಿದ್ದರು. ಕುಮ್ಹಾರಿ ಪೊಲೀಸ್ ಠಾಣೆಯ ಖಾಪ್ರಿ ಗ್ರಾಮದ ಬಳಿ ಬಸ್ ಸಂಚರಿಸುವ ವೇಳೆ ಮಣ್ಣಿನ ಹೊಂಡಕ್ಕೆ ಬಿದ್ದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಬಿಸಿಲು ಎಂದು AC ಬಳಸೋರೆ ಎಚ್ಚರ! ಇದು ಎಷ್ಟು ಡೇಂಜರ್ಸ್ ಗೊತ್ತಾ?
ಇನ್ನು ಬಸ್ನಲ್ಲಿ 30ಕ್ಕೂ ಹೆಚ್ಚು ಜನರಿದ್ದರು. ಬಸ್ ಸ್ಕಿಡ್ ಆದ ಕಾರಣ 40 ಅಡಿ ಆಳದ ‘ಮುರುಮ್’ ಗಣಿಯಲ್ಲಿ ಹೋಗಿ ಬಿದ್ದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಮುರುಮ್’ ವಿಶೇಷ ಮಣ್ಣಾಗಿದ್ದು, ಅದನ್ನು ನಿರ್ಮಾಣ ಕೆಲಸಕ್ಕೆ ಬಳಸುತ್ತಾರೆ. ಆದರೆ ಆ ಪ್ರದೇಶದಕ್ಕೆ ಸಂಚರಿಸುತ್ತಿದ್ದಾಗ ಬಸ್ ಅಪಘಾತಕ್ಕೀಡಾಗಿದೆ. ಘಟನೆ ನಡೆದಂತೆ ಪೊಲೀಸ್ ತಂಡಕ್ಕೆ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಚರಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ