2022, 2023 ಮತ್ತು 2024ರಲ್ಲಿ ಹೆಚ್ಚು ಸಿಕ್ಸರ್ ಬಾರಿಸಿಕೊಂಡ ತಂಡ?
ವಾವ್ ಎನಿಸುವ ಬ್ಯಾಟ್ನಿಂದ ಸಿಡಿಯೋ ಸಿಕ್ಸರ್ಸ್ ಕಿಕ್ ಕೊಡುತ್ತೆ.!
IPLನಲ್ಲಿ ಒಟ್ಟು 88 ಬ್ಯಾಟ್ಸ್ಮನ್ಗಳಿಂದ ಬರೋಬ್ಬರಿ 446 ಸಿಕ್ಸರ್ಸ್
ಟಿ20 ಗೇಮ್.. ಇದು ಹೇಳಿ ಕೇಳಿ ಬ್ಯಾಟರ್ಗಳ ಗೇಮ್. ಇಲ್ಲಿ ಬ್ಯಾಟ್ ಎಂಬ ಮಂತ್ರ ದಂಡದಲ್ಲಿ ಸಿಕ್ಸರ್ ಹೊಡೆಯೋರಿಗೆ ಬೆಲೆ ಜಾಸ್ತಿ. ಆದ್ರೆ, ಇದೇ ಸಿಕ್ಸರ್ಗಳು ಕೆಲ ತಂಡಗಳ ಅಘಾತಕ್ಕೆ ಕಾರಣವಾಗಿದೆ. ಅದ್ಯಾಕೆ ಅಂತೀರಾ ಇಲ್ಲಿದೆ ಬಿಗ್ ಅಪ್ಡೇಟ್.
ಐಪಿಎಲ್ ಅಂದ್ರೆನೇ ರೋಚಕ ಮ್ಯಾಚ್ಗಳ ಹಬ್ಬದೂಟ. ಒಂದಕ್ಕಿಂತ ಇನ್ನೊಂದು ಸೂಪರ್ ಅನ್ನೋ ಮ್ಯಾಚ್ಗಳಿಗೆ ಸಾಕ್ಷಿಯಾಗುತ್ತೆ. ವಾವ್ ಎನಿಸುವಂತ ಬ್ಯಾಟಿಂಗ್, ಈ ವೇಳೆ ಸಿಡಿಯೋ ಸಿಕ್ಸರ್ಗಳು ಫ್ಯಾನ್ಸ್ಗೆ ಸಖತ್ ಕಿಕ್ ನೀಡುತ್ತೆ. ಗ್ಯಾಲರಿಯಲ್ಲಿ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ. ಆದ್ರೆ, ಬೌಲರ್ ವಿಚಾರಕ್ಕೆ ಬಂದ್ರೆ, ವೆರಿ ವೆರಿ ಬ್ಯಾಡ್. ಇದಕ್ಕೆ ಕಾರಣ ಪ್ರಸಕ್ತ ಆವೃತ್ತಿಯಲ್ಲಿ ಸಿಡಿದ ಸಿಕ್ಸರ್ಗಳು. ಐಪಿಎಲ್ ಸೀಸನ್-17ರಲ್ಲಿ ಇದುವರೆಗೆ 27 ಪಂದ್ಯಗಳು ಮುಕ್ತಾಯಗೊಂಡಿವೆ. 88 ಮಂದಿ ಬ್ಯಾಟರ್ಗಳಿಂದ ಬರೋಬ್ಬರಿ 446 ಸಿಕ್ಸರ್ಗಳು ಸಿಡಿದಿವೆ. ಆದ್ರೆ, ಇದೇ ಸಿಕ್ಸರ್ಗಳು ತಂಡಗಳ ಸಂಕಷ್ಟಕ್ಕೆ ಕಾರಣವಾಗಿದೆ. ಹೀಗಾದ್ರು ನಾನಾ.. ನೀನಾ ಎಂಬಂತೆ ಸಿಕ್ಸರ್ ಬಿಟ್ಟುಕೊಡ್ತಿವೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿಗೆ ಇದೇನಾ ಕಾರಣ..?
ಸಿಕ್ಸರ್ ಹೊಡೆಸಿಕೊಳ್ಳೋದ್ರಲ್ಲಿ RCBಯೇ ಫಸ್ಟ್.. ಹ್ಯಾಟ್ರಿಕ್ ವರ್ಷ
ಆರ್ಸಿಬಿ ಯಾವ ವಿಚಾರವನ್ನ ಚಾಚು ತಪ್ಪದೇ ಪಾಲಿಸುತ್ತೋ ಇಲ್ವೋ, ಆದ್ರೆ, ಈ ಸಿಕ್ಸರ್ಗಳನ್ನ ಬಿಟ್ಟುಕೊಡೊದನ್ನ ಮಾತ್ರ, ಪ್ರತಿ ವರ್ಷವೂ ಪಾಲಿಸುತ್ತೆ. ಯಾಕಂದ್ರೆ, 2022, 2023ರಲ್ಲಿ ಗರಿಷ್ಠ ಸಿಕ್ಸರ್ ಬಿಟ್ಟುಕೊಟ್ಟ ಅಪಖ್ಯಾತಿ ಹೊಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಸೀಸನ್ನಲ್ಲೂ ನಾನೇ ಫಸ್ಟ್ ಅಂತಿದೆ. ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ, ಪ್ರಸಕ್ತ ಟೂರ್ನಿಯಲ್ಲಿ ಅರ್ಧದಷ್ಟು ಪಂದ್ಯಗಳನ್ನ ಆಡುವ ಮುಂಚೆಯೇ ಸಿಕ್ಸರ್ ಬಿಟ್ಟುಕೊಡುವ ರೇಸ್ನಲ್ಲಿ ಮುಂದಿದೆ. ಇತರೆ ತಂಡಗಳಿಗೂ ಆರ್ಸಿಬಿಗೂ ಅಜಗಜಾಂತರ ವ್ಯತ್ಯಾಸವೇ ಇದೆ. ಬೌಲರ್ಗಳು ನೀಡಿರುವ ಈ ಸಿಕ್ಸರ್ಗಳಿಂದಲೇ ಆರ್ಸಿಬಿ, ಅಂಕಪಟ್ಟಿಯಲ್ಲಿ ಲಾಸ್ಟ್ಗೆ ಕುಸಿದಿದೆ.
ಸಿಕ್ಸರ್ ನೀಡಿದ ಟಾಪ್-5 ಟೀಮ್ಸ್..!
ಪ್ರಸಕ್ತ ಐಪಿಎಲ್ನಲ್ಲಿ 6 ಪಂದ್ಯಗಳನ್ನಾಡಿರಯವ ಆರ್ಸಿಬಿ, ಬರೋಬ್ಬರಿ 65 ಸಿಕ್ಸರ್ ಬಿಟ್ಟುಕೊಟ್ಟಿದ್ರೆ. ಸನ್ ರೈಸರ್ಸ್ ಹೈದ್ರಾಬಾದ್ 5 ಪಂದ್ಯಗಳಿಂದ 54 ಸಿಕ್ಸರ್ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ 5 ಪಂದ್ಯಗಳಿಂದ ಕ್ರಮವಾಗಿ 53, 47 ಸಿಕ್ಸರ್ ಬಿಟ್ಟುಕೊಟ್ಟಿದ್ರೆ. ಗುಜರಾತ್ ಟೈಟನ್ಸ್ 6 ಪಂದ್ಯಗಳಿಂದ 46 ಸಿಕ್ಸರ್ಗಳನ್ನ ಮಾತ್ರವೇ ನೀಡಿದೆ.
ಇದನ್ನೂ ಓದಿ: ಇಂದು ಚಾಂಪಿಯನ್ಗಳ ಕಾಳಗ.. ಚೆನ್ನೈ ಸೂಪರ್ ಕಿಂಗ್ಸ್ಗೆ ಚಮಕ್ ಕೊಡ್ತಾರಾ ರೋಹಿತ್ ಶರ್ಮಾ, ಪಾಂಡ್ಯ?
ಯಾವ ತಂಡ ಎಷ್ಟು ಸಿಕ್ಸರ್ ನೀಡಿದೆ..?
ಕೊಲ್ಕತ್ತಾ ನೈಟ್ ರೈಡರ್ಸ್ 4 ಪಂದ್ಯಗಳಿಂದ 41 ಸಿಕ್ಸರ್ ಬಿಟ್ಟುಕೊಟ್ಟಿದ್ರೆ. ಲಕ್ನೋ, ಪಂಜಾಬ್ 5 ಪಂದ್ಯಗಳಿಂದ ಕ್ರಮವಾಗಿ 41, 38 ಸಿಕ್ಸ್ ಬಿಟ್ಟುಕೊಟ್ಟಿದೆ. ಇನ್ನು ಚೆನ್ನೈ 5 ಪಂದ್ಯಗಳಿಂದ 30 ಸಿಕ್ಸರ್ ನೀಡಿದ್ರೆ, ರಾಜಸ್ಥಾನ್ ರಾಯಲ್ಸ್ ಕೇವಲ 29 ಸಿಕ್ಸರ್ ನೀಡಿದೆ.
ಸಿಕ್ಸರ್ ಬಿಟ್ಟುಕೊಡದವರು ಅಂಕಪಟ್ಟಿಯಲ್ಲಿ ಟಾಪ್..!
ಒಂದ್ಕಡೆ ಸಿಕ್ಸರ್ ಬಿಟ್ಟವರು ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿಯುತ್ತಿದ್ರೆ. ಇತ್ತ ಸಿಕ್ಸರ್ಗಳಿಗೆ ಕಡಿವಾಣ ಹಾಕಿರುವ ತಂಡಗಳು, ಪಾಯಿಂಟ್ ಟೇಬಲ್ನಲ್ಲಿ ಅಗ್ರಜರಾಗಿ ಮೆರೆಯುತ್ತಿವೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ರಾಜಸ್ಥಾನ್ ರಾಯಲ್ಸ್. ಅತಿ ಕಡಿಮೆ ಸಿಕ್ಸರ್ ಬಿಟ್ಟುಕೊಟ್ಟಿರುವ ಈ ತಂಡ, ಅಂಕಪಟ್ಟಿಯಲ್ಲಿ ನಂಬರ್.1 ಸ್ಥಾನದಲ್ಲಿದೆ. ಇದು ಸಹಜವಾಗೇ ಆರ್ಸಿಬಿ, ಹಿನ್ನಡೆಗೆ ಬೌಲರ್ಗಳೇ ಕಾರಣ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ. ಬೌಲರ್ಗಳ ದುಬಾರಿ ಆಟಕ್ಕೆ ಈಗಾಗಲೇ ಬೆಲೆ ತೆತ್ತಿರುವ ಆರ್ಸಿಬಿ ಪುಟಿದೇಳಬೇಕಾದ್ರೆ, ಬೌಲರ್ಗಳ ಫಾರ್ಮ್ ಬಹುಮುಖ್ಯವಾಗಿದೆ. ಇನ್ನಾದ್ರು ಸ್ಟ್ರಾಂಗ್ ಕಮ್ಬ್ಯಾಕ್ ಮಾಡ್ತಾರಾ ಅನ್ನೋದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ