ಇಂದು ಆರ್ಸಿಬಿ, ಸನ್ರೈಸರ್ಸ್ ಹೈದರಾಬಾದ್ ಹೈವೋಲ್ಟೇಜ್ ಪಂದ್ಯ!
ಆರ್ಸಿಬಿ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಭರ್ಜರಿ ಗೆಲುವು
ಆರ್ಸಿಬಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಫಿನಿಶರ್ ದಿನೇಶ್ ಕಾರ್ತಿಕ್
ಇಂದು ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ರೈಸರ್ಸ್ ಹೈದರಾಬಾದ್ 25 ರನ್ನಿಂದ ಗೆದ್ದು ಬೀಗಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರೀಡಾಂಗಣ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ನಿಗದಿತ 20 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 287 ರನ್ ಕಲೆ ಹಾಕಿದೆ. ಈ ಮೂಲಕ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ಇನ್ನು, ಹೈದರಾಬಾದ್ ನೀಡಿದ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಉತ್ತಮ ಆರಂಭ ಪಡೆದುಕೊಂಡಿದೆ. ಆರ್ಸಿಬಿ ಪರ ಓಪನರ್ಸ್ ಆಗಿ ಬಂದ ವಿರಾಟ್ ಕೊಹ್ಲಿ, ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು.
ವಿರಾಟ್ ಕೊಹ್ಲಿ ಅಂತೂ ಹೈದರಬಾದ್ ಬೌಲರ್ಗಳ ಬೆಂಡೆತ್ತಿದ್ರು. ತಾನು ಎದುರಿಸಿದ ಕೇವಲ 20 ಬಾಲ್ನಲ್ಲಿ 2 ಸಿಕ್ಸರ್, 4 ಫೋರ್ ಸಮೇತ 42 ರನ್ ಚಚ್ಚಿ ವಿಕೆಟ್ ಒಪ್ಪಿಸಿದ್ರು. ಇನ್ನೊಂದೆಡೆ ಬ್ಯಾಟಿಂಗ್ ಮಾಡುತ್ತಿರೋ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಕೇವಲ 23 ಬಾಲ್ನಲ್ಲಿ 51 ರನ್ ಸಿಡಿಸಿದ್ರು. ಬರೋಬ್ಬರಿ 3 ಸಿಕ್ಸರ್, 6 ಫೋರ್ ಚಚ್ಚಿದ್ರು. ಇವರ ಸ್ಟ್ರೈಕ್ ರೇಟ್ 210ಕ್ಕೂ ಹೆಚ್ಚಿತ್ತು.
ಇನ್ನು, ಆರ್ಸಿಬಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ ಆರ್ಸಿಬಿಯನ್ನು ಗೆಲ್ಲಿಸಲು ಯತ್ನಿಸಿದ್ರು. ತಾನು ಆಡಿದ ಕೇವಲ 35 ಬಾಲ್ನಲ್ಲಿ ಬರೋಬ್ಬರಿ 7 ಸಿಕ್ಸರ್, 3 ಫೋರ್ ಸಮೇತ 83 ರನ್ ಸಿಡಿಸಿದ್ರು. ಇವರ ಸ್ಟ್ರೈಕ್ ರೇಟ್ ಬರೋಬ್ಬರಿ 240 ಇತ್ತು. ಮಹಿಪಾಲ್ ಲೋಮ್ರೋರ್ 19, ಅನೂಜ್ ರಾವತ್ 25 ರನ್ ಗಳಿಸಿದ್ರೂ ಆರ್ಸಿಬಿ 262 ರನ್ ಪೇರಿಸಲು ಸಹಾಯವಾಯ್ತು.
ಇದನ್ನೂ ಓದಿ: 6,6,6,4,4,4,4,4,4; ಕೇವಲ 23 ಬಾಲ್ನಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ ಕ್ಯಾಪ್ಟನ್ ಫಾಫ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್