ಆನ್ಲೈನ್ ಗೇಮ್ ’ಫ್ರೀ ಫೈರ್’ನಿಂದ ಕಾರಿಗೆ ಫೈರ್
‘ಫ್ರೀ ಫೈರ್’ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಯುವಕ
ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಆನ್ಲೈನ್ ಗೇಮ್ನಿಂದ ಗಲಾಟೆ ಶುರುವಾಗಿ ಕೊನೆಗೆ ಯೋಧನ ಕಾರಿಗೆ ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ. ಈ ದುಶ್ಕೃತ್ಯವೆಸಗಿದ ವ್ಯಕ್ತಿಯನ್ನು ಬಬ್ಲು ಖೇಮ್ರಿಯಾ ಎಂದು ಗುರುತಿಸಲಾಗಿದೆ.
ಬಬ್ಲು ಖೇಮ್ರಿಯಾ ಆನ್ಲೈನ್ ಗೇಮ್ ‘ಫ್ರೀ ಫೈರ್’ ಆಡುತ್ತಿದ್ದನು. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಕೂಡ ಮಾಡಿದ್ದನು. ಸೈನಿಕನ ಮಗಳು ಬಬ್ಲು ಖೇಮ್ರಿಯಾನಿಂದ ಫ್ರೀ ಫೈರ್ ಗೇಮ್ನ ಐಡಿಯನ್ನು ತೆಗೆದುಕೊಂಡು ಬಳಿಕ ಪಾಸ್ವರ್ಡ್ ಬದಲಿಸಿದ್ದಾಳೆ. ಕೊನೆಗೆ ಬಬ್ಲು ಖೇಮ್ರಿಯಾ ಕೇಳಿದಾಗ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆತ ಯುವತಿ ತಂದೆಯ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಬಬ್ಲು ಖೇಮ್ರಿಯಾ ಕಾರಿಗೆ ಬೆಂಕಿ ಹಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಆಧರಿಸಿ ಯೋಧನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಆರೋಪಿಯ ಮೇಲೆ ಪೊಲೀಸರು ಏಫ್ಐಆರ್ ದಾಖಲಿಸಿದ್ದಾರೆ. ಆದರೆ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: ರಾಮ ನವಮಿ ಮೆರವಣಿಗೆ ವೇಳೆ ಸ್ಫೋಟ, ಕಲ್ಲು ತೂರಾಟ.. ಓರ್ವ ಮಹಿಳೆ ಗಂಭೀರ
ಬಬ್ಲು ಖೇಮ್ರಿಯಾ ಯೋಧನ ಮನೆಯ ಮುಂದೆ ನಿಲ್ಲಿಸಿದ್ದ ಸ್ವಿಫ್ಟ್ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಪೆಟ್ರೋಲ್ ಸುರಿದು ಬೆಂಕಿ ಕೊಟ್ಟಿದ್ದಾನೆ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ