ಕೊಹ್ಲಿ, ಮ್ಯಾಕ್ಸ್ವೆಲ್, ಡುಪ್ಲೆಸಿಗೆ ಏನ್ ಟಿಪ್ಸ್ ಕೊಡೋಕೆ ಸಾಧ್ಯ?
ಆರ್ಸಿಬಿ ಸಾಲು ಸಾಲು ಸೋಲಿಗೆ ಕಾರಣರಾದ್ರಾ ಕೋಚ್?
ಆರ್ಸಿಬಿ ಬ್ಯಾಟಿಂಗ್ ಕೋಚ್ ಯಾರು? ಅವರ ಹಿನ್ನೆಲೆ ಏನು?
ಆಡಿದ 7 ಪಂದ್ಯಗಳಲ್ಲಿ ಜಸ್ಟ್ 1 ಪಂದ್ಯ ಗೆದ್ದಿರುವ ಆರ್ಸಿಬಿ, ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆ ಸ್ಥಾನಕ್ಕೆ ಕುಸಿದಿದೆ. ಈ ಹೀನಾಯ ಪರ್ಫಾಮೆನ್ಸ್ನ ಬೆನ್ನಲ್ಲೇ, ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ.
RCB ದುಸ್ಥಿತಿಗೆ ಇವರೇ ಕಾರಣ
ಬ್ಯಾಟಿಂಗ್ ಕೋಚ್ ನೀಲ್ ಮೆಕೆಂಝಿ ಹಾಗೂ ಬೌಲಿಂಗ್ ಕೋಚ್ ಆ್ಯಡಂ ಗ್ರಿಫಿತ್ ಆರ್ಸಿಬಿ ಸೋಲಿಗೆ ಕಾರಣ ಎಂಬ ಕಿಡಿ ಹೊತ್ತಿಕೊಂಡಿದೆ. ಬ್ಯಾಟಿಂಗ್ ಕೋಚ್ ನೀಲ್ ಮೆಕೆಂಝಿ ಬೇರೆ ಯಾರೂ ಅಲ್ಲ. ಸೌತ್ ಆಫ್ರಿಕಾ ತಂಡದ ಮಾಜಿ ‘ಟೆಸ್ಟ್’ ಕ್ರಿಕೆಟಿಗ. ಟೆಸ್ಟ್ ಸ್ಪೆಷಲಿಸ್ಟ್ನ ತಂದು ಟಿ20 ಬ್ಯಾಟಿಂಗ್ ಕೋಚ್ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ? ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಿರನ್ ಪೊಲಾರ್ಡ್, ಸಿಎಸ್ಕೆಯಲ್ಲಿ ಮೈಕಲ್ ಹಸ್ಸಿಯಂತಹ ಟಿ20 ಲೆಜೆಂಡ್ಸ್ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಆದ್ರೆ ಆರ್ಸಿಬಿ ಡಿಫರೆಂಟ್. ಅದ್ಕೆ ಟೆಸ್ಟ್ ಸ್ಪೆಷಲಿಸ್ಟ್ ಕರೆದುಕೊಂಡು ಬಂದು ಟಿ20 ತಂಡಕ್ಕೆ ಬ್ಯಾಟಿಂಗ್ ಪಾಠ ಮಾಡೋಕೆ ಬಿಟ್ಟಿದ್ದಾರೆ.
ಇದನ್ನೂ ಓದಿ: ಗದಗದಲ್ಲಿ ಹತ್ಯೆಯಾದ ನಾಲ್ವರಲ್ಲಿ ಓರ್ವ ಬಿಜೆಪಿ ಕಾರ್ಯಕರ್ತ; ಇವರ ದತ್ತು ಮಗಳನ್ನೂ ಕೊಲೆಗೈದ ಪಾಪಿಗಳು
2, T20I ಪಂದ್ಯ ಆಡಿರೋದೇ ನೀಲ್ ಮೆಕೆಂಝಿಯ ಅನುಭವ
ಟೆಸ್ಟ್ ಸ್ಪೆಷಲಿಸ್ಟ್ ನೀಲ್ ಮೆಕೆಂಝಿ ವೈಟ್ ಬಾಲ್ ಕ್ರಿಕೆಟ್ ಆಡಿಲ್ಲ ಅಂತಿಲ್ಲ. ಇವರು ಒನ್ ಡೇ ಆಡಿದ್ದಾರೆ. ಅಲ್ಲಿ ಅವರ ಸ್ಟ್ರೈಕ್ರೇಟ್ 70ಕ್ಕಿಂತ ಕಡಿಮೆ. ಕೇವಲ 2 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿರೋ ಅನುಭವ ಇವರಿಗಿದೆ. ಇಂತಹ ಟ್ರ್ಯಾಕ್ ರೆಕಾರ್ಡ್ ಹೊಂದಿರೋ ನೀಲ್ ಮೆಕೆಂಝಿ, 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿರೋ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್, ಈಗಾಗಲೇ ಟಿ20 ಲೆಜೆಂಡ್ಗಳಾಗಿ ಬೆಳೆದಿರೋ ಫಾಫ್ ಡುಪ್ಲೆಸಿ, ದಿನೇಶ್ ಕಾರ್ತಿಕ್ರಂತವರಿಗೆ ಏನು ತಾನೆ ಹೇಳಿಕೊಡೋಕೆ ಸಾಧ್ಯ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ:ಐಪಿಎಲ್ನಲ್ಲಿ ಸತತ ಹೀನಾಯ ಸೋಲು, RCB ದುಸ್ಥಿತಿಗೆ ಇವರಿಬ್ಬರೇ ಪ್ರಮುಖ ಕಾರಣ..!
ದಕ್ಷಿಣ ಆಫ್ರಿಕಾ ಪರ 58 ಟೆಸ್ಟ್ ಪಂದ್ಯಗಳನ್ನು ಆಡಿರುವ ನೀಲ್ ಮೆಕೆಂಝಿ 94 ಇನ್ನಿಂಗ್ಸ್ ಆಡಿ, 3253 ರನ್ಗಳಿಸಿದ್ದಾರೆ. ಅತ್ಯಧಿಕ ಸ್ಕೋರ್ 226 ರನ್ ಆಗಿದ್ದು, ಐದು ಶತಕ, 16 ಅರ್ಧಶತಕ ಒಳಗೊಂಡಿದೆ. ಇನ್ನು 64 ಏಕದಿನ ಕ್ರಿಕೆಟ್ ಪಂದ್ಯ ಆಡಿರುವ ಇವರು, 37.51 ಸರಾಸರಿಯಲ್ಲಿ 1688 ರನ್ ಬಾರಿಸಿದ್ದಾರೆ. ಕೇವಲ 2 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿರುವ ಅವರು 7 ರನ್ ಬಾರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ