ಕೆಕೆಆರ್ ಎದುರು ವಿರಾಟ್ ಕೊಹ್ಲಿ ಟ್ರ್ಯಾಕ್ ರೆಕಾ್ಡ್ ಏನು ಹೇಳುತ್ತದೆ..?
ಸದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಟಾಪ್ ಕ್ಲಾಸ್ ಪರ್ಫಾಮೆನ್ಸ್ ನೀಡುತ್ತಿದೆ
ಈಡನ್ ಗಾರ್ಡನ್ಸ್ನಲ್ಲಿ ಆರ್ಸಿಬಿ ಕೊನೆಯದಾಗಿ ಗೆದ್ದಿದ್ದು ಯಾವ ವರ್ಷ?
ಕಿಂಗ್ ವಿರಾಟ್ ಕೊಹ್ಲಿಯೇ ಇಂದಿನ ಕೆಕೆಆರ್ VS ಆರ್ಸಿಬಿ ನಡುವಿನ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್. ಸತತ ಸೋಲಿನಿಂದ ಹತಾಶೆಗೆ ಒಳಗಾಗಿರೋ ಫ್ಯಾನ್ಸ್ ಮನದಲ್ಲಿ ಆರ್ಸಿಬಿ ಮೇಲೆ ಹೋಪ್ ಉಳಿದಿಲ್ಲ. ಹಾಗಂತ ಕೊಹ್ಲಿ ಮೇಲಿನ ಭರವಸೆ ಕಿಂಚಿತ್ತೂ ತಗ್ಗಿಲ್ಲ. ಇವತ್ತು ಈಡನ್ ಗಾರ್ಡನ್ನಲ್ಲೂ ಕಿಂಗ್ ಕೊಹ್ಲಿ ದರ್ಬಾರ್ ನಡೆಸ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.
ಆರ್ಸಿಬಿ VS ಕೆಕೆಆರ್ ದಂಗಲ್ಗೆ ವೇದಿಕೆ ಸಜ್ಜಾಗಿದೆ. ಸತತ ಸೋಲಿನಿಂದ ಕಂಗೆಟ್ಟಿರೋ ಆರ್ಸಿಬಿ ಪಾಳಯದಲ್ಲಿ ಆತ್ಮವಿಶ್ವಾಸಕ್ಕಿಂತ ಆತಂಕವೇ ಹೆಚ್ಚಾಗಿದೆ. ಬ್ಯಾಟ್ಸ್ಮನ್ಗಳ ಕಳಪೆ ಆಟ, ಬೌಲರ್ಗಳ ಹೀನಾಯ ಪ್ರದರ್ಶನ ತಂಡದಲ್ಲಿ ಟೆನ್ಶನ್ ಹೆಚ್ಚಿಸಿದೆ. ಆರ್ಸಿಬಿ ಹೋಲಿಸಿದ್ರೆ, ಎದುರಾಳಿ ಕೆಕೆಆರ್ ಟಾಪ್ ಕ್ಲಾಸ್ ಪರ್ಫಾಮೆನ್ಸ್ ನೀಡ್ತಿದೆ. ಆದ್ರೆ, ಕೊಲ್ಕತ್ತಾ ನೈಟ್ ರೈಡರ್ಸ್ ಪಾಳಯದಲ್ಲಿ ಭಯ ಕಾಡ್ತಿದೆ. ಆ ಭಯ ಹುಟ್ಟು ಹಾಕಿರೋದು ಬೇರಾರೂ ಅಲ್ಲ.. ಒನ್ & ಒನ್ಲಿ ಕಿಂಗ್ ವಿರಾಟ್ ಕೊಹ್ಲಿ.
ಬಲಿಷ್ಠ ಕೆಕೆಆರ್ಗೆ ಕಿಂಗ್ ಕೊಹ್ಲಿಯ ಭಯ.!
ಇದನ್ನೂ ಓದಿ: ಪೋಷಕರೇ ಎಚ್ಚರ! ಚಾಕೊಲೇಟ್ ತಿಂದು ರಕ್ತ ವಾಂತಿ ಮಾಡಿದ ಒಂದೂವರೆ ವರ್ಷದ ಮಗು; ಆಗಿದ್ದೇನು?
ಆರ್ಸಿಬಿ ಬ್ಯಾಟ್ಸ್ಮನ್ಗಳು ಇನ್ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಆರ್ಸಿಬಿ ಬೌಲರ್ಸ್ ಕಳಪೆ ಪ್ರದರ್ಶನ ನೀಡ್ತಿದ್ದಾರೆ. ಪಾಯಿಂಟ್ಸ್ ಟೇಬಲ್ನಲ್ಲಿ ಆರ್ಸಿಬಿ ಪಾತಾಳಕ್ಕೆ ಕುಸಿದಿದೆ. ಇದೆಲ್ಲವೂ ನಿಜ. ಆದ್ರೆ, ಇಡೀ ತಂಡ ವೈಫಲ್ಯ ಸುಳಿಗೆ ಸಿಲುಕಿರೋ ಸಂದರ್ಭದಲ್ಲಿ ವೀರ ಯೋಧನಂತೆ ಕಿಂಗ್ ಕೊಹ್ಲಿ ಏಕಾಂಗಿಯಾಗಿ ಹೋರಾಡ್ತಿದ್ದಾರೆ. ಇದೇ ಕೆಕೆಆರ್ ಕ್ಯಾಂಪ್ನಲ್ಲೂ ಆತಂಕ ಹುಟ್ಟಿಸಿದೆ.
ಕ್ಲಾಸ್ಗೆ ಕ್ಲಾಸ್.. ಮಾಸ್ಗೆ ಮಾಸ್.. ಕನ್ಸಿಸ್ಟೆಂಟ್ ಪರ್ಫಾಮೆನ್ಸ್.!
ಈ ಸೀಸನ್ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪರ್ಫಾಮೆನ್ಸ್ ಸಾಲಿಡ್ ಆಗಿದೆ. ಸಿಚ್ಯವೇಶನ್ಗೆ ತಕ್ಕಂತೆ ಸಖತ್ ಆಟವಾಡ್ತಿರೋ ವಿರಾಟ್, ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಆಡಿದ 7 ಇನ್ನಿಂಗ್ಸ್ಗಳಲ್ಲಿ ತಾಳ್ಮೆಯಿಂದ ಎಚ್ಚರಿಕೆಯಿಂದಲೂ ಆಡಿದ್ದಾರೆ. ಅಗ್ರೆಸ್ಸೀವ್ ಇಂಟೆಂಟ್ನಲ್ಲೂ ಘರ್ಜಿಸಿದ್ದಾರೆ. ಕಳೆದ ಹೈದ್ರಾಬಾದ್ ಎದುರಿನ ಪಂದ್ಯದಲ್ಲಂತೂ ಆಡಿದ್ದು ಖತರ್ನಾಕ್ ಆಟ..
ಕೋಲ್ಕತ್ತಾದಲ್ಲಿ ಕೊಹ್ಲಿ ಕಮಾಲ್, ಕೆಕೆಆರ್ಗೆ ಟೆನ್ಶನ್.!
ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಪವರ್ ಫುಲ್ ಆಟವಾಡಿದ್ರು. 210ರ ಸ್ಟ್ರೈಕ್ರೇಟ್ನಲ್ಲಿ ಘರ್ಜಿಸಿದ ಕೊಹ್ಲಿ, 20 ಎಸೆತಗಳಲ್ಲಿ 42 ರನ್ ಚಚ್ಚಿದ್ರು. ಒಟ್ಟಾರೆ ಈ ಐಪಿಎಲ್ನಲ್ಲಿ ಸಾಲಿಡ್ ಫಾರ್ಮ್ನಲ್ಲಿರೋ ಕೊಹ್ಲಿ, ಈಡನ್ ಗಾರ್ಡನ್ನಲ್ಲೂ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಆರ್ಸಿಬಿ ಕೊನೆಯದಾಗಿ ಈಡನ್ ಗಾರ್ಡನ್ಸ್ನಲ್ಲಿ ಗೆದ್ದಿದ್ದು 2019ರಲ್ಲಿ. ಅಂದು ಕೊಹ್ಲಿ ಶತಕದ ದರ್ಬಾರ್ ನಡೆಸಿದ್ರು.
ಇದನ್ನೂ ಓದಿ: ಗೆದ್ದರೆ ಫ್ಲೇ ಆಫ್ ಜೀವಂತ.. KKR ವಿರುದ್ಧ RCBಗೆ ಇಂದಾದ್ರೂ ಗೆಲುವು ಸಿಗುತ್ತಾ?
ಈಡನ್ ಗಾರ್ಡನ್ನಲ್ಲಿ ಕೊಹ್ಲಿ ಪ್ರದರ್ಶನ
ಈಡನ್ ಗಾರ್ಡನ್ನಲ್ಲಿ 11 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ 353 ರನ್ಗಳಿಸಿದ್ದಾರೆ. 126.97ರ ಡಿಸೆಂಟ್ ಸ್ಟ್ರೈಕ್ರೇಟ್ನಲ್ಲಿ 1 ಶತಕ, 1 ಅರ್ಧಶತಕ ಸಿಡಿಸಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 6 ಮಕ್ಕಳನ್ನ ಒಂದೇ ಬಾರಿ ಹೆತ್ತ ಮಹಾತಾಯಿ.. ಗಂಡ, ಕುಟುಂಬಸ್ಥರು ಫುಲ್ ಖುಷ್!
ಈ ಸೀಸನ್ನ ಮೊದಲ ಮುಖಾಮುಖಿಯಲ್ಲೂ ಕೊಲ್ಕತ್ತಾವನ್ನ ಕಾಡಿದ್ದು ಕೊಹ್ಲಿಯೇ. ಒಂದು ಪಂದ್ಯ ಮಾತ್ರವಲ್ಲ. ಕೊಹ್ಲಿ ಪರಾಕ್ರಮ ಈಡನ್ ಗಾರ್ಡನ್ಗೆ ಮಾತ್ರ ಸೀಮಿತವೂ ಆಗಿಲ್ಲ. ಕೆಕೆಆರ್ ಎದುರಿನ ಪಂದ್ಯ ಅಂದ್ರೆ ಸಾಕು ವಿರಾಟ್ ಕೊಹ್ಲಿ, ಕೆಚ್ಚೆದೆಯ ಹೋರಾಟ ನಡೆಸ್ತಾರೆ. ಇದನ್ನ ಈ ಹಿಂದಿನ ಟ್ರ್ಯಾಕ್ ರೆಕಾರ್ಡ್ ಹೇಳ್ತಿದೆ.
ಕೆಕೆಆರ್ ಎದುರು ಕೊಹ್ಲಿ ಪ್ರದರ್ಶನ
ಕೆಕೆಆರ್ ಎದುರು 30 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ನಡೆಸಿರುವ ಕೊಹ್ಲಿ 944 ರನ್ಗಳಿಸಿದ್ದಾರೆ. 1 ಶತಕ, 6 ಅರ್ಧಶತಕ ಸಿಡಿಸಿರುವ ಕೊಹ್ಲಿಯ ಸ್ಟ್ರೈಕ್ರೇಟ್ 130.92 ಆಗಿದೆ. ಒಂದೆಡೆ ಕೆಕೆಆರ್ಗೆ ಕೊಹ್ಲಿಯ ಭಯ ಕಾಡ್ತಿದೆ. ಇನ್ನೊಂದೆಡೆ ಸತತ ಸೋಲಿನಿಂದ ಕಂಗೆಟ್ಟಿರೋ ಆರ್ಸಿಬಿಯೂ ಕೊಹ್ಲಿಯೊಬ್ಬರನ್ನೇ ನೆಚ್ಚಿಕೊಂಡಿದೆ. ಕ್ರಿಕೆಟ್ ಲೋಕದ ಕಣ್ಣು ಕೂಡ ಕೊಹ್ಲಿಯ ಮೇಲೆ ನೆಟ್ಟಿದೆ. ಕಿಂಗ್ ಕೊಹ್ಲಿಯೇ ಇಂದಿನ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದು, ವಿರಾಟ್ ಇಂದು ಕಮಾಲ್ ಮಾಡ್ತಾರಾ.? ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ