ಸದ್ಯ ನಡೆಯುತ್ತಿರೋ ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಕ್ ಟು ಬ್ಯಾಕ್ 7 ಸೋಲು..!
ಆರ್ಸಿಬಿ ಕ್ಯಾಪ್ಟನ್ಸಿ ಸ್ಥಾನದಿಂದ ಫಾಫ್ ಅವರನ್ನು ಕಿತ್ತೊಗೆಯಬೇಕು ಎಂದು ಆಕ್ರೋಶ
ಸದ್ಯ ನಡೆಯುತ್ತಿರೋ ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಕ್ ಟು ಬ್ಯಾಕ್ 7 ಸೋಲು ಕಂಡಿದೆ. ಇನ್ನೂ 6 ಪಂದ್ಯ ಉಳಿದಿದ್ದು, ಈಗಾಗಲೇ ಆರ್ಸಿಬಿ ಪ್ಲೇ ಆಫ್ನಿಂದ ಬಹುತೇಕ ಹೊರಬಿದ್ದಿದೆ. ಇದರ ಮಧ್ಯೆ ಆರ್ಸಿಬಿ ಸೋಲಿಗೆ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಕಾರಣ. ಇವರನ್ನು ಆರ್ಸಿಬಿ ಕ್ಯಾಪ್ಟನ್ಸಿ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ ಈಡನ್ ಗಾರ್ಡೆನ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಕೆಕೆಆರ್, ಆರ್ಸಿಬಿ ಮಧ್ಯೆ ರೋಚಕ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಕೇವಲ 7 ರನ್ಗೆ ಔಟಾದ್ರು. ಇದರ ಪರಿಣಾಮ ಆರ್ಸಿಬಿ 1 ರನ್ನಿಂದ ಸೋಲಬೇಕಾಯ್ತು. ಕೊಹ್ಲಿ ಅಥವಾ ಫಾಫ್ ಇಬ್ಬರಲ್ಲಿ ಒಬ್ಬರು ಕೊನೆಯವರೆಗೂ ಕ್ರೀಸ್ನಲ್ಲಿ ಇರಬೇಕಿತ್ತು. ಆರ್ಸಿಬಿ ಸೋಲಿಗೆ ಇವರೇ ಕಾರಣ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದುವರೆಗೆ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಆಡಿರೋ 8 ಪಂದ್ಯಗಳಲ್ಲಿ ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಿಲ್ಲ. 8 ಪಂದ್ಯಗಳಲ್ಲಿ ಫಾಫ್ ಕೇವಲ 239 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಆವರೇಜ್ 30 ಇದ್ದು, ಸ್ಟ್ರೈಕ್ ರೇಟ್ ಕೇವಲ 150 ಇದೆ. ಕೇವಲ 25 ಫೋರ್, 10 ಸಿಕ್ಸರ್ ಸಿಡಿಸಿದ್ದಾರೆ. ಎರಡು ಪಂದ್ಯಗಳಲ್ಲಿ ಮಾತ್ರ ಅರ್ಧಶತಕ ಸಿಡಿಸಿದ್ದು, ಒಂದು ಪಂದ್ಯವೂ ಗೆಲ್ಲಿಸಿಲ್ಲ. ಕೇವಲ ಬ್ಯಾಟಿಂಗ್ ಮಾತ್ರವಲ್ಲ ಆನ್ಫೀಲ್ಡ್ ಡಿಸಿಷನ್ ತೆಗೆದುಕೊಳ್ಳುವುದರಲ್ಲೂ ಎಡವಿದ್ದು, ಇವರಿಗೆ ಆರ್ಸಿಬಿ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ ಎಂದು ಒತ್ತಡ ಹಾಕಲಾಗುತ್ತಿದೆ. ಫಾಫ್ ಡುಪ್ಲೆಸಿಸ್ಗೆ 39 ವರ್ಷ ಆಗಿದ್ದು, ಮುಂದಿನ ವರ್ಷ ರಿಟೈರ್ ಆಗೋ ಸಾಧ್ಯತೆ ಕೂಡ ಇದೆ.
ಇದನ್ನೂ ಓದಿ: ರೋಹಿತ್ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು? ಸ್ಟೋರಿ ಓದಿದ್ರೆ ಸರ್ಪ್ರೈಸ್ ಆಗ್ತೀರಾ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ