ಮತ್ತೊಮ್ಮೆ ಹೈದರಾಬಾದ್ ತಂಡ ಎದುರಿಸಲು ಆರ್ಸಿಬಿ ರೆಡಿ
ಕಳೆದ ಬಾರಿಯ ಪಂದ್ಯದಲ್ಲಿ ಐತಿಹಾಸಿಕ ರನ್ ಕಲೆ ಹಾಕಿದ್ದ SRH
SRH ವಿರುದ್ಧ 24 ಪಂದ್ಯಗಳಲ್ಲಿ 13 ಮ್ಯಾಚ್ನಲ್ಲಿ ಸೋತಿರುವ ಆರ್ಸಿಬಿ
ಐಪಿಎಲ್ನಲ್ಲಿ ಸತತ ಸೋಲುಗಳನ್ನು ಕಾಣುತ್ತಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಇಂದು ಮತ್ತೊಮ್ಮೆ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಎದುರಿಸುತ್ತಿದೆ. ಇಂದು ಸಂಜೆ 7.30ಕ್ಕೆ ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ಹಠಾತ್ ಹೃದಯಾಘಾತ, ಕುಸಿದುಬಿದ್ದು ಬಿಜೆಪಿ ಸಂಸದ ನಿಧನ; ಸಿಎಂ ಸಂತಾಪ
ಆರ್ಸಿಬಿ ವಿರುದ್ಧ ಕಳೆದ ಬಾರಿಯ ಪಂದ್ಯದಲ್ಲಿ ಹೈದರಾಬಾದ್ ತಂಡವು 287 ರನ್ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ ಆಗಿದೆ. ಇಲ್ಲಿಯವರೆಗೆ 8 ಪಂದ್ಯಗಳನ್ನು ಆಡಿರುವ ಆರ್ಸಿಬಿ, 7 ರಲ್ಲಿ ಸೋತು ಭಾರೀ ಮುಖಭಂಗ ಅನುಭವಿಸಿದೆ. ಹೀಗಾಗಿ ಇವತ್ತಿನ ಪಂದ್ಯವನ್ನು ಗೆಲ್ಲಲೇಬೇಕಿದೆ.
ಗೆಲುವಿನ ಹುಡುಕಾಟದಲ್ಲಿರುವ ಆರ್ಸಿಬಿ ಇವತ್ತು ಪ್ಲೇಯಿಂಗ್-11ರಲ್ಲಿ ಬದಲಾವಣೆ ಮಾಡಿದರೂ ಅಚ್ಚರಿ ಇಲ್ಲ. ವಿರಾಟ್ ಕೊಹ್ಲಿ, ವಿಲ್ ಜಾಕ್ಸ್, ರಜತ್ ಪಾಟಿದಾರ್, ಕೆಮರೂನ್ ಗ್ರೀನ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೋಮ್ರಾರ್, ಕರಣ್ ಶರ್ಮಾ, ಫೆರ್ಗುಸನ್, ಯಶ್ ದಯಾಳ್, ಮೊಹ್ಮದ್ ಸಿರಾಜ್ ಆಡಿದ್ದರು. ಸಿರಾಜ್ ಅವರು ಕಳೆದ ಬಾರಿ ತುಂಬಾನೇ ದುಬಾರಿ ಆಗಿದ್ದರು. ಹೀಗಾಗಿ ಅವರನ್ನು ಬೆಂಚ್ನಲ್ಲಿ ಕೂರಿಸಿದ್ದರೂ ಅಚ್ಚರಿ ಇಲ್ಲ. ಹೈದ್ರಾಬಾದ್ ವಿರುದ್ಧ ಆರ್ಸಿಬಿ ಒಟ್ಟು 24 ಪಂದ್ಯಗಳನ್ನು ಆಡಿದೆ. ಅದರಲ್ಲಿ 13 ಪಂದ್ಯಗಳಲ್ಲಿ ಸೋತು 10 ರಲ್ಲಿ ಗೆದ್ದುಕೊಂಡಿದೆ.
ಇದನ್ನೂ ಓದಿ:ವಿಶ್ವದ ಮೊದಲ ‘Miss AI’ ಸೌಂದರ್ಯ ಸ್ಪರ್ಧೆ, ಗೆದ್ದ ಸುಂದರಿಗೆ ಬಂಪರ್ ಲಾಟರಿ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್