ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್
ಮುಂದಿನ 5 ಪಂದ್ಯಗಳು ಗೆಲ್ಲಲು ಆರ್ಸಿಬಿ ತಂಡದಿಂದ ಮಾಸ್ಟರ್ ಪ್ಲಾನ್!
ಪ್ಲೇ ಆಫ್ಗೆ ಹೋಗಲು ಬೆಂಗಳೂರು ಟೀಮ್ ಮಾಡಬೇಕಾದ ಕೆಲಸವೇನು?
ಇತ್ತೀಚೆಗೆ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ರೋಚಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ. ಮುಂದಿನ 5 ಪಂದ್ಯಗಳು ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಆರ್ಸಿಬಿ ಮುಂದಾಗಿದೆ. ಅದರಲ್ಲೂ ಸುಮಾರು ಭಾರೀ ರನ್ಗಳಿಂದ ಗೆದ್ದು ರನ್ ರೇಟ್ ಹೆಚ್ಚಿಸಿಕೊಂಡರೆ ಪ್ಲೇ ಆಫ್ಗೆ ಹೋಗೋ ಅವಕಾಶ ಇನ್ನೂ ಇದೆ.
ಪ್ರತಿ ಪಂದ್ಯದಲ್ಲೂ ಆರ್ಸಿಬಿ ಟಾಸ್ ಗೆಲ್ಲಬೇಕು. ಮಿನಿಮಮ್ 220-250 ರನ್ ಟಾರ್ಗೆಟ್ ಕೊಡಬೇಕು. ಎಲ್ಲಾ ಪಂದ್ಯಗಳೂ ಕನಿಷ್ಠ 50-100 ರನ್ಗಳಿಂದ ಗೆಲ್ಲಬೇಕು. ಭಾರೀ ವಿಕೆಟ್ ಮತ್ತು ರನ್ಗಳಿಂದ ಗೆದ್ದರೆ ಆರ್ಸಿಬಿಗೆ ಪ್ಲೇ ಆಫ್ಗೆ ಹೋಗುವ ಅವಕಾಶ ಇದೆ ಎಂದು ಹೇಳಲಾಗುತ್ತಿದೆ.
9 ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ 7 ಪಂದ್ಯ ಸೋತಿರೋ ಆರ್ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ತಾನು ಆಡಿರೋ 9 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿ 4 ಅಂಕ ಪಡೆದುಕೊಂಡಿದೆ. ತಂಡದ ರನ್ ರೇಟ್ ಕೂಡ ಕಡಿಮೆ ಇದೆ.
ಈಗಾಗಲೇ ಅರ್ಧ ಸೀಸನ್ ಮುಗಿದಿದೆ. ಆರ್ಸಿಬಿ ಇನ್ನೂ 5 ಪಂದ್ಯಗಳು ಆಡಲಿದ್ದು. 5ಕ್ಕೆ 5 ಗೆಲ್ಲಬೇಕಿದೆ. ಆಗ ಆರ್ಸಿಬಿಗೆ 10 ಅಂಕ ದೊರೆಯಲಿದ್ದು, ಟೋಟಲ್ 14 ಪಾಯಿಂಟ್ಸ್ ಆಗಲಿವೆ. ಸಾಮಾನ್ಯವಾಗಿ 16 ಅಂಕ ಪಡೆದ್ರೆ ಪ್ಲೇ ಆಫ್ ಕನ್ಫರ್ಮ್. 14 ಅಂಕ ಪಡೆದ್ರೂ ಪ್ಲೇ ಆಫ್ಗೆ ಹೋಗಬಹುದು, ಅದು ಸಂಪೂರ್ಣ ಇತರ ತಂಡಗಳ ಪ್ರದರ್ಶನದ ಮೇಲೆ ಡಿಪೆಂಡ್ ಆಗಿರಲಿದೆ.
ಇದನ್ನೂ ಓದಿ: T20 ವಿಶ್ವಕಪ್; ಹೊಸ ಜವಾಬ್ದಾರಿ ಖುಷಿಯಲ್ಲಿದ್ದ ಕೊಹ್ಲಿಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ